ಬೊಬ್ಬಕುಂಟೆ ಕೆರೆ ದುರಸ್ತಿಗೆ ಒತ್ತಾಯ: ಬಳ್ಳಾರಿ ಜಿಲ್ಲಾಧಿಕಾರಿಗೆ ಕರವೇ ಕಾರ್ಯಕರ್ತರ ಮನವಿ
ಬಳ್ಳಾರಿ: ತಾಲೂಕಿನ ಶಂಕರಬಂಡೆ ಗ್ರಾಮ ಪಂಚಾಯಿತಿಯ ಬೊಬ್ಬಕುಂಟೆ ಗ್ರಾಮದ ಕೆರೆ ದುರಸ್ತಿಗೊಳಿಸುವಂತೆ ಒತ್ತಾಯಿಸಿ, ಕರ್ನಾಟಕ ರಕ್ಷಣಾ ವೇದಿಕೆ (ಶಿವರಾಮೇಗೌಡ ಬಣ) ಯ ಕಾರ್ಯಕರ್ತರು ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಸಂಘದ ಜಿಲ್ಲಾಧ್ಯಕ್ಷ ಎಸ್.ಸುರೇಶ್ ಅವರು, ಬೊಬ್ಬಕುಂಟೆ, ಇಬ್ರಾಹಿಂಪುರ, ವಿಜಾಪುರ ಕ್ಯಾಂಪ್, ಶಂಕರಬಂಡೆ ಸೇರಿ ಒಟ್ಟು ನಾಲ್ಕು ಗ್ರಾಮಗಳಿಗೆ ಸಮರ್ಪಕ ನೀರೊದಗಿಸುವ ನಿಟ್ಟಿನಲ್ಲಿ ಬೊಬ್ಬಕುಂಟೆ ಗ್ರಾಮದಲ್ಲಿ ಮೂರು ವರ್ಷಗಳ ಹಿಂದೆ ಲಕ್ಷಾಂತರ ರು. ವೆಚ್ಚದಲ್ಲಿ ಕೆರೆ ನಿರ್ಮಿಸಿದೆ. ಆದರೆ, ಕೆರೆಗೆ ನೀರು ತುಂಬಿಸಲು ಮುಖ್ಯ ಕಾಲುವೆಯಿಂದ ಸಂಪರ್ಕ ಪಡೆಯುವ ಬದಲಿಗೆ ಉಪಕಾಲುವೆಯಿಂದ ನೀಡಲಾಗಿದೆ. ಹೀಗಾಗಿ ಹೊಲಗಳಿಗೆ ಸಮರ್ಪಕ ನೀರು ಹರಿಯದೆ, ಕುಡಿಯಲು ಸಮರ್ಪಕವಾಗಿ ದೊರೆಯುತ್ತಿಲ್ಲ. ಪರಿಣಾಮ ರೈತರು ಸುಗ್ಗಿ ದಿನಗಳಲ್ಲೇ ಸಂಕಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ ಎಂದು ಆರೋಪಿಸಿದರು.
ಸದ್ಯ ಉಪಕಾಲುವೆಯಿಂದ ನಿಗದಿತ ಸಮಯದಲ್ಲಿ ಕೆರೆಗೆ ನೀರು ತುಂಬಿಸಲು ಆಗಲ್ಲ. ವರ್ಷಾಂತ್ಯದಲ್ಲಿ ಕೆರೆಯಲ್ಲಿ ನೀರು ಸಂಪೂರ್ಣವಾಗಿ ಖಾಲಿಯಾಗಲ್ಲ. ಸುಮಾರು ನಾಲ್ಕು ಅಡಿ ನೀರು ಹಾಗೆ ನಿಲ್ಲುತ್ತಿದ್ದು, ಈ ನೀರು ಕೆರೆಯಿಂದ ಹೊರ ಹೋಗುವ ವ್ಯವಸ್ಥೆ ಮಾಡದೇ ಲೋಕೋಪಯೋಗಿ ಇಲಾಖೆ ನಿರ್ಲಕ್ಷ್ಯ ವಹಿಸಿದೆ. ಒಂದು ವೇಳೆ ಹಾಗೆ ನೀರು ತುಂಬಿಸಿದಲ್ಲಿ ಕೆರೆಯಲ್ಲಿ ಹೂಳು ಸಂಗ್ರಹಗೊಳ್ಳುತ್ತದೆ. ನೀರು ಕಲುಷಿತಗೊಳ್ಳುತ್ತವೆ. ಮೇಲಾಗಿ ಕೆರೆಗೆ ನೀರು ಶುದ್ಧೀಕರಣ ಘಟಕ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ಹೀಗಾಗಿ ಇಂತಹ ಗಡಸು ನೀರು ಕುಡಿದು ಅಸ್ವಸ್ಥರಾಗುವ ಮುನ್ನ ಸರ್ಕಾರ ಎಚ್ಚರಿಕೆ ವಹಿಸಿ ಮುನ್ನೆಚ್ಚರಿಕೆ ಕ್ರಮಕೈಗೊಳ್ಳುವಂತೆ ಡಿಸಿಗೆ ಸಲ್ಲಿಸಿದ ಮನವಿಯಲ್ಲಿ ಸುರೇಶ್ ಆಗ್ರಹಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

