ಬಳ್ಳಾರಿ

ಕಡಿಮೆ ವೆಚ್ಚದಲ್ಲಿ ಶೋಲ್ಡರ್ ರಿಪ್ಲೇಸ್‌ಮೆಂಟ್ ಶಸ್ತ್ರಚಿಕಿತ್ಸೆ

Published On :

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಆ. 23
ಬಹು ವೆಚ್ಚದಾಯಕವಾದ ಅದು ದೇಶದ ಕೆಲವೇ ನಗರಗಳಲ್ಲಿ ಮಾತ್ರ ಲಭ್ಯವಿರುವ ಭುಜದ ಕೀಲು ಮೂಳೆ ಬದಲಾವಣೆ (ಶೋಲ್ಡರ್ ರಿಪ್ಲೇಸ್‌ಮೆಂಟ್) ಶಸ್ತ್ರ ಚಿಕಿತ್ಸೆಯನ್ನು ಅತ್ಯಂತ ಕಡಿಮೆ ವೆಚ್ಚದಲ್ಲಿ ಮೊಟ್ಟ ಮೊದಲಬಾರಿಗೆ ಹೈದ್ರಾಬಾದ್-ಕರ್ನಾಟಕ ಭಾಗದ ಬಳ್ಳಾರಿ ನಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಯಶಸ್ವಿಯಾಗಿ ನಡೆಸಲಾಗಿದೆ.
ಬೆಂಗಳೂರಿನಲ್ಲಿ ಈ ಚಿಕಿತ್ಸೆಯನ್ನು ಹೆಚ್ಚಾಗಿ ನಡೆಸಲಾಗುತ್ತಿದ್ದು, ಇದರ ವೆಚ್ಚ ಅಂದಾಜು ರು. 2.5 ಲಕ್ಷ. ಆದರೆ, ಇಷ್ಟೊಂದು ಹಣ ಖರ್ಚು ಮಾಡಿ ಚಿಕಿತ್ಸೆ ಪಡೆಯುವುದು ಬಡಜನರಿಗೆ ಮಾತ್ರ ಅಸಾಧ್ಯವೇ ಸರಿ. ಇಂಥ ಸಂದರ್ಭದಲ್ಲಿ ಬಳ್ಳಾರಿಯ ಸಂಜೀವಿನಿ ಆಸ್ಪತ್ರೆಯಲ್ಲಿ ಮಂಗಳವಾರ ವೈದ್ಯ ಮುಖೇಶ್ ಕುಡುಪಲಿ ಅವರ ನೇತೃತ್ವದಲ್ಲಿ ಡಾ. ಭುವನೇಶ್ವರ್ ಮಚಾನಿ, ಡಾ. ಶ್ರೀನಿವಾಸ್, ಡಾ. ಶಶಿಧರ ರೆಡ್ಡಿ ಅವರು 2 ಗಂಟೆಗಳಲ್ಲಿ ತಾಲೂಕಿನ ಹರಗಿನ ಡೋಣಿಯ 55 ವಯಸ್ಸಿನ ಸಿದ್ದನಗೌಡರ ಸವೆದು ಹೋಗಿದ್ದ ಭುಜದ ಕೀಲು ಮೂಳೆಯನ್ನು ಕತ್ತರಿಸಿ ಫ್ರಾನ್ಸ್‌ನಿಂದ ಆಮದು ಮಾಡಿಕೊಂಡ ಶೋಲ್ಡರ್ ಜಾಯಿಂಟ್‌ನ್ನು ಯಶಸ್ವಿಯಾಗಿ ಅಳವಡಿಸಿ ಶಸ್ತ್ರ ಚಿಕಿತ್ಸೆ ಮಾಡಲಾಗಿದೆ.
ಸಾಮಾನ್ಯವಾಗಿ ಜನರಲ್ಲಿ ದೇಹದ ಭಾರವನ್ನು ಹೊರುವ ಹಿಮ್ಮಡ, ಮೊಣಕಾಲು ಮತ್ತು ಚಪ್ಪೆಯ ಕೀಲು ಮೂಳೆ ಸವೆತ ಸಹಜ. ಸಕ್ಕರೆ ಮತ್ತು ಸಂಧಿವಾತ ಕಾಯಿಲೆಗಳಿಂದ ಮೂಳೆಗಳ ಸವೆತಕ್ಕೆ ಹೆಚ್ಚು ಕಾರಣ. ಇವುಗಳ ಬದಲಾವಣೆಯ ಚಿಕಿತ್ಸೆಯೂ ಬಹುತೇಕ ನಡೆಯುತ್ತಿದೆ. ಆದರೆ, ಕಾರ್ಯಚಟುವಟಿಕೆಗೆ ಹೆಚ್ಚು ಸಹಕಾರಿಯಾಗಬಲ್ಲ ಭುಜದ ಕೀಲು(ಶೋಲ್ಡರ್ ಜಾಯಿಂಟ್) ಮೂಳೆ ಸವೆತ ಕಡಿಮೆ. ಇಂಥ ಕೀಲು ಬದಲಾವಣೆ ಚಿಕಿತ್ಸೆ ಸಹ ದೇಶದ ಕೆಲವೇ ನಗರಗಳಲ್ಲಿ ಮಾತ್ರ ಲಭ್ಯವಿದ್ದು, ಮೊದಲ ಬಾರಿಗೆ ಹಿಂದುಳಿದ ಹೈದ್ರಾಬಾದ್-ಕರ್ನಾಟಕ ಭಾಗದ ಬಳ್ಳಾರಿ ನಗರದ ಸಂಜೀವಿನಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಬೆಂಗಳೂರು, ಕೊಯಮತ್ತೂರು, ಪುಣೆಗೆ ಮತ್ತಿತರೆಡೆ ದೂರದ ಸ್ಥಳಗಳಿಗೆ ತೆರಳಿ ಮಾಡಿಕೊಳ್ಳಬೇಕಿದ್ದ ಚಿಕಿತ್ಸೆಯನ್ನು ಬಳ್ಳಾರಿಯಲ್ಲಿ ತಾವು ಮೊದಲ ಬಾರಿಗೆ ಮಾಡಿದ್ದಕ್ಕೆ ಸಂತಸ ವ್ಯಕ್ತಪಡಿಸುತ್ತಾರೆ ಡಾ. ಮುಖೇಶ್ ಕುಡುಪಲಿ. ರು. 2.5 ಲಕ್ಷ ವೆಚ್ಚದ ಶೋಲ್ಡರ್ ರೀಪ್ಲೇಸ್‌ಮೆಂಟ್‌ನ್ನು ದೊಡ್ಡ ನಗರಗಳಷ್ಟೇ ಉತ್ತಮವಾಗಿ ತಮ್ಮ ಆಸ್ಪತ್ರೆಯಲ್ಲಿ ಕೇವಲ ರು. 75 ಸಾವಿರಗೆ ಮಾಡಿದೆ. ಇದರಿಂದ ಜನತೆಗೆ ಸಮಯ ಮತ್ತು ವೆಚ್ಚ ಎರಡು ಉಳಿತಾಯವಾಗುತ್ತದೆ ಎನ್ನುತ್ತಾರೆ ಆಸ್ಪತ್ರೆಯ ಮುಖ್ಯಸ್ಥ ಡಾ. ಶಶಿಧರ ರೆಡ್ಡಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.