ಬಳ್ಳಾರಿ

ಅಪರಿಚಿತರಿಂದ ಸಾರ್ವಜನಿಕರು ಎಚ್ಚರದಿಂದಿರಿ: ರವಿಕುಮಾರ್

Published On :

ಬಳ್ಳಾರಿ: ಸಾರ್ವಜನಿಕರು ತಮ್ಮ ಮನೆಗಳ ಬಳಿ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಬಂದು ಹೋಗುವ ಅಪರಿಚಿತರಿಂದ ಎಚ್ಚರವಿರಬೇಕೆಂದು ಗಾಂಧಿನಗರ ಪೊಲೀಸ್ ಠಾಣೆ ಪಿಐ ಜಿ.ಸಿ. ರವಿಕುಮಾರ್ ಮನವಿ ಮಾಡಿದರು.
ಸ್ಥಳೀಯ ಅಂಬೇಡ್ಕರ್ ನಗರದ ಸಮುದಾಯ ಭವನದ ಬಳಿ ಮಹಾನಂದಿ ಕೊಟ್ಟಂ, ಕನ್ನಡನಗರ, ಭಗತ್‌ಸಿಂಗ್ ನಗರ ಮತ್ತು ಅಂಬೇಡ್ಕರ್ ನಗರದ ನಿವಾಸಿಗಳಿಗಾಗಿ ಏರ್ಪಡಿಸಿದ್ದ ಅಪರಾಧ ತಡೆ ಮಾಸಾಚರಣೆಯಲ್ಲಿ ಅವರು ಮಾತನಾಡಿದರು. ಮನೆಯಿಂದ ಬಹಳ ದಿನಗಳವರೆಗೆ ಹೊರಗಡೆ ಹೋದಲ್ಲಿ ಅಕ್ಕಪಕ್ಕದವರಿಗೆ ತಿಳಿಸಿ ಸಮೀಪದ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು. ಎಟಿಎಂನಿಂದ ಹಣ ಬಾರದಿದ್ದಾಗ ಅಪರಿಚಿತರು ಸಹಾಯಕ್ಕೆ ಬಂದಂತೆ ಮಾಡಿ ಎಟಿಎಂ ಕಾರ್ಡ್‌ನ್ನು ಬದಲಿಸಿ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇರುತ್ತದೆ ಎಂದು ತಿಳಿಸಿದರು. ಗಾಂಧಿನಗರ ಠಾಣೆಯ ಪಿಎಸ್‌ಐ ವಿ. ಚಂದನ್ ಗೋಪಾಲ್, ಎಂ. ನಜೀರ್ ಅಹಮ್ಮದ್, ಪಾಲಿಕೆ ಸದಸ್ಯೆ ಡಿ. ಲಕ್ಷ್ಮೀ ನಾರಾಯಣಪ್ಪ, ಡಿ. ನಾರಾಯಣಪ್ಪ ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.