ಸುದ್ದಿ ಸಂಕ್ಷೇಪ
ಎನ್‌ಎಂಡಿಸಿ ವಿರುದ್ಧ ಕಾನೂನು ಹೋರಾಟ
ಬೆಂಗಳೂರು: ಕೇಂದ್ರ ಸರ್ಕಾರ ಸ್ವಾಮ್ಯದ ನ್ಯಾಷನಲ್ ಮಿನರಲ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಕಂಪನಿ ಚೆಕ್‌ಡ್ಯಾಂ ಒಡೆದು ಸಂಡೂರಿನ ಭುಜಂಗ ನಗರ ಗ್ರಾಮದ ರೈತರಿಗೆ ಅನ್ಯಾಯವಾಗಿದ್ದು, ಮೂರು ವರ್ಷ ಕಳೆದರೂ ಅನ್ನದಾತರಿಗೆ ಇದುವರೆಗೂ ಪರಿಹಾರ ಸಿಕ್ಕಿಲ್ಲ. ರೈತರ ಬೆಳೆ ನಾಶಕ್ಕೆ ಕಾರಣವಾಗಿರುವ ಎನ್‌ಎಂಡಿಸಿ ಕಂಪನಿ ರೈತರಿಗೆ ಸೂಕ್ತ ಪರಿಹಾರ ಒದಗಿಸದೆ ರೈತರನ್ನು ಕಡೆಗಣಿಸಿದೆ. ಇದು ಹೀಗೆಯೇ ಮುಂದುವರಿದಲ್ಲಿ ಮುಂದಿನ ದಿನಗಳಲ್ಲಿ ಕಾನೂನು ಸಮರ ನಡೆಸಲಾಗುವುದು ಎಂದು ಜನತಾ ಪರಿವರ್ತನಾ ಸಮುದಾಯ ಹಾಗೂ ಎನ್‌ಸಿಪಿಎನ್‌ಆರ್ ಸಂಘದಮುಖಂಡ ಎಸ್.ಆರ್.ಹಿರೇಮಠ್ ಹೇಳಿದ್ದಾರೆ. ಶನಿವಾರ ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎನ್‌ಎಂಡಿಸಿ ಕಂಪನಿಗೆ ಸೇರಿದ ಚೆಕ್‌ಡ್ಯಾಂ ಒಡೆದಿದ್ದರಿಂದ ಅಲ್ಲಿನ ಸುಮಾರು 450 ಎಕರೆ ಜಮೀನಿನಲ್ಲಿದ್ದ ಬೆಳೆ ನಾಶವಾಗಿ, 181 ರೈತರಿಗೆ ತೊಂದರೆಯಾಗಿತ್ತು. ಈ ವೇಳೆ ಸುಮಾರು ರು. 1.23 ಕೋಟಿ ನಷ್ಟವಾಗಿತ್ತು. 2010ರ ಆಗಸ್ಟ್‌ನಲ್ಲಿ ಈ ಘಟನೆ ಸಂಭವಿಸಿತ್ತು. ಡ್ಯಾಂ ಒಡೆಯಲು ಗಣಿಗಾರಿಕೆ, ಕಳಪೆ ಕಾಮಗಾರಿ ಕಾರಣವಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಕೃಷಿ ಇಲಾಖೆ, ಸಣ್ಣ ನೀರಾವರಿ ಹಾಗೂ ಇತರೆ ಇಲಾಖೆಯ ಅಧಿಕಾರಿಗಳ ತಂಡ ಹಾನಿಯಾಗಿರುವ ಬಗ್ಗೆ ಸರ್ಕಾರಕ್ಕೆ ವರದಿ ನೀಡಿತ್ತು. ಆದರೆ, ಆ ವರದಿಯನ್ನು ಅಲ್ಲಗಳೆದಿರುವ ಕಂಪನಿಯ ಹಿರಿಯ ಅಧಿಕಾರಿ ಎಲ್.ಎನ್.ಮಾಥುರ್ ಅವರು, ಈ ಅನಾಹುತ ಪ್ರವಾಹದಿಂದ ಸಂಭವಿಸಿದ್ದು. ಅದಕ್ಕೂ ಕಂಪನಿಗೂ ಯಾವುದೇ ಸಂಬಂಧವಿಲ್ಲ ಎಂದು ನುಣುಚಿಕೊಳ್ಳಲು ಯತ್ನಿಸಿದ್ದಾರೆ. ಚೆಕ್‌ಡ್ಯಾಂ ಒಡೆದು ಹೋಗಿ ರೈತರಿಗಾಗಿರುವ ನಷ್ಟಕ್ಕೂ ತಮಗೂ ಸಂಬಂಧ ಇಲ್ಲ ಎನ್ನುವ ಅವರು ರೈತರಿಗೆ ರು. 17 ಲಕ್ಷ ಬಿಡುಗಡೆ ಮಾಡಿ, ತನಿಖಾ ತಂಡ ಸೂಚಿಸಿರುವ ಮೊತ್ತ ನೀಡಲು ಅವರು ನಿರಾಕರಿಸಿದ್ದು ವಿಶೇಷ. ರೈತರ ಅಳಲಿಗೆ ಸಂಬಂಧಿಸಿದಂತೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರೂ ಪ್ರಯೋಜನವಾಗಿಲ್ಲ. ಈ ಸಂಬಂಧ ಸಂಕಷ್ಟಕ್ಕೊಳಗಾಗಿರುವ ರೈತರು ಕಂಪನಿಯ ಮುಖ್ಯಸ್ಥರನ್ನು ಭೇಟಿ ಮಾಡಿ ಮನವಿ ನೀಡಿ, ಪ್ರತಿಭಟನೆಗಳನ್ನು ನಡೆಸಿದರೂ ಪ್ರಯೋಜನವಾಗಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಇನ್ನಾದರೂ ರೈತರ ಸಂಕಷ್ಟದತ್ತ ಕಿವಿಗೊಡಬೇಕು ಹಾಗೂ ಅವರಿಗೆ ಪರಿಹಾರದ ಹಣ ದೊರಕಿಸುವ ವ್ಯವಸ್ಥೆ ಮಾಡಬೇಕು ಎಂದು ಒತ್ತಾಯಿಸಿದರು.
ಪಟ್ಟಣ ಘಟಕಕ್ಕೆ ಆಯ್ಕೆ
ಕೂಡ್ಲಿಗಿ: ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಕೂಡ್ಲಿಗಿ ಪಟ್ಟಣ ಘಟಕದ ಅಧ್ಯಕ್ಷರಾಗಿ ಪಿ. ಜಯರಾಂ ನಾಯಕ ಇವರನ್ನು ವಾಲ್ಮೀಕಿ ಗುರುಪೀಠದ ಆದೇಶದ ಮೇರೆಗೆ ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ಉಪಾಧ್ಯಕ್ಷ ಎನ್. ಮುದ್ದಪ್ಪ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

