ಬಳ್ಳಾರಿ

ಸಚ್ಚಾರಿತ್ರ್ಯದ ಸುಜ್ಞಾನವೆ ದೀಪೋತ್ಸವ: ಶ್ರೀ

Published On :

ಹೂವಿನಹಡಗಲಿ: ಪ್ರತಿಯೊಬ್ಬ ವ್ಯಕ್ತಿಯ ಮನದೊಳಗೆ ಉದಯಿಸುವ ಸಚ್ಚಾರಿತ್ರ್ಯದ ಸುಜ್ಞಾನವೆ ದೀಪೋತ್ಸವ ಎಂದು ಗವಿಮಠದ ಹಿರಿಶಾಂತವೀರ ಸ್ವಾಮೀಜಿ ಹೇಳಿದರು.
ಪಟ್ಟಣದ ಶ್ರೀರಾಮ ದೇವಸ್ಥಾನದ ಹತ್ತಿರ ಶ್ರೀದುರ್ಗಾದೇವಿ ಕಾರ್ತಿಕೋತ್ಸವದ ಧರ್ಮಸಭೆ ಉದ್ಘಾಟಿಸಿ ಮಾತನಾಡಿ, ದೇವರಿಗೆ ದೀಪ ಹಚ್ಚಿದರೆ ಸಾಲದು, ಬೆಳಕಿನಂತೆ ಜೀವನದಲ್ಲಿ ಸನ್ಮಾರ್ಗದಿಂದ ಸುಶಿಕ್ಷಿತರಾಗಿ ಬದುಕಬೇಕೆಂದ ಅವರು, ಸಮಿತಿಯವರು ಸಮಾಜಮುಖಿ ಕಾರ್ಯದಲ್ಲಿ ತೊಡಗಿ ಧಾರ್ಮಿಕ ಕಾರ್ಯಗಳನ್ನು ಅಳವಡಿಸಿಕೊಂಡಿರುವುದು ಶ್ಲಾಘನೀಯ ಎಂದರು.
ಡಿವೈಎಸ್ಪಿ ಆರ್.ಎಸ್. ಪಾಟೀಲ್ ಮಾತನಾಡಿ, ನಾಡಿನ ದಾರ್ಶನಿಕ ಶರಣರ ತತ್ವಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಬದುಕು ಸಾರ್ಥಕ, ಮನದ ಕಳೆಯನ್ನು ತೊಳೆದು ಸತ್‌ಚಿಂತನೆಗೆ ದಾರಿಯಾಗುವ, ಲೋಕ ಕಲ್ಯಾಣಾರ್ಥ ಧರ್ಮ ಕಾರ್ಯಗಳಲ್ಲಿ ಗ್ರಾಮೀಣ ಜಾನಪದವನ್ನು ಉಳಿಸುವ ಯುವಕರ ಕಾರ್ಯ ಯಶಸ್ಸು ತಂದಿದೆ ಎಂದರು.
ಇಟ್ಟಿಗಿ ಗುರುಶಾಂತ ದೇವರು ಸಮ್ಮುಖ ವಹಿಸಿದ್ದರು. ಶ್ರೀರಾಮ ದೇವಸ್ಥಾನದ ಧರ್ಮಕರ್ತ ರಾಮಸ್ವಾಮಿ ವೆಂಕಟೇಶಯ್ಯ ಅಧ್ಯಕ್ಷತೆ ವಹಿಸಿದ್ದರು. ಇದೇ ಸಂದರ್ಭದಲ್ಲಿ ದಾನಿಗಳನ್ನು ಶ್ರೀಗಳು ಸನ್ಮಾನಿಸಿದರು. ಪುರಸಭೆ ಸದಸ್ಯ ಕೆ. ತಿಮ್ಮಪ್ಪ, ಮಾಜಿ ಸದಸ್ಯ ಎಸ್. ಗೋಣೆಪ್ಪ, ಆರ್. ಚೈತನ್ಯ, ಮುಖಂಡ ಮಲ್ಲಿಕಪ್ಪ, ಟಿ. ಮಹಾಂತೇಶ, ಟಿ. ಫಕ್ಕೀರಪ್ಪ, ಟಿ. ರಾಮಮೂರ್ತಿ, ಎಚ್. ನಾಗಭೂಷಣ, ಅಣ್ಣಿಗೇರಿ ವೀರೇಶ್ ಉಪಸ್ಥಿತರಿದ್ದರು.
ಹಣ್ಣಿ ಬಸವರಾಜ, ಗಿರೀಶ ತಳಕಲ್ಲು, ಕೆ. ಅಶೋಕ, ಗಡಿಗಿ ಸಿದ್ದೇಶ, ಆರ್. ಚಂದ್ರಪ್ಪ, ಗಡಿಗಿ ನಾಗರಾಜ, ಬಳಿಗಾರ ಗುರುಶಾಂತ, ಗಡಗಿ ಪ್ರಕಾಶ್, ಜಿ. ಪುನೀತ್, ಬಸವಲಿಂಗಪ್ಪ, ಕೆ. ಪ್ರವೀಣ, ಬಿ. ಧರ್ಮರಾಜ, ಬೂದೇಶ್ ಭಾಗವಹಿಸಿದ್ದರು.
ಅಂಬಿಕಾ ಪ್ರಾರ್ಥಿಸಿದರು. ಆರ್. ರಾಕೇಶ್ ಸ್ವಾಗತಿಸಿದರು. ಉಪನ್ಯಾಸಕ ಎಚ್.ಎಂ. ಗುರುಬಸವರಾಜಯ್ಯ ನಿರೂಪಿಸಿದರು. ನಂತರ ರೋಣ ತಾಲೂಕಿನ ಕೊತಬಾಳದ ಅರುಣೋದಯ ಕಲಾತಂಡದ ಜಾನಪದ ಕಲಾವಿದ ಶಂಕ್ರಣ್ಣ ಕೊತಬಾಳ ಮತ್ತು ಸಂಗಡಿಗರ ಜಾನಪದ ವೈವಿಧ್ಯಮಯ ಕಾರ್ಯಕ್ರಮ ಜನಮನ ಸೆಳೆಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.