ಸುದ್ದಿ ಸಂಕ್ಷೇಪ
ನಾಳೆ ಉಚಿತ ಶಿಬಿರ
ಹಗರಿಬೊಮ್ಮನಹಳ್ಳಿ: ಶ್ರೀ ಮಂಜುನಾಥೇಶ್ವರ ಯೋಗ ಪ್ರತಿಷ್ಠಾನ ತುಮಕೂರು ಹಾಗೂ ಆರ್ಯವೈಶ್ಯ ಸಂಘ ಹಗರಿಬೊಮ್ಮನಹಳ್ಳಿ ಇವರ ಆಶ್ರಯದಲ್ಲಿ ಪಟ್ಟಣದ ವಾಸವಿ ಕಲ್ಯಾಣ ಮಂಟಪದಲ್ಲಿ ಉಚಿತ ಮುದ್ರಾ ಪ್ರಾಣಯಾಮ ಶಿಬಿರ ಸೆ. 2ರಿಂದ ಸೆ. 15ರ ವರೆಗೆ ಜರುಗಲಿದೆ. ಪ್ರತಿದಿನ ಬೆಳಗ್ಗೆ 6ರಿಂದ 7 ಹಾಗೂ 11ರಿಂದ 12 ಮತ್ತು ಸಂಜೆ 5.30 ರಿಂದ 6.30ರ ವರೆಗೆ ಶಿಬಿರ ಜರುಗಲಿದೆ. ಆಸಕ್ತರು ಜಿ. ಲಕ್ಷ್ಮಿಪತಿ- 9448460468, ಬಸವರಾಜ-9880129657, ಗೀತಾ-8152960817ಗೆ ಸಂಪರ್ಕಿಸಲು ಎಂದು ಆರ್ಯವೈಶ್ಯ ಸಂಘ ಪ್ರಕಟಣೆಯಲ್ಲಿ ತಿಳಿಸಿದೆ.
ನಾಳೆ ವಾರ್ಷಿಕೋತ್ಸವ
ಹೊಸಪೇಟೆ: ಶಿವ ಶರಣ ವೀರಘಂಟೆ ಮಡಿವಾಳ ಮಾಚಿದೇವರ ವಾರ್ಷಿಕೋತ್ಸವ ಸಮಾರಂಭವು ಸೆ. 2ರಂದು ನಗರದಲ್ಲಿ ನಡೆಯಲಿದೆ. ಸೆ. 2ರಂದು ಸೋಮವಾರ ಬೆಳಿಗ್ಗೆ 9.15ಕ್ಕೆ ಸಣ್ಣಕ್ಕಿ ವೀರಭದ್ರೇಶ್ವರ ದೇವಸ್ಥಾನದಲ್ಲಿ ಗಂಗಾಪೂಜೆ ನೇರವೇರಿಸಿದ ನಂತರ ಶಿವ ಶರಣ ವೀರಘಂಟೆ ಮಡಿವಾಳ ಮಾಚಿದೇವರ ಭಾವಚಿತ್ರದ ಮೆರವಣಿಗೆಯು ನಗರದಲ್ಲಿ ನಡೆಯಲಿದೆ. ಶಿವ ಶರಣ ವೀರಘಂಟೆ ಮಡಿವಾಳ ಮಾಚಿದೇವರಿಗೆ ರುದ್ರಾಭಿಷೇಕ, ಮಹಾ ಮಂಗಳಾರತಿ ಕಾರ್ಯಕ್ರಮ ನಡೆಯಲಿದೆ. ನಂತರ ಅನ್ನಸಂತರ್ಪಣೆಯೊಂದಿಗೆ ಕಾರ್ಯಕ್ರಮ ಮಂಗಳವಾಗುವುದು.
ಡಿಎಸ್ಎಸ್ಗೆ ಆಯ್ಕೆ
ಬಳ್ಳಾರಿ: ಕರ್ನಾಟಕ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಜಿಲ್ಲಾ ಪ್ರಧಾನ ಸಂಚಾಲಕರಾಗಿ ದುರುಗಪ್ಪ ತಳವಾರ, ಜಿಲ್ಲಾ ಸಂಘಟನಾ ಸಂಚಾಲಕರಾಗಿ ಪಿ. ತಾಯಪ್ಪ, ಚಿಕ್ಕ ಗಾದಿಲಿಂಗಪ್ಪ, ಕೆ. ಮೆಹಬೂಬ್, ಡಿ.ಇ. ವೀರೇಶ, ಎಚ್. ಕುಮಾರಸ್ವಾಮಿ, ಈ. ಪರಶುರಾಮ ಹಾಗೂ ಖಜಾಂಚಿಯಾಗಿ ದುರುಗಣ್ಣ ಅವರನ್ನು ಆಯ್ಕೆ ಮಾಡಲಾಯಿತು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಸಂಘಟನಾ ಸಂಚಾಲಕ ನಾಗಣ್ಣ ಬಡಿಗೇರ ಹಾಗೂ ಗುಲ್ಬರ್ಗಾ ವಿಭಾಗೀಯ ಸಂಚಾಲಕ ಅರ್ಜುನ್ ಗಬ್ಬೂರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮಟ್ಕಾ: ಓರ್ವನ ಬಂಧನ
ಬಳ್ಳಾರಿ: ಕುರುಗೋಡಿನ ಸಾರ್ವಜನಿಕ ಸ್ಥಳದಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ಮಾಡಿ, ಆರೋಪಿಯನ್ನು ಬಂಧಿಸಿ ಅವರಿಂದ ರು. 4,075 ವಶಪಡಿಸಿಕೊಂಡಿದ್ದಾರೆ. ಕುರುಗೋಡಿನ ಸಂತೆ ಮಾರುಕಟ್ಟೆ ಸಮೀಪದ ಸ್ಥಳವೊಂದರಲ್ಲಿ ಮಟ್ಕಾ ಜೂಜಾಟ ನಡೆಯುತ್ತಿರುವ ಸಂದರ್ಭದಲ್ಲಿ ದಾಳಿ ಮಾಡಿದ ಪೊಲೀಸರು, ಆರೋಪಿ ಗೊಲ್ಲರ ಗೋವಿಂದನಿಂದ ರು. 4,075 ವಶಪಡಿಸಿಕೊಂಡಿದ್ದು, ಕುರುಗೋಡು ಠಾಣೆಯಲ್ಲಿ ದೂರು ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

