ಬುದ್ಧಿಜೀವಿಗಳು ಮಾಂಸ ತಿನ್ನುವುದನ್ನು ನಿಲ್ಲಿಸಲಿ
ಕೊಟ್ಟೂರು: ದೇವರಿಗೆ ಪ್ರಾಣಿಗಳ ಬಲಿ ನೀಡಿ ಮಾಂಸ ತಿನ್ನುವ ಹಳ್ಳಿ ಜನರ ಧೋರಣೆ ಖಂಡಿಸುವ ಕೆಲ ಐಷರಾಮಿ ಬುದ್ಧಿಜೀವಿಗಳು ಮೊದಲು ಅಂಗಡಿಯಲ್ಲಿ ಮಾಂಸವನ್ನು ಖರೀದಿಸಿ ತಿನ್ನುವುದನ್ನು ನಿಲ್ಲಿಸಲಿ. ನಂತರ ಪ್ರಾಣಿ ಬಲಿಯಂತಹ ವಿಚಾರಗಳ ಬಗ್ಗೆ ಮಾತನಾಡಲಿ ಎಂದು ಉಪನ್ಯಾಸಕ ಡಾ. ಸತೀಶ್ ಪಾಟೀಲ್ ಹೇಳಿದರು. ಪಟ್ಟಣದ ಗಂಗೋತ್ರಿ ಪಿಯು ಕಾಲೇಜಿನಲ್ಲಿ ಬಯಲು ಸಾಹಿತ್ಯ ವೇದಿಕೆ ಏರ್ಪಡಿಸಿದ್ದ ತಿಂಗಳ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮೌಢ್ಯಗಳ ನಿಷೇಧ ಕುರಿತ ಕರಡು ಪ್ರತಿಯ ವಿವರ ಅರಿಯದೇ ಚರ್ಚೆ ಮಾಡುವುದು ಸರಿಯಲ್ಲ ಎಂದು ಮಾಧ್ಯಮ ಅನಗತ್ಯ ಚರ್ಚೆಗಳನ್ನು ಆಯೋಜಿಸಿ ಗೊಂದಲ ಏರ್ಪಡಿಸುತ್ತಿವೆ. ಮೌಢ್ಯ ನಿಷೇಧ ಹೇರುವ ಮೊದಲು ಆರೋಗ್ಯ ಪೂರ್ಣ ಚರ್ಚೆಗಳು ನಡೆಯಬೇಕು ಎಂದು ಅಭಿಪ್ರಾಯಿಸಿದರು. ನಿರಂಜನ ಸ್ವಾಮಿ, ಸಿದ್ದು ದೇವರಮನಿ, ನಿರ್ಮಲಾ ಶಿವನಗುತ್ತಿ, ಎಸ್.ಎಂ. ನಳಿನಾ, ಪದ್ಮಾ ಜಾಗಟಗೇರಿ, ಎಸ್.ಡಿ. ಈರಗಾರ, ನಾಗರಾಜ ತಳವಾರ್, ಶಿವಪ್ರಕಾಶ್, ದೇವರಮನಿ ಸುರೇಶ್ ನಂತರ ನಡೆದ ಚರ್ಚಾ ಗೋಷ್ಠಿಯಲ್ಲಿ ಪಾಲ್ಗೊಂಡಿದದ್ದರು. ನಾಗರಾಜ್ ತಳವಾರ್ ಕಾವ್ಯವಾಚನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಿರಂಜನ ನಿರ್ವಹಿಸಿದರು.
---
ನಕಲಿ ವೈದ್ಯನ ಬಂಧನ
ಬಳ್ಳಾರಿ: ಪ್ಯಾರಾ ಮೆಡಿಕಲ್ ಮಾಡಿ ವೈದ್ಯಕೀಯ ವೃತ್ತಿ ನಡೆಸುತ್ತಿದ್ದ ವ್ಯಕ್ತಿಯ ಕ್ಲಿನಿಕ್ ಮೇಲೆ ದಾಳಿ ಮಾಡಿದ ಆಯುಷ್ ಇಲಾಖೆ ತಂಡದವರು ನಕಲಿ ವೈದ್ಯ ಅಬ್ದುಲ್ ಕಲಾಂನನ್ನು ಬಂಧಿಸಿ, ವೈದ್ಯಕೀಯ ಸಲಕರಣೆಗಳನ್ನು ವಶಪಡಿಸಿಕೊಂಡಿರುವ ಘಟನೆ ಸೋಮವಾರ ಬಳ್ಳಾರಿ ಹೊರವಲಯದ ಗುಗ್ಗರಹಟ್ಟಿಯಲ್ಲಿ ನಡೆದಿದೆ.
ಈತನು ಪ್ಯಾರಾ ಮೆಡಿಕಲ್ ಮಾಡಿದ್ದು, ಅದೇ ವಿದ್ಯಾಭ್ಯಾಸದ ಆಧಾರದ ಮೇಲೆಯೇ ಗುಗ್ಗರಹಟ್ಟಿಯಲ್ಲಿ ಯುನಿವರ್ಸಲ್ ಕ್ಲಿನಿಕ್ ನಡೆಸುತ್ತಿದ್ದ. ಈ ಕುರಿತು ಆಯುಷ್ ಇಲಾಖೆಗೆ ಡಿ. 2ರಂದು ದೂರೊಂದು ಬಂದಿತ್ತು. ಈ ಹಿನ್ನೆಲೆಯಲ್ಲಿ ಆಯುಷ್ ಇಲಾಖೆ ಅಧಿಕಾರಿ ವೀರನಗೌಡ ನೇತೃತ್ವದ ತಂಡ ಬಳ್ಳಾರಿ ಗ್ರಾಮೀಣ ಠಾಣೆ ಪಿಎಸ್ಐ ಹೊಸಕೇರಪ್ಪ ಸಹಕಾರೊಂದಿಗೆ ಅಬ್ದುಲ್ ಕಲಾಂ ಕ್ಲಿನಿಕ್ ಮೇಲೆ ದಾಳಿ ಮಾಡಿ, ವೈದ್ಯಕೀಯ ದಾಖಲೆಗಳನ್ನು ಪರಿಶೀಲನೆ ನಡೆಸಿತು. ಬಳ್ಳಾರಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಅಬ್ದುಲ್ ಕಲಾಂನನ್ನು ಬಳ್ಳಾರಿ ಗ್ರಾಮೀಣ ಪೊಲೀಸರು ಬಂಧಿಸಿ, ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಆಯುಷ್ ಇಲಾಖೆ ಅಧಿಕಾರಿಗಳ ತಂಡ ದಾಳಿ ಮಾಡಿ ವೈದ್ಯರನ್ನು ಬಂಧಿಸಿತ್ತು. ಸೋಮವಾರ ದಾಳಿ ಮುಂದುವರಿಸಿತು. ಆಯುಷ್ ಇಲಾಖೆ ಅಧಿಕಾರಿ ವೀರನಗೌಡ, ಗುಗ್ಗರಹಟ್ಟಿಯಲ್ಲಿ ಯುನಿವರ್ಸಲ್ ಕ್ಲಿನಿಕ್ ಕುರಿತು ವಕೀಲರೊಬ್ಬರು ದೂರು ನೀಡಿದ್ದರು. ಕೆಲ ದಿನಗಳಿಂದ ಕ್ಲಿನಿಕ್ ಮೇಲೆ ನಿಗಾ ವಹಿಸಲಾಗಿತ್ತು. ಸೋಮವಾರ ಬೆಳಗ್ಗೆ 11 ಗಂಟೆ ಸುಮಾರಿಗೆ ಟಾಸ್ಕ್ಫೋರ್ಸ್ ತಂಡ ದಾಳಿ ಮಾಡಿದೆ. ಆತನ ಮೇಲೆ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಜಿಲ್ಲೆಯ ಇತರ ತಾಲೂಕುಗಳಲ್ಲೂ ದಾಳಿ ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

