ಸ್ವಪ್ರೇರಣೆಯಿಂದ ಯುವಕರು ರಕ್ತದಾನ
ಕನ್ನಡಪ್ರಭ ವಾರ್ತೆ, ಕೂಡ್ಲಿಗಿ, ಡಿ. 30
ಕೆಲವೊಂದು ಸಂದರ್ಭಗಳಲ್ಲಿ ರೋಗಿಗಳಿಗೆ ಜೀವ ಉಳಿಸಲು ನೆರವಾಗುವ ರಕ್ತವನ್ನು ಇತ್ತೀಚಿನ ದಿನಗಳಲ್ಲಿ ಯುವಕರು ಸ್ವಯಂಪ್ರೇರಣೆಯಿಂದ ಮುಂದೆ ಬರುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಬಿಜೆಪಿ ಯುವಮೋರ್ಚಾ ಜಿಲ್ಲಾಧ್ಯಕ್ಷ ಪಂತರ್ ಜಯಂತ್ ಸಂತಸ ವ್ಯಕ್ತಪಡಿಸಿದರು.
ಪಟ್ಟಣದ ಗಾಂಧಿ ಚಿತಾಭಸ್ಮ ಸ್ಮಾರಕದಲ್ಲಿ ಮಾಜಿ ಪ್ರಧಾನಿ ವಾಜಪೇಯಿ ಹುಟ್ಟುಹಬ್ಬದ ನಿಮಿತ್ತ ನಡೆದ ಸ್ವಯಂಪ್ರೇರಿತ ರಕ್ತದಾನ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಸ್ತ್ರೀಯರಿಗೆ ಹೆರಿಗೆ, ರಸ್ತೆ ಅಪಘಾತ ಸೇರಿ ಅವಶ್ಯಕವಾಗಿರುವ ರಕ್ತ ನೀಡುವುದರಿಂದ ತಮ್ಮಗಳ ಆರೋಗ್ಯ ಕಾಳಜಿ ಜತೆ ಮತ್ತೊಬ್ಬರ ಜೀವ ಕಾಪಾಡಿದ ಪುಣ್ಯ ತಮ್ಮದಾಗುತ್ತದೆಂದರು.
ಜಿಲ್ಲೆಯಲ್ಲಿ ಯುವಶಕ್ತಿ ಹೆಚ್ಚಿನ ಉತ್ಸಾಹದಲ್ಲಿ ಪಕ್ಷ ಸಂಘಟನೆಯಲ್ಲಿ ತೊಡಗಿದ್ದಾರೆ. ಈ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗುವುದರಲ್ಲಿ ಸಂದೇಹವಿಲ್ಲ. ಅದಕ್ಕಾಗಿ ತಳಮಟ್ಟದಿಂದ ಯುವಕರನ್ನು ಸಂಘಟಿಸುವ ಪ್ರಯತ್ನ ಸಾಗಿದೆ ಎಂದರು. ಪಕ್ಷದ ರಾಷ್ಟ್ರೀಯ ಸದಸ್ಯ ಎಸ್. ತಿಂದಪ್ಪ ಮಾತನಾಡಿ, ಅಜಾತಶತ್ರು ವಾಜಪೇಯಿ ಪ್ರಧಾನಿಯಾಗಿದ್ದಾಗ ದೇಶ ಸುಭಿಕ್ಷೆಯಲ್ಲಿತ್ತು. ಯುಪಿಎ ಸರ್ಕಾರದ ಭ್ರಷ್ಟಾಚಾರದ ಹಗರಣಗಳಿಂದ ಜನತೆಗೆ ಅನ್ಯಾಯವಾಗುತ್ತಿದೆ. ಅದಕ್ಕಾಗಿ ಪ್ರತಿಯೊಬ್ಬರೂ ಮೋದಿಯನ್ನು ಪ್ರಧಾನಿ ಮಾಡುವ ಸಂಕಲ್ಪಕ್ಕೆ ಬದ್ಧರಾಗುವಂತೆ ಕರೆ ನೀಡಿದರು.
ಈ ಸಂದರ್ಭ ಜಿಲ್ಲಾ ಬಿಜೆಪಿ ಯುವಮೋರ್ಚಾ ಉಪಾಧ್ಯಕ್ಷ ಎಕ್ಕೆಗೊಂದಿ ನಾಗರಾಜ್, ಯುವ ಮುಖಂಡ ಸುನೀಲ್ ಪಾಟೀಲ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪೂಜಪ್ಪ, ಬಸವರಾಜ ನಾಲವತ್ತವಾಡ, ಕೆ.ಎನ್. ಕಾಂತರಾಜ್, ಮುಕ್ಕಪ್ಪ, ಬಿ. ರಾಮಪ್ಪ, ರಾಮುಕಾಟ್ವಾ, ಅನಂತ ಪದ್ಮನಾಭಶೆಟ್ಟಿ, ರಮೇಶ್ ನಾಯ್ಕ, ಧನಂಜಯಗೌಡ, ಸೂಲದಹಳ್ಳಿ ಜಂಬಣ್ಣ, ಇಮಡಾಪುರ ಚನ್ನಪ್ಪ, ಎಸ್ಸಿ ಮೋರ್ಚಾ ಉಪಾಧ್ಯಕ್ಷ ವೆಂಕಟೇಶ್, ಮಾಕನಡುಕು ಮಂಜುನಾಥ, ಹಡಗಲಿ ಸಂಜೀವರೆಡ್ಡಿ, ಸಂಡೂರು ವಿರೂಪಾಕ್ಷಿ, ಸತೀಶ್, ಹೊಸಹಟ್ಟಿ ನರಸಿಂಹಪ್ಪ, ಸತೀಶ್, ರಾಘವೇಂದ್ರ ಉಪ್ಪಾರ್, ಕಾನಹೊಸಹಳ್ಳಿ ಕರಿಯಪ್ಪ, ಕೊಟ್ಟೂರು ಪಪಂ ಸದಸ್ಯ ನಾಗರಾಜ್, ಪಾಪಣ್ಣ, ವಿಶ್ವಕರ್ಮ ವೆಂಕಟೇಶ್ ಇತರರಿದ್ದರು. ಬಳ್ಳಾರಿ ಸ್ವಾಮಿ ವಿವೇಕಾನಂದ ಮತ್ತು ಹೊಸಪೇಟೆ ಸಂಜೀವಿನಿ ರಕ್ತ ಭಂಡಾರದ ವೈದ್ಯರಾದ ಡಾ. ಮಂಜುನಾಥ, ಯುವರಾಜ, ಜಾಕೀರ್, ಹೊನ್ನೂರ್ ಸ್ವಾಮಿ, ಅನಿಲ್ಕುಮಾರ್ ಆಗಮಿಸಿದ್ದರು. ರಕ್ತದಾನ ಶಿಬಿರದಲ್ಲಿ ಸುಮಾರು 36ಕ್ಕೂ ಹೆಚ್ಚು ಯುವಕರು ರಕ್ತದಾನ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

