ಬಳ್ಳಾರಿ

ಸುದ್ದಿ ಸಂಕ್ಷೇಪ

Published On :

ಇಂದು 'ರಸಗ್ರಹಣ'
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಡಿ. 11ರಂದು ಬೆಳಗ್ಗೆ 11.30 ಗಂಟೆಗೆ ಜಿಲ್ಲೆಯ ಸಿರುಗುಪ್ಪ ತಾಲೂಕು ಇಬ್ರಾಹಿಂಪುರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ರಸಗ್ರಹಣ ಕಾರ್ಯಕ್ರಮ ಆಯೋಜಿಸಿದೆ ಎಂದು ಇಲಾಖೆ ಸಹಾಯಕ ನಿರ್ದೇಶಕ  ಬಿ. ನಾಗರಾಜ್ ತಿಳಿಸಿದ್ದಾರೆ. ಕಾರ್ಯಕ್ರಮದಲ್ಲಿ ಚಿತ್ರಕಲೆ ನಿರ್ದೇಶಕ ಮಂಜುನಾಥ ಗೋವಿಂದವಾಡ ಚಿತ್ರಕಲೆ ಪ್ರಾತ್ಯಕ್ಷಿಕೆ ನೀಡಲಿದ್ದಾರೆ ಎಂದು ತಿಳಿಸಿದ್ದಾರೆ.
ಇಂದು ಮುಕ್ತ ಸಂವಾದ
ಬಳ್ಳಾರಿ: ಭಾರತ ಸಂಚಾರ ನಿಗಮದ ಮಹಾಪ್ರಬಂಧಕರ ಸಭಾಂಗಣದಲ್ಲಿ ಡಿ. 11ರಂದು ಮಧ್ಯಾಹ್ನ 3 ಗಂಟೆಗೆ ಮುಕ್ತ ಸಂವಾದ ಕಾರ್ಯಕ್ರಮ ಹಮ್ಮಿಕೊಂಡಿದೆ. ಆಸಕ್ತರು ಈ ಸಂವಾದದಲ್ಲಿ ಭಾಗವಹಿಸಬಹುದು.
27ರಿಂದ ಕಸಾಪ ಪರೀಕ್ಷೆ
ಬಳ್ಳಾರಿ: ಕನ್ನಡ ಸಾಹಿತ್ಯ ಪರಿಷತ್ತಿನ 2013-14ನೇ ಸಾಲಿನ ಪ್ರವೇಶ, ಕಾವ್ಯ, ಜಾಣ ಮತ್ತು ರತ್ನ ಪರೀಕ್ಷೆಗಳು 2013ರ ಡಿ. 27ರಿಂದ 29ರ ವರೆಗೆ ನಡೆಯಲಿವೆ. ಬಳ್ಳಾರಿಯಲ್ಲಿ ಶೆಟ್ರ ಗುರುಶಾಂತಪ್ಪ ಸಂಯುಕ್ತ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ. ಪ್ರವೇಶ ಪತ್ರಗಳನ್ನು ವಿದ್ಯಾರ್ಥಿಗಳಿಗೆ ಈಗಾಗಲೆ ಅಂಚೆ ಮೂಲಕ ಕಳುಹಿಸಲಾಗಿದೆ. ತಲುಪದೆ ಇರುವವರು ಗೌರವ ಕಾರ್ಯದರ್ಶಿ, ಕಸಾಪ, ಚಾಮರಾಜಪೇಟೆ, ಬೆಂಗಳೂರು-18, ದೂ.ಸಂ-080-16623584ನ್ನು ಸಂಪರ್ಕಿಸಬಹುದು. ಪ್ರವೇಶ ಪತ್ರ, ಪರೀಕ್ಷಾ ಕೇಂದ್ರಗಳ ವಿಳಾಸವನ್ನು ಅಂತರ್ಜಾಲ ತಾಣ ಢಿಢಿಢಿ.್ಞಛಡಛಠಛ.್ಝಟಿ ಮೂಲಕ ಪಡೆಯಬಹುದು.
ಪರೀಕ್ಷಾ ವೇಳಾಪಟ್ಟಿ: ಆವರಣದಲ್ಲಿ ಪ್ರಶ್ನೆಪತ್ರಿಕೆ ವಿಷಯ ತಿಳಿಸಲಾಗಿದೆ. ಡಿ. 27ರಂದು ಬೆ. 10ರಿಂದ ಮಧ್ಯಾಹ್ನ 1 ಗಂಟೆವರೆಗೆ ಕನ್ನಡ ರತ್ನ ಪತ್ರಿಕೆ-1 (ಹಳಗನ್ನಡ ಸಾಹಿತ್ಯ), ಕನ್ನಡ ಜಾಣ ಪತ್ರಿಕೆ- 1 (ನಡುಗನ್ನಡ ಸಾಹಿತ್ಯ), ಮಧ್ಯಾಹ್ನ 2ರಿಂದ 5ರ ವರೆಗೆ ಕನ್ನಡ ರತ್ನ ಪತ್ರಿಕೆ- 2(ಹೊಸಗನ್ನಡ ಸಾಹಿತ್ಯ (ಕಾವ್ಯ ಮತ್ತು ಸಣ್ಣಕತೆ) ಹಾಗೂ ಕನ್ನಡ ಜಾಣ ಪತ್ರಿಕೆ- 2 (ನಾಟಕ ಮತ್ತು ಪ್ರಬಂಧ ಸಾಹಿತ್ಯ). ಡಿ. 28ರಂದು ಬೆ. 10ರಿಂದ 1ರ ವರೆಗೆ ಕನ್ನಡ ಕಾವ್ಯ ಪತ್ರಿಕೆ- 1 (ಕನ್ನಡ ಗದ್ಯ, ಪದ್ಯ, ಸಾಹಿತ್ಯ), ಕನ್ನಡ ಜಾಣ ಪತ್ರಿಕೆ- 3 (ಕನ್ನಡ ಸಾಹಿತ್ಯ ಚರಿತ್ರೆ), ಕನ್ನಡ ರತ್ನ ಪತ್ರಿಕೆ- 3 (ಕಾವ್ಯ ಮೀಮಾಂಸೆ ಮತ್ತು ಸಾಹಿತ್ಯ ವಿಮರ್ಶೆ). ಮಧ್ಯಾಹ್ನ 2ರಿಂದ 5ರ ವರೆಗೆ ಕನ್ನಡ ಕಾವ್ಯ ಪತ್ರಿಕೆ- 2 (ವ್ಯಾವಹಾರಿಕ ಕನ್ನಡ ಮತ್ತು ಸಂವಹನ- ಕನ್ನಡ), ಕನ್ನಡ ಜಾಣ ಪತ್ರಿಕೆ- 4 (ಹೊಸಗನ್ನಡ ವ್ಯಾಕರಣ ಮತ್ತು  ಛಂದಸ್ಸು), ಕನ್ನಡ ರತ್ನ ಪತ್ರಿಕೆ- 4 (ಭಾಷಾ ವಿಜ್ಞಾನ). ಡಿ. 29ರಂದು ಬೆ. 10ರಿಂದ ಮ. 1ರ ವರೆಗೆ ಕನ್ನಡ ಪ್ರವೇಶ ಪತ್ರಿಕೆ- 1 (ಅಕ್ಷರ, ಪದ, ವಾಕ್ಯ ರಚನೆ), ಕನ್ನಡ ರತ್ನ ಪತ್ರಿಕೆ- 5 (ಜಾನಪದ ಸ್ವರೂಪ- ಕನ್ನಡ ಸಂಸ್ಕೃತಿ), ಕನ್ನಡ ಕಾವ್ಯ ಹಾಗೂ ಕನ್ನಡ ಜಾಣ (ಮೌಖಿಕ ಪರೀಕ್ಷೆ), ಮ. 2ರಿಂದ 5ರ ವರೆಗೆ ಕನ್ನಡ ಪ್ರವೇಶ ಪತ್ರಿಕೆ- 2 (ಭಾಷೆ ಮತ್ತು ಸಾಹಿತ್ಯ ಪರಿಚಯ), ಕನ್ನಡ ಕಾವ್ಯ (ಮೌಖಿಕ ಪರೀಕ್ಷೆ (ಮುಂದುವರಿಕೆ) ನಡೆಯಲಿವೆ ರಾಮೇಗೌಡ ತಿಳಿಸಿದ್ದಾರೆ.
ಕನಕದಾಸರಿಗೆ ಅವಮಾನ: ಪ್ರತಿಭಟನೆ
ಬಳ್ಳಾರಿ: ಮೈಸೂರು ತಾಲೂಕಿನ ಸಿದ್ದರಾಮನಹುಂಡಿ ಗ್ರಾಮದಲ್ಲಿ ಶ್ರೀ ಭಕ್ತ ಕನಕದಾಸರ ಫ್ಲೆಕ್ಸ್‌ಗೆ ಬೆಂಕಿ ಹಚ್ಚಿದ ದುಷ್ಕರ್ಮಿಗಳನ್ನು ಕೂಡಲೇ ಬಂಧಿಸುವಂತೆ ಒತ್ತಾಯಿಸಿ, ಕರ್ನಾಟಕ ಪ್ರದೇಶ ಯುವ ಕುರುಬರ ಸಂಘದ ಜಿಲ್ಲಾ ಘಟಕದ ಪದಾಧಿಕಾರಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ನಗರದ ಸಂಘದ ಕಚೇರಿಯಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಯು ಡಬಲ್ ರಸ್ತೆ, ರಾಯಲ್ ವೃತ್ತದ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿತು. ಸಂಘದ ರಾಜ್ಯಾಧ್ಯಕ್ಷ ಬಿ.ಎಂ. ಪಾಟೀಲ್ ಮಾತನಾಡಿ, ದುಷ್ಕರ್ಮಿಗಳನ್ನು ಕೂಡಲೇ ಪತ್ತೆ ಹಚ್ಚದಿದ್ದರೆ ಸಂಘದಿಂದ ಕರ್ನಾಟಕ ಬಂದ್‌ಗೆ ಕರೆ ನೀಡುವುದಾಗಿ ಎಚ್ಚರಿಸಿದರು. ನಂತರ ಸಂಘದ ಪದಾಧಿಕಾರಿಗಳು ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದರು.
ಸಂಘದ ರಾಜ್ಯ ಸಂಚಾಲಕ ಗುರುವಿನ ರವೀಂದ್ರ, ಸಂಘಟನಾ ಕಾರ್ಯದರ್ಶಿ ಭತ್ರಿ ರಾಘವೇಂದ್ರ, ರಾಜ್ಯ ನಿರ್ದೇಶಕ ಕರೂರು ವಿರೂಪಾಕ್ಷಿ, ಜಿಲ್ಲಾಧ್ಯಕ್ಷ ಕೆ.ಮಂಜುನಾಥ, ಜಿಲ್ಲಾ ಕಾರ್ಯಾಧ್ಯಕ್ಷ ಅಸುಂಡಿ ಪರಮೇಶ, ಪದಾಧಿಕಾರಿಗಳಾದ ಕೆಂಚಪ್ಪ, ಈರನಗೌಡ, ಶಿವಕುಮಾರ್, ಧನುಂಜಯ, ಶಿವರಾಂ, ಭತ್ರಿ ಪುರುಷೋತ್ತಮ, ಬನ್ನಿಹಟ್ಟಿ ಅನಂತಕುಮಾರ್, ಬೆಣಕಲ್ಲು ಬಸವರಾಜ, ಕೇಶವ, ಕೊಳಗಲ್ಲು ಗವಿಸಿದ್ದ, ಅಂದೇಶ್ ಕುರಿ, ಯುಗಂಧರ್, ಅನಿಲ್ ಕುಮಾರ್, ನಾಗರ್ಜುನ್, ಬೆಣಕಲ್ಲು ಗಾದಿಲಿಂಗ, ರವಿಕುಮಾರ್, ಗೋನಾಳು ತಿಮ್ಮಪ್ಪ, ಶಾಂತರಾಜು, ಮೌನೇಶ, ಕೆ.ಮಂಜುನಾಥ, ಚಂದ್ರಶೇಖರ್, ಅಂದ್ರಾಳ್ ಫಕ್ಕೀರಪ್ಪ ಸೇರಿದಂತೆ ನೂರಾರು ಜನರು ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.