ಸಂತರ ಬಂಧನ: ವಿಎಚ್ಪಿ ಪ್ರತಿಭಟನೆ
ಕನ್ನಡಪ್ರಭ ವಾರ್ತೆ, ಹೊಸಪೇಟೆ, ಆ. 26
ಅಯೋಧ್ಯೆಯಲ್ಲಿ ನಡೆಯುವ ಚೌರಾಸಿ ಕೋಸಿ ಪರಿಕ್ರಮಣ ಯಾತ್ರೆಯನ್ನು ನಿಷೇಧಿಸಿ ಸಾವಿರಾರು ಸಾಧು-ಸಂತರನ್ನು ಬಂಧಿಸಿರುವ ಕ್ರಮ ಖಂಡಿಸಿ ಇಲ್ಲಿನ ವಿಶ್ವಹಿಂದೂ ಪರಿಷತ್ ಪದಾಧಿಕಾರಿಗಳು ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.
ಪ್ರತಿಭಟನಾ ಸಭೆಯನ್ನು ಉದ್ದೇಶಿಸಿ ವಿಶ್ವಹಿಂದೂ ಪರಿಷತ್ನ ಬಳ್ಳಾರಿ ವಿಭಾಗ ಕಾರ್ಯದರ್ಶಿ ನರಸಿಂಹ ಮೂರ್ತಿ ಮಾತನಾಡಿ, ಚೌರಾಸಿ ಕೋಸಿ ಪರಿಕ್ರಮ ಯಾತ್ರೆಗೆ ಸಹಕರಿಸಬೇಕಾದ ಉತ್ತರಪ್ರದೇಶ ಸರ್ಕಾರ ತನ್ನ ಹಿಂದೂ ವಿರೋಧಿ ನೀತಿಯನ್ನು ಪ್ರದರ್ಶಿಸಿದೆ. ಮುಂಬರುವ ಲೋಕಸಭಾ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಅಲ್ಪಸಂಖ್ಯಾತರನ್ನು ಓಲೈಸಲು ಈ ದುಷ್ಟತನವನ್ನು ಅಲ್ಲಿನ ಸರ್ಕಾರ ತೋರಿದೆ. ಉತ್ತರಪ್ರದೇಶದ ಅಖಿಲೇಶ್ ಯಾದವ್ ಸರ್ಕಾರ ಬಂಧಿಸಿರುವ ದೇಶಭಕ್ತ ಸಾಧು-ಸಂತರನ್ನು ತಕ್ಷಣ ತಕ್ಷಣ ಬಿಡುಗಡೆಗೊಳಿಸಿ ಪರಿಕ್ರಮ ಯಾತ್ರೆಗೆ ಭದ್ರತೆ ನೀಡಿ ಸಹಕರಿಸಬೇಕು ಎಂದು ಒತ್ತಾಯಿಸಿದರು.
ಆರ್ಎಸ್ಎಸ್ ಮುಖಂಡ ಕೇಶವ್ ಮಾತನಾಡಿ, ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಿಸಲು ಕೇಂದ್ರ ಹಾಗೂ ಉತ್ತರಪ್ರದೇಶದ ಸರ್ಕಾರಗಳು ಅನುಸರಿಸುವ ದ್ವಿಮುಖ ನೀತಿಯನ್ನು ತೀವ್ರವಾಗಿ ಖಂಡಿಸಿದರು. ಲೋಕಸಭೆಯಲ್ಲಿ ಮಂದಿರ ನಿರ್ಮಿಸಲು ಅನುಮೋದನೆ ಜಾರಿಗೆ ತಂದು ಭವ್ಯ, ಸುಂದರ ಶ್ರೀರಾಮ ಮಂದಿರ ನಿರ್ಮಾಣವಾಗಬೇಕು, ಅದಕ್ಕಾಗಿ ಸರ್ಕಾರಗಳು ಶ್ರಮಿಸಬೇಕು ಎಂದು ಆಗ್ರಹಿಸಿದರು.
ವಿಶ್ವಹಿಂದೂ ಪರಿಷತ್ ಮುಖಂಡ ಹಾಗೂ ರಾಜ ವಂಶಜರಾದ ರಾಜ ಕೃಷ್ಣದೇವರಾಯ, ಜಿಲ್ಲಾ ದರ್ಮಾಚಾರ್ ಸಂಪರ್ಕ ಪ್ರಮುಖ್ ಮೋಹನ್ ಚಿಕ್ಕ ಭಟ್ಟ್ ಜೋಷಿ, ಜಿಲ್ಲಾ ಗೋರಕ್ಷಾ ಪ್ರಮುಖ್ ಮಂಜುನಾಥ್ ಮಾತನಾಡಿದರು.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ಮುಖಂಡರಾದ ಮೈಲಾರಲಿಂಗ ನಾಯಕ, ಅಶೋಕ್ ಜೀರೆ, ರತನ್ ಚಂದ್, ವೆಂಕಪ್ಪ, ಅಪ್ಪರಾವ್ ಸಾನಬಾಳ್, ಯಶವಂತ ಸಾನಬಾಳ್, ಎನ್.ಟಿ. ರಾಜು, ರಂಗಸ್ವಾಮಿ, ಮಲ್ಲಪ್ಪ, ಶೇಕ್ಷಾವಲಿ, ದಯಾನಂದ, ಬಜರಂಗದಳ ಸಂಚಾಲಕ ದಿವಾಕರ್ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ಪ್ರತಿಭಟನೆ ನಂತರ ಸಹಾಯಕ ಆಯುಕ್ತ ಅಶೋಕ್ ಅವರಿಗೆ ಮನವಿಪತ್ರ ಸಲ್ಲಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

