ಅವ್ಯವಹಾರ ತನಿಖೆಗೆ ಸಿದ್ಧ: ಮಾಜಿ ಶಾಸಕ ನೇಮಿರಾಜ ತಿರುಗೇಟು
ಹಗರಿಬೊಮ್ಮನಹಳ್ಳಿ: ಬಸವ ವಸತಿ, ಕೆರೆ ಅಭಿವೃದ್ಧಿ, ಗಂಗಕಲ್ಯಾಣ ಯೋಜನೆ ಸೇರಿದಂತೆ ನಾನು ಶಾಸಕನಾಗಿದ್ದ ಅವಧಿಯಲ್ಲಿ ಕ್ಷೇತ್ರದಲ್ಲಿ ಜಾರಿಗೊಂಡಿರುವ ಎಲ್ಲ ಯೋಜನೆಗಳ ಬಗ್ಗೆ ತನಿಖೆಗೆ ನಾನು ಸಿದ್ಧನಿದ್ದು, ಯಾವುದೇ ಕ್ಷಣದಲ್ಲಾದರು ತನಿಖೆ ಆರಂಭಿಸಲಿ, ನಾನು ತನಿಖೆಯನ್ನು ಸ್ವಾಗತಿಸುತ್ತೇನೆ.
ಹೀಗೆಂದು ಹಾಲಿ ಶಾಸಕ ಎಸ್. ಭೀಮಾನಾಯ್ಕಗೆ ಪ್ರತಿ ಸವಾಲು ಹಾಕಿದವರು ಮಾಜಿ ಶಾಸಕ ಕೆ. ನೇಮಿರಾಜನಾಯ್ಕ. ಮಾಜಿ ಶಾಸಕ ನೇಮಿರಾಜ ನಾಯ್ಕ ಅವಧಿಯಲ್ಲಿ ಕ್ಷೇತ್ರದಲ್ಲಿ ಜಾರಿಗೊಂಡಿರುವ ಯೋಜನೆಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಅವ್ಯವಹಾರ ನಡೆದಿದೆ ಎಂದು ಹಾಲಿ ಶಾಸಕ ಭೀಮಾನಾಯ್ಕ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದ್ದರು. ಈ ಕುರಿತು ಬುಧವಾರ ಪ್ರತಿಕ್ರಿಯಿಸಿದ ಮಾಜಿ ಶಾಸಕ ನೇಮಿರಾಜ ನಾಯ್ಕ, ನನ್ನ ಅವಧಿಯಲ್ಲಿ ಅವ್ಯವಹಾರ ನಡೆದಿರುವುದು ಗೊತ್ತಿದ್ದರೆ ಇಷ್ಟು ತಡಯಾಕೆ ಮಾಡಬೇಕು? ಅಧಿಕಾರದಲ್ಲಿರುವ ಭೀಮಾನಾಯ್ಕ ಕೂಡಲೆ ತನಿಖೆಗೆ ಒಪ್ಪಿಸಲಿ. ಆಗ ಸತ್ಯಾಂಶ ಹೊರಬೀಳಲಿದ್ದು, ಜೈಲಿಗೆ ಹೋಗುವವರು ಯಾರೆಂದು ತಿಳಿಯುತ್ತದೆ ಎಂದರು.
ಭೂಮಿಪೂಜೆ ಸಮರ್ಥನೆ: ಬಿಜೆಪಿ ಸರ್ಕಾರದ ಅವಧಿಯಲ್ಲಿ ಚಿಲುವಾರಬಂಡಿ ಏತ ನೀರಾವರಿ ಯೋಜನೆಗೆ ಸಂಪುಟ ಒಪ್ಪಿಗೆ ಪಡೆದುಕೊಂಡು ಹಣಕಾಸು ಇಲಾಖೆಯಿಂದಲೂ ಅನುಮೋದನೆ ಪಡೆಯಲಾಗಿತ್ತು. ನಮ್ಮ ಸರ್ಕಾರದಿಂದ ಅನುಮೋದನೆಗೊಂಡ ಯೋಜನೆಗೆ ಶಾಸಕನಾಗಿ ಭೂಮಿಪೂಜೆ ನೇರವೇರಿಸಿರುವೆ. ಇವತ್ತು ಅನುಮೋದನೆ ಇಲ್ಲದಿದ್ದರೂ ಹಲವು ಕಾಮಗಾರಿಗಳಿಗೆ ಭೂಮಿಪೂಜೆ ಇಲ್ಲವೆ, ಅಡಿಗಲ್ಲು ಹಾಕಬಹುದು. ಇದು ಕಾನೂನು ಬಾಹಿರವಲ್ಲ ಎಂದು ತಿಳಿದು ತಾವು ಶಾಸಕರಾಗಿದ್ದ ಅವಧಿಯಲ್ಲಿ ಚಿಲುವಾರಬಂಡಿ ಏತನೀರಾವರಿ ಯೋಜನೆಗೆ ಭೂಮಿಪೂಜೆ ಮಾಡಿದ್ದೆ ಎಂದು ಸಮರ್ಥಿಸಿಕೊಂಡರು.
ಎಸ್ಇಪಿ- ಎಸ್ಟಿಪಿ ಯೋಜನೆಯಡಿ 42 ಕಾಮಗಾರಿಗಳನ್ನು ಹಿಂದಿನ ಸರ್ಕಾರದ ಅವಧಿಯಲ್ಲೇ ಮಂಜೂರಾಗಿ ಟೆಂಡರ್ ಕೂಡ ಕರೆಯಲಾಗಿದೆ. ಮೊದಲ ಹಂತದ ಕಾಮಗಾರಿ ಗುಣಮಟ್ಟದ ವಿಚಾರ ಮಾಡಿ, ಈಗ 2ನೇ ಹಂತದಲ್ಲಿ ಟೆಂಡರ್ ಆಗಿರುವ ಕಾಮಗಾರಿಗಳನ್ನು ತಡೆಹಿಡಿದಿರುವುದಕ್ಕೆ ಮಾಜಿ ಶಾಸಕ ತೀವ್ರ ಆಕ್ಷೇಪವ್ಯಕ್ತಪಡಿಸಿ, ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿಪಡಿಸುವುದನ್ನು ತೀವ್ರವಾಗಿ ಖಂಡಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

