ಮಕ್ಕಳ ಮೇಲಿನ ದೌರ್ಜನ್ಯಕ್ಕೆ ಕಾನೂನಿನ ಹಿಡಿತ ಬೇಕು
ಕೂಡ್ಲಿಗಿ: ಪ್ರಜಾಪ್ರಭುತ್ವದ ಕಾನೂನಿನಲ್ಲಿ ಮಕ್ಕಳ ಹಕ್ಕುಗಳಿಗೆ ಹೆಚ್ಚಿನ ಮನ್ನಣೆ ಸಿಗಬೇಕಿದ್ದು, ಇಂದು ಕಾನೂನಿನ ಸಡಿಲದಿಂದ ಮಕ್ಕಳ ಮೇಲೆ ದೌರ್ಜನ್ಯ, ಅತ್ಯಾಚಾರ ಹೆಚ್ಚಾಗುತ್ತಿವೆ ಎಂದು ತಾಪಂ ಉಪಾಧ್ಯಕ್ಷ ಪೂಜಾರಹಳ್ಳಿ ಎಚ್. ಮಹೇಶ್ ಆತಂಕ ವ್ಯಕ್ತಪಡಿಸಿದರು.
ಅವರು ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಹೊಸಪೇಟೆ ಡಾನ್ಬಾಸ್ಕೋ ಸಂಸ್ಥೆ ಸಹಯೋಗದಲ್ಲಿ ನಡೆದ ಮಕ್ಕಳ ಕಾವಲು ಸಮಿತಿ ರಚನೆ ಮತ್ತು ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಸಮಾಜದಲ್ಲಿ ಎಲ್ಲರಂತೆ ಮಕ್ಕಳಿಗೂ ವಿಶೇಷ ಹಕ್ಕುಗಳನ್ನು ಕಲ್ಪಿಸಲಾಗಿದೆ. ಅವರ ಆಶಯಗಳಿಗೆ ಧಕ್ಕೆಯಾದರೆ ಕಾನೂನು ರೀತಿ ಶಿಕ್ಷೆಗೆ ಗುರಿಪಡಿಸಲು ಸಾಧ್ಯವಿದೆ. ಮಕ್ಕಳನ್ನು ಸಹ ಗೌರವಯುತವಾಗಿ ಸಮಾಜದಲ್ಲಿ ಕಾಣುವಂತಾಗಲಿ ಎಂಬ ಉದ್ದೇಶವಿರಬೇಕು ಎಂದ ಅವರು, ಮಕ್ಕಳ ಕಾವಲು ಸಮಿತಿ ರಚನೆಯ ಅನುಕೂಲ ಮತ್ತು ಉದ್ದೇಶಗಳನ್ನು ತಿಳಿಸಿದರು.
ಡಾನ್ಬಾಸ್ಕೋ ಸಂಸ್ಥೆ ಸಂಯೋಜಕ ಮಂಜುನಾಥ ಮಾತನಾಡಿ, ಮಕ್ಕಳ ಹಕ್ಕುಗಳ ಕಾವಲು ಸಮಿತಿಯನ್ನು ಎಲ್ಲ ಕಡೆ ರಚಿಸುವ ಅಗತ್ಯತೆ ಇದೆ. ಮಕ್ಕಳ ಹಕ್ಕುಗಳು ಮತ್ತು ಕರ್ತವ್ಯಗಳನ್ನು ಸಮಿತಿ ತೀರ್ಮಾನಿಸಿ ಸೂಕ್ತ ಸಲಹೆ ಸೂಚನೆಗಳನ್ನು ನೀಡುವ ಜವಾಬ್ದಾರಿ ಹೊಂದಿದೆ. ಇದರಿಂದ ಮಕ್ಕಳಿಗೆ ಅನುಕೂಲವಾಗಲಿದೆ ಎಂದರು.
ತಾಪಂ ಸದಸ್ಯ ಎನ್.ಪಿ. ಮಂಜುನಾಥ, ವಿಶಾಲಾಕ್ಷಿ ರಾಜಣ್ಣ, ಪಪಂ ಸದಸ್ಯ ಎಲ್.ಎಸ್. ಬಷೀರ್ ಅಹ್ಮದ್, ಶ್ರೀಧರ್, ವೆಂಕಟೇಶ್, ಅನಸೂಯಾ, ರೇಣುಕಮ್ಮ, ಕರವೇ ಅಧ್ಯಕ್ಷ ಕಾಟೇರ್ ಹಾಲೇಶ್, ವಂದೇ ಮಾತರಂ ಜನಜಾಗೃತಿ ಸಂಘದ ಅಧ್ಯಕ್ಷ ವಿ.ಜಿ. ವೃಷಭೇಂದ್ರ, ಶಿಕ್ಷಕ ಗುರುಬಸವರಾಜ ಇದ್ದರು.
ಮಕ್ಕಳ ಕಾವಲು ಸಮಿತಿ ಪದಾಧಿಕಾರಿಗಳು: ಪಪಂ ಆಡಳಿತಾಧಿಕಾರಿ ಫಿರೋಜ್ಖಾನ್, ಆಡಳಿತಾಧಿಕಾರಿ ಪಿ. ಪ್ರಮೋದ್, ಪಪಂ ಸದಸ್ಯ ಎಲ್.ಎಸ್. ಬಷೀರ್ ಅಹ್ಮದ್, ಬಿ. ಅನಸೂಯಾ, ಶ್ರೀಧರ್ ಉಮೇಶ್, ಸಣ್ಣಯ್ಯ, ಶಿಕ್ಷಕ ಕೆ. ಜಿನಾಬಿ, ಮಂಜುನಾಥ, ಕೆ. ಗುರುಬಸವರಾಜ, ಎಎಸ್ಐ ಸದ್ಯೋಜಾತನಗೌಡ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

