ಬಳ್ಳಾರಿ

ಎನ್ನೆಸ್ಸೆಸ್‌ನಿಂದ ಮಾನವೀಯ ಮೌಲ್ಯ: ಸಚಿವ ಪರಮೇಶ್ವರ ನಾಯ್ಕ

Published On :

ಹೂವಿನಹಡಗಲಿ: ರಾಷ್ಟ್ರೀಯ ಸೇವಾ ಯೋಜನೆ ಕೇವಲ ಪಠ್ಯೇತರ ಚಟುವಟಿಕೆ ಅಲ್ಲ. ಇದರಿಂದ ವಿದ್ಯಾರ್ಥಿಗಳಲ್ಲಿ ಮಾನವೀಯ ಮೌಲ್ಯಗಳನ್ನು ಬಿತ್ತರಿಸುತ್ತದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರನಾಯ್ಕ ಅಭಿಪ್ರಾಯಪಟ್ಟರು.
ತಾಲೂಕಿನ ದತ್ತು ಗ್ರಾಮ ಹುಗಲೂರಿನಲ್ಲಿ ಜಿಬಿಆರ್ ಪಪೂ ಕಾಲೇಜಿನ ಎನ್‌ಎಸ್‌ಎಸ್ ಘಟಕದ ವಾರ್ಷಿಕ ವಿಶೇಷ ಸೇವಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಸಾರ್ವನಿಕರಿಗೆ ಅರಿವು ಮೂಡಿಸುವುದರ ಜತೆಗೆ ಸದೃಢ ಸಮಾಜ ನಿರ್ವಹಣೆಯಲ್ಲಿ ಎನ್‌ಎಸ್‌ಎಸ್ ಶಿಬಿರದ ಪಾತ್ರವಿದೆ. ವಿದ್ಯಾರ್ಥಿ ದೆಸೆಯಲ್ಲಿಯೇ ಸಹಕಾರ ಮತ್ತು ಸೇವಾ ಮನೋಭಾವನೆಗಳನ್ನು ಮೂಡಿಸುತ್ತದೆ ಎಂದರು.
ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಐಗೋಳ ಚಿದಾನಂದ ಅಧ್ಯಕ್ಷತೆ ವಹಿಸಿ ಮಾತನಾಡಿ, ಗಾಂಧೀಜಿಯವರ ಗ್ರಾಮಗಳ ರಾಮ ರಾಜ್ಯದ ಕನಸನ್ನು ನನಸು ಮಾಡುವುದೇ ಎನ್‌ಎಸ್‌ಎಸ್ ಘಟಕದ ಪ್ರಮುಖ ಕಾರ್ಯವಾಗಿದೆ ಎಂದರು.
ನಂದಿಹಳ್ಳಿ ಗ್ರಾಪಂ ಅಧ್ಯಕ್ಷೆ ಪಚ್ಚಿ ದೇವಕ್ಕ, ಜಿಪಂ ಸದಸ್ಯೆ ನಳಿನಿ ವೀರಭದ್ರಪ್ಪ, ತಾಪಂ ಪ್ರಭಾರಿ ಇಒ ರಂಗಪ್ಪ, ಗ್ರಾಪಂ ಸದಸ್ಯರಾದ ಎಲ್. ಸುಶೀಲಾಬಾಯಿ, ಎಚ್.ಪಿ. ಹಾಲಪ್ಪ, ಟಿ. ಮಲ್ಲಪ್ಪ, ಕಾಲೇಜು ಆಡಳಿತ ಮಂಡಳಿಯ ಸದಸ್ಯರಾದ ಸಿ. ಮೋಹನರೆಡ್ಡಿ, ಎಂ.ಪಿ.ಎಂ. ವೀರಭದ್ರ ದೇವರು, ಎಸ್‌ಡಿಎಂಸಿ ಅಧ್ಯಕ್ಷ ಎಂ. ಜಗದೀಶ, ಸದಸ್ಯರಾದ ಪಿ. ಪದ್ಮಗೌಡ, ಕೆ. ಕೊಟ್ರಪ್ಪ, ಶೋಭಾ, ನಿವೃತ್ತ ಶಿಕ್ಷಕ ಎಂ. ತೋಟನಗೌಡ, ಡಿ. ಕೊಟ್ರಪ್ಪ ಉಪಸ್ಥಿತರಿದ್ದರು.
ಪದವಿ ಕಾಲೇಜಿನ ಉಪನ್ಯಾಸಕ ಪ್ರೊ. ಎನ್. ವರಕುಮಾರಗೌಡ ಪ್ರತಿಜ್ಞಾವಿಧಿ ಬೋಧಿಸಿದರು.  
ಶಿಬಿರಾರ್ಥಿ ಸುಷ್ಮಾ ಸೊನಾರ್ ಪ್ರಾರ್ಥಿಸಿದರು. ಸೀಮಾ ಮತ್ತು ಸಂಗಡಿಗರು ಶಿಬಿರಗೀತೆ ಹಾಡಿದರು. ಶಿಬಿರದ ಅಧ್ಯಕ್ಷ ಹಾಗೂ ಪ್ರಾಚಾರ್ಯ ಡಾ. ಎ.ಎಂ. ರಾಜಶೇಖರಯ್ಯ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕನ್ನಡ ಉಪನ್ಯಾಸಕ ಎಚ್.ಎಂ. ಗುರುಬಸವರಾಜಯ್ಯ ನಿರೂಪಿಸಿದರು. ಡಾ. ಎಚ್.ಟಿ. ಶ್ರೀನಿವಾಸ ನಾಯಕ ವಂದಿಸಿದರು. ನಂತರ ಶಿಬಿರಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.