ಬಳ್ಳಾರಿ: ಸೆ. 9ರಂದು ಗಣೇಶೋತ್ಸವ
ಬಳ್ಳಾರಿ: ವಿಶ್ವ ಹಿಂದೂ ಪರಿಷತ್ನ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯಿಂದ ನಗರದ ಡಾ. ರಾಜ್ಕುಮಾರ್ ರಸ್ತೆಯಲ್ಲಿರುವ ಸೆಂಟಿನರಿ ಸಭಾಂಗಣದಲ್ಲಿ ಸೆ. 9ರಂದು ವಿನಾಯಕನ ವಿಗ್ರಹ ಪ್ರತಿಷ್ಠಾಪಿಸುವ ಮೂಲಕ ಐದುದಿನ ಕಾಲ ಗಣೇಶೋತ್ಸವ ಕಾರ್ಯಕ್ರಮಗಳು ಜರುಗಲಿವೆ. ಸೆ. 9ರಂದು ಬೆಳಗ್ಗೆ 10.30ಕ್ಕೆ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮತ್ತು ಪೂಜೆ, ಸಂಜೆ 6ಕ್ಕೆ ಪೂಜಾ, ಶಮಂತಕೋಪಾಖ್ಯಾನ, ಭಜನೆ, ಸೆ. 10ರಂದು ಪೂಜೆ ಹಾಗೂ ಸಂಗೀತೋತ್ಸವ, ಸೆ.11ರಂದು ಸಂಜೆ ಭಜನೋತ್ಸವ, ಸೆ. 12ರಂದು ಸಂಜೆ 6.30ರಿಂದ ನೃತ್ಯೋತ್ಸವ, ಸೆ. 13ರಂದು ಮಧ್ಯಾಹ್ನ 1.30ರಿಂದ ಸಂಜೆ 7.30ರವರೆಗೆ ಶೋಭಾಯಾತ್ರೆ, ಗಣೇಶ ವಿಸರ್ಜನೆ ಕಾರ್ಯಕ್ರಮಗಳು ನಡೆಯಲಿವೆ. ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಇಚ್ಛಿಸುವವರು ಮೊ. 9036851961ಗೆ ಸಂಪರ್ಕಿಸಬಹುದು ಎಂದು ಸಮಿತಿಯ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಲ ಹೊರುವ ಪದ್ಧತಿ ವಿರೋಧಿಸಿ
ಹೊಸಪೇಟೆ: ಪೌರಕಾರ್ಮಿಕರು ತಮ್ಮ ಮಕ್ಕಳಿಗೆ ಶಿಕ್ಷಣ ನೀಡಬೇಕು ಎಂದು ನಗರಸಭೆ ಹೆಲ್ತ್ ಇನ್ಸ್ಪೆಕ್ಟರ್ ಶಶಿಭೂಷಣ್ ಹಿರೇಮಠ ಹೇಳಿದರು. ನಗರದ ಯಾತ್ರಿ ನಿವಾಸದಲ್ಲಿ ಶುಕ್ರವಾರ ಸ್ಲಂ ಜನಾಂದೋಲನ-ಕರ್ನಾಟಕ ಹಾಗೂ ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಸಂಯುಕ್ತಾಶ್ರಯದಲ್ಲಿ ನಡೆದ ಹೊಸಪೇಟೆಯ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಗಳು ಮತ್ತು ಸವಾಲುಗಳ ಕುರಿತು ಅಧ್ಯಯನ ಶಿಬಿರದಲ್ಲಿ ಮಾತನಾಡಿದರು. ಪೌರಕಾರ್ಮಿಕರು ಮಲ ಹೊರುವ ಪದ್ಧತಿ ವಿರೋಧಿಸಬೇಕು ಮತ್ತು ಹೊಸಪೇಟೆಯಲ್ಲಿ ಯಾರಾದರೂ ತಮ್ಮ ಮನೆ, ಹೋಟೆಲ್, ಲಾಡ್ಜ್ಗಳಲ್ಲಿ ತಮ್ಮ ಶೌಚಾಲಯಗಳನ್ನು ಮತ್ತು ಮಲದ ಗುಂಡಿಗಳಲ್ಲಿ ವ್ಯಕ್ತಿಗಳನ್ನು ಇಳಿಸಿದರೆ ಕಾನೂನು ಪ್ರಕಾರ ಅಪರಾಧವಾಗುತ್ತದೆ. ಪೌರಕಾರ್ಮಿಕರು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು, ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಲು ಮುಂದಾಗಬೇಕು ಎಂದರು. ಹೊಸಪೇಟೆ ಸ್ಲಂ ಸಮಿತಿ ಮುಖಸ್ಥೆ ಎನ್. ಹುಲಿಗೆಮ್ಮ ಮಾತನಾಡಿ, ಹೊಸಪೇಟೆಯ ಎಲ್ಲ ಗುತ್ತಿಗೆ ಕಾರ್ಮಿಕರಿಗೆ ಪಿಎಫ್ ಮತ್ತು ಇಎಸ್ಐ ಹಾಗೂ ಸರ್ಕಾರ ನಿಗದಿಪಡಿಸಿರುವ (ದಿನಕ್ಕೆ ರು. 216) ವೇತನ ನೀಡಬೇಕು. ಗುತ್ತಿಗೆ ಪದ್ಧತಿ ರದ್ದು ಮಾಡಿ ಸರ್ಕಾರವೇ ನೇರವಾಗಿ ನೇಮಿಸಿಕೊಂಡು ಪೌರ ಕಾರ್ಮಿಕರನ್ನು ಹಂತಹಂತವಾಗಿ ಕಾಯಂಗೊಳಿಸಬೇಕು. ಪ್ರತಿ 3 ತಿಂಗಳಿಗೆ ಆರೋಗ್ಯ ಶಿಬಿರ ಏರ್ಪಡಿಸಿ ಕಾರ್ಮಿಕರ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕೆಂದು ಹೇಳಿದರು. ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಸ್ಲಂ ಜನಜಾಗೃತಿ ಆಂದೋಲನ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ, ಹುನುಮಂತರಾಯ, ಹೊಸಪೇಟೆಯ ಗುತ್ತಿಗೆ ಪೌರಕಾರ್ಮಿಕರು ಪುಲ್ಲನ್ನ, ಗುರು, ಭಾಷಾ, ವೆಂಕಟೇಶ್ ಇತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

