ಬಳ್ಳಾರಿ

ಸಾಹಿತ್ಯಕ್ಕೆ ಸಮಾಜ ತಿದ್ದುವ ಬದ್ಧತೆ ಇರಲಿ

Published On :

ಕನ್ನಡಪ್ರಭ ವಾರ್ತೆ, ಕುರುಗೋಡು, ಆ. 22
ಸಾಹಿತ್ಯಕ್ಕೆ ಸಮಾಜ ತಿದ್ದುವ ಬದ್ಧತೆ ಇರಬೇಕು. ಬದ್ಧತೆ ಇಲ್ಲದ ಸಾಹಿತ್ಯದಿಂದ ಸೃಜನಶೀಲ ಸಾಹಿತ್ಯ ಸೃಷ್ಟಿಸಲು ಸಾಧ್ಯವಿಲ್ಲ ಎಂದು ಹಂಪಿ ಸಾವಿರ ದೇವರಮಠದ ವಾಮದೇವ ಸ್ವಾಮೀಜಿ ತಿಳಿಸಿದರು.
ಪಟ್ಟಣದ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ಸಭಾಂಗಣದಲ್ಲಿ ಗೆಣಿಕಿಹಾಳ ಗ್ರಾಮದ ಸ್ಪಂದನ ಯುವ ವೇದಿಕೆ ಹಮ್ಮಿಕೊಂಡಿದ್ದ ಪಿ.ಬಿ. ನಾಗರಾಜ ಅವರ ರಚಿಸಿದ 'ಖಾಕಿಯೊಳಗೊಂದು ಕವಿ ಹೃದಯ' ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಕನ್ನಡದ ಶರಣ ಸಾಹಿತ್ಯ ಇಂದಿನ ಬರಹಗಾರರಿಗೆ ಸ್ಫೂರ್ತಿ ನೀಡಿದೆ. ಸಾಹಿತ್ಯಕ್ಕೆ ಸಮಾಜ ತಿದ್ದುವ ಬದ್ಧತೆ ಇದ್ದಲ್ಲಿ ಮಾತ್ರ ಸೃಜನಶೀಲ ಸಾಹಿತ್ಯ ಸೃಷ್ಟಿಯಾಗಲು ಸಾಧ್ಯ ಎಂದರು.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ನಿಷ್ಠಿ ರುದ್ರಪ್ಪ ಮಾತನಾಡಿ, ಕವಿತೆ ಅಭಿವ್ಯಕ್ತಿ ಮಾರ್ಗದ ಬಗ್ಗೆ ಅನೇಕ ಚಿಂತನೆಗಳಿವೆ. ಆದರೆ ಇದಾವುದನ್ನು ತಿಳಿಯದ ಜನಪದರು ಹೃದಯಸ್ಪರ್ಶಿ ಸಾಹಿತ್ಯ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಅನೇಕ ಹಿರಿಯ ಕವಿಗಳು ಸ್ಫೂರ್ತಿ ಪಡೆದಿದ್ದಾರೆ. ಆದರೆ ಜಾಗತೀಕರಣದಿಂದಾಗಿ ಮೊಬೈಲ್ ಸಂಭಾಷಣೆ ಸಾಹಿತ್ಯದ ರೂಪ ಪಡೆಯುತ್ತಿರುವುದು ವಿಷಾದದ ಸಂಗತಿ ಎಂದು ಖೇದ ವ್ಯಕ್ತಪಡಿಸಿದರು.
ಕವನ ಸಂಕಲನ ಬಿಡುಗಡೆ: ಕಾರ್ಯಕ್ರಮದಲ್ಲಿ ಪ್ರಭಾರಿ ಡಿವೈಎಸ್ಪಿ ವಿಕ್ರಂ ಆಮ್ಟೆ ಅವರು ಪಿ.ಬಿ. ನಾಗರಾಜ ಅವರ ಖಾಕಿಯೊಳಗೊಂದು ಕವಿ ಹೃದಯ ಎಂಬ ಕವನ ಸಂಕಲನ ಬಿಡುಗಡೆ ಮಾಡಿದರು. ಕ್ಷೇತ್ರ ಶಿಕ್ಷಣಾಧಿಕಾರಿ ಅಶೋಕ್‌ಕುಮಾರ್ ಸಿಂಧಗಿ, ಪಿಎಸ್‌ಐ ರಂಗಪ್ಪ ಮಾತನಾಡಿದರು. ಇದೇ ಸಂದರ್ಭದಲ್ಲಿ ವಾಮದೇವಶ್ರೀ ಹಾಗೂ ಪುಸ್ತಕ ಕರ್ತೃ ಪಿ.ಬಿ. ನಾಗರಾಜ ಅವರನ್ನು ವೇದಿಕೆ ಕಾರ್ಯಕರ್ತರು ಸನ್ಮಾನಿಸಿದರು.
ಅನಂತರ ನಡೆದ ಕವಿಗೋಷ್ಠಿಯಲ್ಲಿ ಶಿಕ್ಷಕ ಗೆಣಿಕಿಹಾಳ ಮಲ್ಲಿಕಾರ್ಜುನ, ಮಂಜುನಾಥ್, ರಂಗನಾಥ್, ಸಿರಿಗೇರಿ ನಾಗರಾಜ ಸ್ವಾಮಿ, ಕಲ್ಲುಕಂಭ ಮಲ್ಲಿಕಾರ್ಜುನ ಸ್ವರಚಿತ ಕಾವ್ಯ ವಾಚನ ಮಾಡಿದರು. ಈ ಸಂದರ್ಭದಲ್ಲಿ ಪದವಿಪೂರ್ವ ಕಾಲೇಜು ಉಪ ಪ್ರಾಚಾರ್ಯ ಎಚ್. ರವೀಂದ್ರ, ಕೊಳಗಲ್ ಪ್ರೌಢಶಾಲೆ ಮುಖ್ಯಗುರು ಕೆ. ಗಾದಿಲಿಂಗಪ್ಪ, ಬಾಲಕಿಯರ ಸರ್ಕಾರಿ ಪ್ರೌಢ ಶಾಲೆ ಮುಖ್ಯಗುರು ಎಂ. ಗಂಗಾಧರ, ಶಿಕ್ಷಕ ಡಿ. ಮಲ್ಲಿಕಾರ್ಜುನ, ಎಮ್ಮಿಗನೂರು ಗ್ರಾಮದ ಮುಖಂಡ ಸದಾಶಿವಪ್ಪ ಇದ್ದರು.  
ಸ್ಪಂದನ ವೇದಿಕೆಯ ಶೋಭಾ, ಪದ್ಮಾ, ಕಮಲ ಹಾಗೂ ಡಾ. ಯು.ಬಿ. ಶ್ರೀನಿವಾಸ್, ಆಶಾಪುರ ವಾಗೀಶ್, ಶ್ರೀಕಾಂತ್, ಎರ್ರಿಸ್ವಾಮಿ, ನೀಲಕಂಠ ನಿರ್ವಹಿಸಿದರು.
--
ಬೈಕ್ ಡಿಕ್ಕಿ: ಇಬ್ಬರ ಸಾವು
ಬಳ್ಳಾರಿ: ಬೈಕ್ ರಸ್ತೆ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರ ಯುವಕರು ಮೃತ ಪಟ್ಟಿರುವ ಘಟನೆ ನಗರದ ಎಂಆರ್‌ಕೆ ಫಂಕ್ಷನ್ ಹಾಲ್‌ನ ಮುಂಭಾಗದಲ್ಲಿ ನಡೆದಿದೆ.
ಕೌಲ್‌ಬಜಾರ್‌ನ ಕಪಿಲ್ ಅಹಮ್ಮದ್(20), ರಿಯಾನ್(20) ಮೃತ ಪಟ್ಟವರು. ಇನ್ನು ಸೈಫ್ ಅಲಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಮೂವರು ಆಕ್ಟಿವ್ ಹೊಂಡಾದಲ್ಲಿ ಆರ್‌ಟಿಓ ಕಡೆಯಿಂದ ಕೌಲ್‌ಬಜಾರ್ ಕಡೆಗೆ ಬರುತ್ತಿರುವ ಸಂದರ್ಭ ರೋಡ್ ಡಿವೈಡರ್‌ಗೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಪಿಲ್ ಅಹಮದ್ ಸ್ಥಳದಲ್ಲಿಯೇ ಮೃತ ಪಟ್ಟಿದ್ದರೆ, ರಿಯಾನ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಕುರಿತಾಗಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.