ಬಳ್ಳಾರಿ

ಶಿಡಿಗಿನಮೊಳ: ಉಚಿತ ಆರೋಗ್ಯ ತಪಾಸಣೆ

Published On :

ಬಳ್ಳಾರಿ: ತಾಲೂಕಿನ ಶಿಡಿಗಿನಮೊಳ ಗ್ರಾಮದಲ್ಲಿ ಇತ್ತೀಚಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ಹಾಗೂ ಕೀಟನಾಶಕದಿಂದ ಆಗುವ ದುಷ್ಪರಿಣಾಮಗಳ ಕುರಿತ ಕಾರ್ಯಾಗಾರ ಆಯೋಜಿಸಲಾಗಿತ್ತು. ಜಾನಕಿ ಕಾರ್ಫ್ ಲಿಮಿಟೆಡ್ ಶಿಡಿಗಿನಮೊಳ ಹಾಗೂ ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದ್ದ ಶಿಬಿರವನ್ನು, ಜಾನಕಿ ಕಾರ್ಫ್ ಲಿಮಿಟೆಡ್‌ನ ಮುಖ್ಯ ವ್ಯವಸ್ಥಾಪಕ ನರಹರರೆಡ್ಡಿ ಸಸಿ ನೆಡುವುದರ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದಲ್ಲಿ ಶಿಡಿಗಿನಮೊಳ, ಮೀನಹಳ್ಳಿ, ಕಾರೆಕಲ್ಲು, ಕೆ.ವೀರಾಪುರ, ಹಗರಿ ಗ್ರಾಮಗಳ ಸಾರ್ವಜನಿಕರು ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಗ್ರಾಪಂ ಅಧ್ಯಕ್ಷ ಎಚ್. ಹುಲುಗಪ್ಪ, ವೈದ್ಯಾಧಿಕಾರಿಗಳಾದ ಮಲ್ಲಿಕಾರ್ಜುನ, ಮೇಟಿ, ವಿಮ್ಸ್ ಸಹಾಯಕ ಪ್ರಾಧ್ಯಾಪಕಿ ಡಾ. ಮೋದಿನಿ, ಡಾ. ಲಿಂಗರಾಜ್, ಅನ್ವರ್ ಬಾಷ್, ಬಿ.ಪಿ. ಸುರೇಶ್, ಭಟ್, ತಾಯಪ್ಪ, ತಿಪ್ಪೇಸ್ವಾಮಿ, ವೀರಾರೆಡ್ಡಿ, ಸಿದ್ದಲಿಂಗೇಶ್ವರ, ಕೆ.ಟಿ.ನಾಗಪ್ಪ, ಉಚ್ಚಲಪ್ಪ, ಗುರುಮೂರ್ತಿ ಮತ್ತಿತರರು ಉಪಸಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.