ಬಳ್ಳಾರಿ

ಮನುಷ್ಯನ ಜವಾಬ್ದಾರಿ ಹೆಚ್ಚಿದೆ

Published On :

ಕೂಡ್ಲಿಗಿ: ಜಾಗತೀಕರಣದ ಇಂದಿನ ದಿನಗಳಲ್ಲಿ ಜ್ಞಾನದ ಬೆಳವಣಿಗೆ ಜತೆಗೆ ತಂತ್ರಜ್ಞಾನ ಮುಂದುವರಿದಿದ್ದು, ಎಂದೆಂದಿಗಿಂತಲೂ ಇಂದು ಮನುಷ್ಯನ ಜವಾಬ್ದಾರಿ ಹೆಚ್ಚಿದೆ ಎಂದು ವ್ಯಕ್ತಿತ್ವ ವಿಕಸನ ತರಬೇತುದಾರ ಮೈಸೂರು ಚೇತನರಾಂ ತಿಳಿಸಿದರು.
ಅವರು ಪಟ್ಟಣದ ರೇಣುಕಾ ಸಂಯುಕ್ತ ಪಪೂ ಕಾಲೇಜು ಆವರಣದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ, ಬಿಇಒ ಕಚೇರಿ ಹಾಗೂ ತಾಲೂಕು ಮಟ್ಟದ ಪ್ರೌಢಶಾಲೆ ಮುಖ್ಯಗುರುಗಳ ಸಂಘದ ಆಶ್ರಯದಲ್ಲಿ ಪ್ರೌಢಶಾಲೆ ವಿದ್ಯಾರ್ಥಿಗಳಿಗೆ ಬುಧವಾರ ನಡೆದ ಪರೀಕ್ಷಾ ಭಯ ನಿವಾರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯಾವುದೆ ಸ್ಪರ್ಧೆಯಲ್ಲಿ ಭಯಮುಕ್ತರಾಗುವುದು ಗುರಿ ಸಾಧನೆಗೆ ಇರುವ ಸಾಧನ. ಹಿರಿದಾದ ಮತ್ತು ಸ್ಪಷ್ಟವಾದ ಗುರಿ ಹೊಂದಿರುವುದು ಅಷ್ಟೆ ಮುಖ್ಯ. ವಿದ್ಯಾರ್ಥಿಗಳು ಜಗತ್ತಿನ ಎಲ್ಲ ವಿದ್ಯಮಾನಗಳನ್ನು ತಿಳಿದುಕೊಳ್ಳವುದರಿಂದ ಭವಿಷ್ಯತ್ತಿಗೆ ಒಳ್ಳೆಯದಾಗುತ್ತದೆ ಎಂದರು.
ಪರಿಶ್ರಮ ಮತ್ತು ಕಠಿಣ ಅಭ್ಯಾಸದಿಂದ ಎಂತಹ ಸಂದರ್ಭ ಎದುರಾದರೂ  ಸುಲಭವಾಗಿ ಜಯಿಸಬಹುದು. ವಿದ್ಯಾರ್ಥಿ ಜೀವನದಲ್ಲಿ ಪರೀಕ್ಷೆಗಳು ಬಹು ಮುಖ್ಯ. ಅಂಥ ಸಂದರ್ಭದಲ್ಲಿ ನಿರಂತರ ಅಭ್ಯಾಸದಿಂದ ಮತ್ತು ಶಿಕ್ಷಕರ ಪಾಠಬೋಧನೆಯನ್ನು ಗಮನವಿಟ್ಟು ಆಲಿಸುವುದರಿಂದ ವಿಕಸನ ಹೊಂದಬಹುದು. ಇಂದು ಜಗತ್ತಿನಲ್ಲಿ ಎಲ್ಲವೂ ಅಂಗೈಯಲ್ಲಿ ಎನ್ನುವಷ್ಟರ ಮಟ್ಟಿಗೆ ತಂತ್ರಜ್ಞಾನ ವೃದ್ಧಿಯಾಗಿದೆ. ಬಿಡುವಿಲ್ಲದೆ ಅಭ್ಯಾಸಕ್ಕೆ ಮುಂದಾಗದೆ, ಕಾಲಾವಕಾಶಕ್ಕೆ ತಕ್ಕಂತೆ ವ್ಯಾಯಾಮ, ಸಂಗೀತ, ಧ್ಯಾನ ಸೇರಿದಂತೆ ಪಠ್ಯೇತರ ಚಟುವಟಿಕೆಯಲ್ಲಿ ಪಾಲ್ಗೊಳ್ಳುವುದಿರಿಂದ ಜ್ಞಾನ ವಿಕಾಸಕ್ಕೆ ಪೂರಕ ಎಂದು ತಿಳಿಸಿದರು.
ತಾಲೂಕು ಪ್ರೌಢಶಾಲೆ ಮುಖ್ಯಗುರುಗಳ ಸಂಘದ ಅಧ್ಯಕ್ಷ ಕೆ. ಬಸಯ್ಯ ಅಧ್ಯಕ್ಷತೆ ವಹಿಸಿದ್ದರು.
ಬಳ್ಳಾರಿ ವಿಷಯ ಪರೀಕ್ಷಕ ಹುಲಿಬಂಡಿ, ಶಿವಶಂಕರಪ್ಪ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಚ್. ಕುಮಾರ್, ಮುಖ್ಯಶಿಕ್ಷಕ ಚಂದ್ರಶೇಖರ್, ಕಾರ್ಯದರ್ಶಿ ಪಂಪಾಪತಿ, ಪ್ರೌಢಶಾಲೆ ಶಿಕ್ಷಕರ ಸಂಘದ ಅಧ್ಯಕ್ಷ ಶ್ರೀಧರ್, ಎಲ್. ಶಕುಂತಲಾ, ಸಿ.ಬಿ. ತಿಪ್ಪೇಸ್ವಾಮಿ, ಬಸವರಾಜ, ತಿರುಕಪ್ಪ, ಇಂದಿರಾ, ಮಹೇಶಪ್ಪ, ಪಿ. ಶಿವರಾಜ್, ಸಿಇಒ ಬಸವರಾಜ್ ಮುಂತಾದವರು ಉಪಸ್ಥಿತರಿದ್ದರು. ತಾಲೂಕಿನ ಸಾವಿರಾರು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಶಿಬಿರದ ಪ್ರಯೋಜನ ಪಡೆದರು. ಶಿಕ್ಷಕಿ ಲಕ್ಷ್ಮೀದೇವಿ ಪ್ರಾರ್ಥಿಸಿದರು. ಟಿ.ಎಸ್. ಬಸವರಾಜ ಸ್ವಾಗತಿಸಿದರು. ಎಸ್. ಕೊಟ್ರೇಶ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.