ಹುರುಡಿಯಲ್ಲಿ ಕೂಲಿ ಮಾಡುತ್ತಿದ್ದ ಬಾಲಕಿ ಮತ್ತೆ ಶಾಲೆಗೆ
ಕೂಡ್ಲಿಗಿ: ತಾಲೂಕಿನ ಹುರುಡಿಹಳ್ಳಿಯ 14 ವರ್ಷದ ಬಾಲಕಿ ಸುಶೀಲಾ 7ನೇ ತರಗತಿ ಪಾಸಾಗಿ ನಂತರ ವಿದ್ಯಾಭ್ಯಾಸ ಮೊಟಕುಗೊಳಿಸಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದು, ಈ ಬಾಲಕಿಯನ್ನು ಗುರುತಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿ. ಪೋಲಯ್ಯ ಪೋಷಕರ ಮನವೊಲಿಸಿ ಪುನಃ ವಸತಿ ಶಾಲೆಗೆ ಸೇರಿಸಿದ್ದಾರೆ.
ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿ. ಪೊಲಯ್ಯ ಇತ್ತೀಚಿಗೆ ಕೂಡ್ಲಿಗಿ ತಾಲೂಕು ಪ್ರವಾಸ ಕೈಗೊಂಡಾಗ ತಾಲೂಕಿನ ಚಿರತಗುಂಡು, ಎಂ.ಬಿ. ಅಯ್ಯನಹಳ್ಳಿ, ಸೂಲದಹಳ್ಳಿ ಮುಂತಾದ ಗ್ರಾಮಗಳಲ್ಲಿಯ ವಸತಿ ನಿಲಯಗಳಿಗೆ ಭೇಟಿ ನೀಡಿದ್ದರು. ಆಗ ಹುರುಡಿಹಳ್ಳಿಯ ಜಮೀನೊಂದರಲ್ಲಿ ಶೇಂಗಾ ಬಳ್ಳಿಯಲ್ಲಿ ಕಾಯಿಗಳನ್ನು ಕೀಳುತ್ತಿದ್ದ ಸುಶೀಲಾಳನ್ನು ವಿಚಾರಿಸಿದ್ದರು. ಅಲ್ಲದೆ, ತಕ್ಷಣವೇ ಗ್ರಾಮಕ್ಕೆ ಹೋಗಿ ಪೋಷಕರು ಹಾಗೂ ಗ್ರಾಮದ ಮುಖಂಡರ ಮನವೊಲಿಸಿ ವಡ್ಡಿನಕಟ್ಟೆಯಲ್ಲಿರುವ ಕಿತ್ತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗೆ ಸೇರಿಸಿದ್ದಾರೆ.
ಶಾಲೆ ಬಿಟ್ಟ ಬಾಲಕಿಯನ್ನು ಪುನಃ ಶಿಕ್ಷಣ ಭಾಗ್ಯ ಕಲ್ಪಿಸಿದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಸಿ. ಪೊಲಯ್ಯ ಕಾರ್ಯವನ್ನು ಗ್ರಾಮದ ಮುಖಂಡರು, ಪೋಷಕರು ಪ್ರಶಂಸಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

