ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಗರ್ಭಿಣಿ: ಒಂದು ದಿನದ ಕಾರ್ಯಾಗಾರ
ಬಳ್ಳಾರಿ: ಬಳ್ಳಾರಿಯ ಸ್ತ್ರೀರೋಗ ಮತ್ತು ಪ್ರಸೂತಿ ತಜ್ಞ ಸಂಘ, ವಿಮ್ಸ್ ಪ್ರಸೂತಿ ಶಾಸ್ತ್ರ ವಿಭಾಗ, ಆಹಾರ ಮತ್ತು ಔಷಧ ಸಮಿತಿ ಸಹಯೋಗದಲ್ಲಿ ನಗರದ ವಿಮ್ಸ್ ಸಭಾಂಗಣದಲ್ಲಿ ಗರ್ಭಿಣಿಯರಿಗಾಗಿ ಒಂದು ದಿನದ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು. ಬೆಂಗಳೂರಿನ ಮಣಿಪಾಲ್ ಆಸ್ಪತ್ರೆ ತಜ್ಞ ವೈದ್ಯ ಡಾ. ಕೃಷ್ಣ, ಗರ್ಭಾವಸ್ಥೆಯಲ್ಲಿ ರಕ್ತಹೀನತೆ, ಪ್ರಸವದ ಅನಂತರ ರಕ್ತಸ್ರಾವ, ಕ್ಯಾಲ್ಶಿಯಂ ಅವಶ್ಯಕತೆ ಎಂಬ ವಿಷಯಗಳ ಕುರಿತು ಉಪನ್ಯಾಸ ನೀಡಿದರು. ಕಾರ್ಯಾಗಾರದಲ್ಲಿ ಡಾ. ರಾಮರಾಜ್, ಡಾ. ಅನುಪಮಾ ಸುಂದರ್, ಡಾ. ಉಷಾರಾಣಿ ಮಾತನಾಡಿದರು. ವಿಮ್ಸ್ ನಿರ್ದೇಶಕ ಡಾ. ಲಕ್ಷ್ಮೀನಾರಾಯಣರೆಡ್ಡಿ, ಪ್ರಾಚಾರ್ಯ ಡಾ. ವಿದ್ಯಾಧರ ಕಿನ್ನಾಳ್, ಅಧೀಕ್ಷಕ ಡಾ. ಶ್ರೀನಿವಾಸಲು, ಸಂಘದ ಅಧ್ಯಕ್ಷೆ ಮುಮ್‌ತಾಜ್ ಬೆಂಡಿಗೇರಿ, ಕಾರ್ಯದರ್ಶಿ ಡಾ. ಆಶಾರಾಣಿ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಯಾಗಾರದಲ್ಲಿ ಸಿರುಗುಪ್ಪ, ಸಿಂಧನೂರು, ಗಂಗಾವತಿ, ಕಂಪ್ಲಿ, ಹೊಸಪೇಟೆ, ಬಳ್ಳಾರಿಯ ನೂರಾರು ಗರ್ಭಿಣಿಯರು ಪಾಲ್ಗೊಂಡಿದ್ದರು.

ಒಂದೇ ಗಂಟೆಯಲ್ಲೇ ಕಳ್ಳನ ಸೆರೆ
ಸಿರುಗುಪ್ಪ: ಪಟ್ಟಣದ ಸೀಮೆಎಣ್ಣೆ ಡಿಪೋದಲ್ಲಿನ ಸುಮಾರು ರು. 4,01,400 ದೋಚಿ ಪರಾರಿಯಾಗಿದ್ದ ಕಳ್ಳರನ್ನು ದೂರು ನೀಡಿದ ಒಂದು ಗಂಟೆಯಲ್ಲಿಯೇ ಪೊಲೀಸರು ಸೆರೆ ಹಿಡಿದು ಹಣ ಹಾಗೂ ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿರುವ ಘಟನೆ ಗುರುವಾರ ಸಂಜೆ ಜರುಗಿದೆ. ಸಂತೋಷ (22) ಬಂಧಿತ ವ್ಯಕ್ತಿ. ಈತನು ಪಟ್ಟಣದ ಬಳ್ಳಾರಿ ಮುಖ್ಯ ರಸ್ತೆಯ ಪಕ್ಕದಲ್ಲಿನ ಕೃಷ್ಣ ಗ್ಯಾಸ್ ಮಾಲೀಕ ಕೃಷ್ಣರಾವ್‌ಗೆ ಸೇರಿದ ಸೀಮೆಎಣ್ಣೆ ಡಿಪೋದಲ್ಲಿ ಹಣ ಇರುವ ಬಗ್ಗೆ ಖಚಿತ ಪಡಿಸಿಕೊಂಡು ಮಧ್ಯಾಹ್ನ ಡಿಪೋದಲ್ಲಿ ಯಾರು ಇಲ್ಲದ ಸಮಯದಲ್ಲಿ ನುಗ್ಗಿ ಅಲ್ಲಿದ್ದ ಹಣವನ್ನು ಬ್ಯಾಗ್‌ನೊಂದಿಗೆ ದೋಚಿ ಪರಾರಿಯಾಗಿದ್ದಾನೆ. ಮನೆಯಿಂದ ಬಂದ ಮಾಲೀಕರು ಹಣ ಇಲ್ಲದಿರುವುದನ್ನು ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ದೂರು ನೀಡಿದ ಒಂದು ಗಂಟೆಯಲ್ಲಿಯೇ ಮಿಂಚಿನ ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತನಿಂದ ಸಂಪೂರ್ಣ ಹಣವನ್ನು ವಶಕ್ಕೆ ತಗೆದುಕೊಂಡಿದ್ದಾರೆ. ಸಿರುಗುಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸೆ. 4ರಂದು ದಸರಾ ಕ್ರೀಡಾಕೂಟ
ಹೂವಿನಹಡಗಲಿ: ತಾಲೂಕಿನ ಉತ್ತಂಗಿ ಗ್ರಾಮದಲ್ಲಿ ಸೆ. 4ರಂದು ತಾಲೂಕು ಮಟ್ಟದ ದಸರಾ ಹಾಗೂ ಮಹಿಳಾ ಕ್ರೀಡಾಕೂಟವನ್ನು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಮ್ಮಿಕೊಂಡಿದೆ. ಉತ್ತಂಗಿ ಗ್ರಾಮದಲ್ಲಿ ಅಂದು ಬೆಳಗ್ಗೆ 9 ಗಂಟೆಯಿಂದ ದಸರಾ ಕ್ರೀಡಾಕೂಟ ಆರಂಭವಾಗಲಿದ್ದು, ಪುರುಷ ಮತ್ತು ಮಹಿಳೆಯರಿಗಾಗಿ ಅಥ್ಲೆಟಿಕ್ಸ್, ಖೋ ಖೋ, ಕಬಡ್ಡಿ, ವಾಲಿಬಾಲ್, ಬಾಸ್ಕೆಟ್‌ಬಾಲ್, ಫುಟ್‌ಬಾಲ್, ಶಟಲ್ ಬ್ಯಾಡ್ಮಿಂಟನ್, ಹಾಕಿ, ಟೇಬಲ್‌ಟೆನ್ನಿಸ್ ಮುಂತಾದ ಕ್ರೀಡಾ ಸ್ಪರ್ಧೆಗಳು ಜರುಗಲಿವೆ. ಆಸಕ್ತ ಕ್ರೀಡಾಪಟುಗಳು ಸೆ. 2ರೊಳಗಾಗಿ ಹೂವಿನಹಡಗಲಿಯ ತಾಲೂಕು ಕ್ರೀಡಾಂಗಣದಲ್ಲಿ ಹೆಸರು ನೋಂದಾಯಿಸಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ. ದೂ. 9900751862ಗೆ ಸಂಪರ್ಕಿಸುವಂತೆ ಕೋರಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.