ಬಳ್ಳಾರಿ

ಸಿರುಗುಪ್ಪ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ರಾಯರ ರಥೋತ್ಸವ

Published On :

ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಆ. 23
ಗುರು ರಾಘವೇಂದ್ರಸ್ವಾಮಿಗಳ 342ನೇ ಆರಾಧನಾ ಮಹೋತ್ಸವದ ನಿಮಿತ್ತ ಪಟ್ಟಣದ ವೇಣುಗೋಪಾಲಸ್ವಾಮಿ ದೇವಸ್ಥಾನದಲ್ಲಿ ಉತ್ತಾರಾಧನೆಯಲ್ಲಿ ರಾಯರ ರಥೋತ್ಸವ ವಿಜೃಂಭಣೆಯಿಂದ ಶುಕ್ರವಾರ ಜರುಗಿತು.
ಉತ್ತರಾರಾಧನೆಯಲ್ಲಿ ಗುರು ರಾಘವೇಂದ್ರಸ್ವಾಮಿಗಳಿಗೆ ಅಷ್ಟೋದಕ, ಪಂಚಾಮೃತಾಭಿಷೇಕ, ಮಹಾಮಂಗಳಾರತಿ ಜರುಗಿತು. ನಂತರ ಅಲಂಕೃತ ರಥದಲ್ಲಿ ರಾಯರ ಉತ್ಸವ ಮೂರ್ತಿಯನ್ನು ಸ್ಥಾಪಿಸಿದ ಬಳಿಕ ಶಾಸಕರ ಸಹೋದರ ಬಿ.ಎಂ. ವೆಂಕಟೇಶನಾಯಕ್ ರಾಯರನ್ನು ಪೂಜಿಸಿ ರಥೋತ್ಸವಕ್ಕೆ ಚಾಲನೆ ನೀಡಿದರು.
ರಥೋತ್ಸವದಲ್ಲಿ ವಾದಿರಾಜ, ಪರಿಮಳ ಮತ್ತು ಅಭಯಾಂಜಿನೇಯಸ್ವಾಮಿ ಭಜನಾ ಮಂಡಳಿಯವರು ರಾಯರ ಭಕ್ತಿಗೀತೆಗಳನ್ನು ಹಾಡಿದರು. ಪಟ್ಟಣ ಮುಖ್ಯಬೀದಿಯಲ್ಲಿ ರಥೋತ್ಸವ ತೆರಳಿ ನಂತರ ದೇವಸ್ಥಾನಕ್ಕೆ ಮರಳಿತು. ನಂತರ ರಾಯರ ತೊಟ್ಟಿಲು ಸೇವೆ ನೆರವೇರಿತು.
ವೈಶ್ಯ ಸಮಾಜದ ಹಿರಿಯ ಎಂ. ಪಂಪಾಪತಿಶೆಟ್ಟಿ, ಮುತ್ತಾಲಯ್ಯಶೆಟ್ಟಿ, ಕೆ. ಭುಜಂಗರಾವ್, ವೈ. ಗೋಪಾಲರಾವ್, ಜೆ. ರಾಮರಾವ್, ಎಚ್.ಕೆ. ಗೋಪಾಲರಾವ್, ಎಚ್. ವಸುಧೇಂದ್ರ, ಸಂಜಯಾಚಾರ್, ವೆಂಕಣ್ಣಾಚಾರ್, ಮಾಧವಾಚಾರ್, ವಸಂತರಾವ್, ಎನ್. ಪ್ರಹ್ಲಾದರಾವ್, ಮುರಳೀಧರ, ಪ್ರಸನ್ನ, ರಾಘವೇಂದ್ರರಾವ್, ಗುರುಪ್ರಸಾದ, ಜೆ. ಶ್ರೀನಿವಾಸಾಚಾರ್, ಜೆ. ಶ್ಯಾಮಾಚಾರ್, ಜೆ. ರವಿ ಇತರರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.