ವಿಜಯಕುಮಾರ್ ಆಯ್ಕೆ
ಬಳ್ಳಾರಿ: ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಸಂಗನಕಲ್ಲು ವಿಜಯಕುಮಾರ್ ಆಯ್ಕೆಯಾಗಿದ್ದಾರೆ. ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಕಾರ್ಯಕರ್ತರ ಸಭೆಯಲ್ಲಿ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರು ಸಂಗನಕಲ್ಲು ವಿಜಯಕುಮಾರ್ರನ್ನು ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ನೇಮಿಸಿ ಆದೇಶ ನೀಡಿದ್ದಾರೆ. ಈ ಸಂದರ್ಭ ಕರವೇ ರಾಜ್ಯ ಕಾರ್ಯದರ್ಶಿ ಸಣ್ಣ ಈರಪ್ಪ, ಸಂಘಟನಾ ಕಾರ್ಯದರ್ಶಿ ಗುಜ್ಜಲ್ ನಾಗರಾಜ್, ಜಿಲ್ಲಾಧ್ಯಕ್ಷ ಬಸವರಾಜಸ್ವಾಮಿ, ಚಾನಾಳ್ ಶೇಖರ್, ಜಗನ್, ಶಿವಕುಮಾರ್, ದೇವರಾಜ, ಕೆ.ಬಿ. ಈಶ್ವರ್, ಕಿಶೋರ್, ಗಂಗಾಧರ, ಹುಬ್ಬಳ್ಳಿ ರಾಜು, ಮಹೇಶ್ ಬಣಕಾರ್, ಮೃತ್ಯುಂಜಯಸ್ವಾಮಿ, ಮಲ್ಲಿಕಾರ್ಜುನಸ್ವಾಮಿ ಇತರರು ಇದ್ದರು.
ನೀರಾವರಿ ಇಲಾಖೆ ಅಭಿಯಂತ ವರ್ಗಾವಣೆ
ಮುನಿರಾಬಾದ್: ಇಲ್ಲಿನ ನೀರಾವರಿ ಕೇಂದ್ರ ವಲಯದ ಕಚೇರಿಯಲ್ಲಿ ಸುಮಾರು ಐದು ವರ್ಷಗಳಿಂದ ಅಧೀಕ್ಷಕ ಅಭಿಯಂತರಾಗಿ ಕಾರ್ಯನಿರ್ವಹಿಸುತ್ತಿದ್ದ ಎಸ್.ಎಚ್. ಮಂಜಪ್ಪ ಅವರನ್ನು ಸರ್ಕಾರ ಆಲಮಟ್ಟಿಗೆ ವರ್ಗಾವಣೆ ಮಾಡಿದೆ ಹಾಗೂ ಅವರ ಸ್ಥಳಕ್ಕೆ ಎಂ.ಆರ್ ಶಿವಕುಮಾರ್ ಅವರನ್ನು ನೂತನ ಅಧೀಕ್ಷಕ ಅಭಿಯಂತರಾಗಿ ನೇಮಕ ಮಾಡಿದೆ. ಗುರುವಾರ ಮಂಜಪ್ಪ ಅವರಿಗೆ ಬೀಳ್ಕೊಡುಗೆ ಸಮಾರಂಭ ಹಾಗೂ ನೂತನ ಅಧೀಕ್ಷಕ ಅಭಿಯಂತಗೆ ಸ್ವಾಗತ ಸಮಾರಂಭ ಕಚೇರಿ ಸಿಬ್ಬಂದಿಯಿಂದ ಜರುಗಿತು. ಈ ಸಂದರ್ಭ ಎಸ್.ಎಚ್. ಮಂಜಪ್ಪ ಮಾತನಾಡಿ, ನಾವು ಮಾಡುವ ಕೆಲಸದಲ್ಲಿ ನಮ್ಮನ್ನು ನಾವು ತೊಡಗಿಸಿಕೊಂಡರೆ ಜನರು ಖಂಡಿತ ನಮ್ಮನ್ನು ಗುರುತಿಸುತ್ತಾರೆ ಎಂದರು. ಐದು ವರ್ಷದ ಹಿಂದೆ ತಾವು ಆಧೀಕ್ಷಕ ಅಭಿಯಂತರಾಗಿ ಬಂದಾಗ ತುಂಗಭದ್ರಾ ಕಾಲುವೆಯು ಪದೇ ಪದೇ ಬಿರುಕು ಬಿಡುತ್ತಿತ್ತು. ತಮ್ಮ ಅವಧಿಯಲ್ಲಿ ಕಾಲುವೆಗಳ ಆಧುನಿಕರಣ ನಡೆದಿದ್ದು, ಈಗ ಕಾಲುವೆ ಸುಸ್ತಿರವಾಗಿದೆ ಎಂದರು. ತುಂಗಭದ್ರಾ ಯೋಜನೆಯಲ್ಲಿ ಕೆಲಸ ಮಾಡುವುದು ಒಂದು ಹೆಮ್ಮೆ ವಿಷಯ ಎಂದರು. ಈ ಸಂದರ್ಭ ಕಾರ್ಯಪಾಲಕ ಅಭಿಯಂತರಾದ ಲಕ್ಷಪ್ಪ, ನಾಗಭೂಷಣ್, ಸಹಾಯಕ ಕಾಯರ್ಯಪಾಲಕ ಅಭಿಯಂತ ಬಸಪ್ಪ, ಅಭಿಯಂತರಾದ ಜಾನಕರ್, ಮಂಜುನಾಥ್ ನಾಯಕ್, ಗುರುರಾಜ, ನಿಬಂಧಕರಾದ ಹಾಲು ಅಪ್ಪಣ್ಣ, ರವಿಕುಮಾರ್, ರೈತ ಮುಖಂಡರಾದ ವೆಂಕಟ್ ನಾಯ್ಡು, ಸಮ್ಮ ಜಡಿಯಪ್ಪ ಹಾಗೂ ನೀರಾವರಿ ಇಲಾಖೆ ಸಿಬ್ಬಂದಿ ವರ್ಗ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು. ವಿದ್ಯಾ ಜೋಶಿ ಪ್ರಾರ್ಥಿಸಿದರು. ಸುರೇಶ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಉತ್ತಮ ಸಾಧನೆ ಮಾಡಿ: ಸುಭದ್ರಮ್ಮ ಮನ್ಸೂರ
ಬಳ್ಳಾರಿ: ವಿದ್ಯಾರ್ಥಿಗಳು ಕಾಲೇಜಿನ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಉತ್ತಮ ಸಾಧನೆಗೈಯ್ಯಬೇಕು ಎಂದು ರಂಗ ಕಲಾವಿದೆ ಸುಭದ್ರಮ್ಮ ಮನ್ಸೂರ ತಿಳಿಸಿದರು.
ನಗರದ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ ಶ್ರೀ ಗುರುತಿಪ್ಪೇರುದ್ರ ಮಹಾವಿದ್ಯಾಲಯದಿಂದ ಏರ್ಪಡಿಸಿದ್ದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ಈ ಮೊದಲು ವಿದ್ಯಾಭ್ಯಾಸಕ್ಕೆ ಇಷ್ಟೊಂದು ಸೌಲಭ್ಯಗಳು, ಅವಕಾಶ ಇರಲಿಲ್ಲ. ಆದರೆ ಇಂದು ಶೈಕ್ಷಣಿಕ ವ್ಯವಸ್ಥೆಯಲ್ಲಿ ಸಾಕಷ್ಟು ಬದಲಾವಣೆಯಾಗಿದ್ದು, ಸಾಕಷ್ಟು ಸೌಲಭ್ಯಗಳೊಂದಿಗೆ ಅವಕಾಶಗಳನ್ನೂ ತಂದೊಡ್ಡಿದೆ. ಕಾಲೇಜ್ನಲ್ಲಿ ಬೋಧಿಸಲು ಉತ್ತಮ ಉಪನ್ಯಾಸಕರು ಇದ್ದಾರೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಇಂತಹ ಅವಕಾಶ, ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಕಾಲೇಜಿನ ಕಾರ್ಯದರ್ಶಿ ಬಿ. ನಾಗರಾಜ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ಅಧ್ಯಕ್ಷ ಎಸ್.ಎನ್. ರುದ್ರಪ್ಪ, ಯೂನಿಕ್ ಫೋರಂ ಅಧ್ಯಕ್ಷ ಎಚ್.ಆರ್. ಬಾಲನಾಗರಾಜ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಉಪನ್ಯಾಸಕ ನೀಲಕಂಠ ಪರಿಚಯಿಸಿದರು. ವಿದ್ಯಾರ್ಥಿಗಳು ಸ್ವಾಗತಿಸಿ, ನಿರೂಪಿಸಿ, ವಂದಿಸಿದರು.
ಬಳಿಕ ಕಾಲೇಜು ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

