ನಾಳೆ ಜಿಎಸ್ಸೆಸ್ಗೆ ಗೀತ ನಮನ
ಬಳ್ಳಾರಿ: ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ನಿಧನದ ಹಿನ್ನೆಲೆಯಲ್ಲಿ ಜಿಎಸ್ಸೆಸ್ರಿಗೆ ನುಡಿನಮನ ಸಲ್ಲಿಸಲು ಸ್ಥಳೀಯ ಶ್ರೀ ಕನಕದುರ್ಗಮ್ಮ ವೃತ್ತದ ಬಳಿ ಡಿ. 29ರಂದು ಸಂಜೆ 6ಕ್ಕೆ ಜಿಎಸ್ಎಸ್ ಗೀತ ನಮನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ನಗರದಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಬಳ್ಳಾರಿಯ ಅಶ್ವತ್ಥ್ ಕಲಾ ಬಳಗದ ಅಧ್ಯಕ್ಷ ಯಲ್ಲನಗೌಡ ಶಂಕರಬಂಡೆ ಹಾಗೂ ಕನ್ನಡ ಕ್ರಾಂತಿ ದಳದ ಅಧ್ಯಕ್ಷ ದರೂರು ಶಾಂತನಗೌಡ ಮಾತನಾಡಿ, ಕನ್ನಡ ಕ್ರಾಂತಿ ದಳ, ಸಿ. ಅಶ್ವತ್ಥ್ ಕಲಾ ಬಳಗ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಬಳ್ಳಾರಿ ಮೀಡಿಯಾ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದ್ದು, ವಿಶ್ವಕವಿ ಕುವೆಂಪು ಹಾಗೂ ಜಿ.ಎಸ್. ಶಿವರುದ್ರಪ್ಪ ಅವರ ಕಾವ್ಯಗಳ ಗಾಯನವನ್ನು ಕಳೆದ ಐದು ವರ್ಷಗಳಿಂದ ಹಮ್ಮಿಕೊಳ್ಳುತ್ತಲೇ ಬರಲಾಗಿದೆ. ಈ ಬಾರಿ ರಾಷ್ಟ್ರಕವಿ ಜಿಎಸ್ಎಸ್ ಅವರ ನಿಧನ ಹಿನ್ನೆಲೆಯಲ್ಲಿ ಅವರಿಗೆ ನುಡಿನಮನ ಸಲ್ಲಿಸಲು ಕಾವ್ಯಗಾಯನ ನಡೆಯಲಿದೆ ಎಂದು ಹೇಳಿದರು.
ನಾಡಿನ ಖ್ಯಾತ ಸಾಹಿತಿ ಕುಂ. ವೀರಭದ್ರಪ್ಪ ಕಾರ್ಯಕ್ರಮ ಉದ್ಘಾಟಿಸುವರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಉಪ ನಿರ್ದೇಶಕ ಮಂಟೇಸ್ವಾಮಿ, ಎಎಸ್ಪಿ ಸಿ.ಕೆ. ಬಾಬಾ, ನಗರ ಡಿವೈಎಸ್ಪಿ ಮುರುಗಣ್ಣನವರ್, ಡಾ. ಮಂಜುನಾಥ್ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವರು ಎಂದು ಹೇಳಿದರು.
ರಾಷ್ಟ್ರಕವಿ ಜಿಎಸ್ಎಸ್ ಅವರ ಗೀತೆಗಳು ಮನೆ ಮಾತಾಗಿವೆ. ಭಾವಗೀತೆ ಪ್ರಪಂಚಕ್ಕೆ ಹೊಸ ಆಯಾಮ ನೀಡಿದ ಬಹುದೊಡ್ಡ ಕೀರ್ತಿ ಜಿಎಸ್ಎಸ್ ಅವರಿಗೆ ಸಲ್ಲುತ್ತದೆ. ಸಿ. ಅಶ್ವತ್ಥ್ ಅವರು ಹಾಡಿದ ಬಹುತೇಕ ಹಾಡುಗಳು ಜಿಎಸ್ಎಸ್ ಅವರವು. ಇಂತಹ ಮಹಾನ್ ಚೇತನಕ್ಕೆ ಶ್ರದ್ಧಾಂಜಲಿ ಸಲ್ಲಿಸುವ ಆಶಯದ ನೆಲೆಯಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

