ಬಳ್ಳಾರಿ

ಚಿನ್ನಾಭರಣ, ನಗದು ಸಮೇತ ಯುವಕ ಕಾಣೆ

Published On :

ಬಳ್ಳಾರಿ: ರೇಣುಕಾನಗರದ ನಿವಾಸಿ ಜಿ. ಬಸವನಗೌಡ ಅವರ 19 ವರ್ಷದ ಮೊಮ್ಮಗ ಜಿ. ಗೋಪಾಲಕೃಷ್ಣ ಡಿ. 3ರಂದು ರಾತ್ರಿ 8 ಗಂಟೆಯಿಂದ ಮನೆಯಲ್ಲಿಟ್ಟಿದ್ದ ಬಂಗಾರದೊಡವೆ ಹಾಗೂ ನಗದಿನೊಂದಿಗೆ ಕಾಣೆಯಾಗಿದ್ದಾನೆ ಎಂದು ಬಳ್ಳಾರಿ ಗ್ರಾಮೀಣ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವಕ ಸಂಜಯಗಾಂಧಿ ಪಾಲಿಟೆಕ್ನಿಕ್‌ನಲ್ಲಿ ಡಿಪ್ಲೊಮಾ ಮೆಕ್ಯಾನಿಕ್ 2ನೇ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದು, ಡಿ. 3ರಂದು ರಾತ್ರಿ 8 ಗಂಟೆಗೆ ಮನೆಯಿಂದ ಹೊರ ಹೋದವನು ಮರಳಿಲ್ಲ. ಹೋಗುವಾಗ ಮನೆಯಲ್ಲಿದ್ದ ಒಂದೊಂದು ತೊಲೆಯ 2 ಬಂಗಾರದ ಚೈನು, 5 ತೊಲೆಯ ಒಂದು ಚಿನ್ನದ ಸರ, 6 ತೊಲೆಯ ಬಂಗಾರದ 4 ಬಳೆಗಳು, 3 ತೊಲೆಯ ಚಿನ್ನದ ಸರ, 2 ತೊಲೆಯ ಒಂದು ಸರ, ಅರ್ಧ ತೊಲೆಯ ಒಂದು ಉಂಗುರ, ರು. 5500 ನಗದು ಹಾಗೂ ಬೂದಿ ಬಣ್ಣದ ಬೆನ್ನಿಗೆ ಹಾಕಿಕೊಳ್ಳುವ ಸ್ಕೂಲ್‌ಬ್ಯಾಗ್‌ನೊಂದಿಗೆ ಹೋಗಿದ್ದಾನೆ. ಗೋಪಾಲಕೃಷ್ಣ 5.6 ಅಡಿ ಎತ್ತರ, ಸಾಧಾರಣ ಮೈಕಟ್ಟು, ಹೊಂದಿರುತ್ತಾನೆ. ಸುಳಿವು ಸಿಕ್ಕಲ್ಲಿ ದೂ.ಸಂ-8392-276461, 9480803049, 08392-258100 ಅಥವಾ ಸಮೀಪದ ಠಾಣೆಯನ್ನು ಸಂಪರ್ಕಿಸಬೇಕೆಂದು ಇನ್‌ಸ್ಪೆಕ್ಟರ್ ಮನವಿ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.