ಬಳ್ಳಾರಿ

ಕೈ, ಕಮಲ ಗುದ್ದಾಟ, ಫಲಾನುಭವಿಗೆ ಸಂಕಟ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಫೆ. 4
ಗಂಡ ಹೆಂಡಿರ ಜಗಳದಲ್ಲಿ ಕೂಸು ಬಡವಾಯ್ತು ಎಂಬಂತೆ ಕಾಂಗ್ರೆಸ್, ಬಿಜೆಪಿ ಗ್ರಾಮ ಪಂಚಾಯ್ತಿ ಸದಸ್ಯರು ಮನೆಗಳ ಹಂಚಿಕೆಯಲ್ಲಿ ನಡೆಸಿದ ಗುದ್ದಾಟದಲ್ಲಿ ಬಸವ ವಸತಿ ಯೋಜನೆ ಫಲಾನುಭವಿಗಳು ಮನೆಗಳಿಗೆ ಆಗ್ರಹಿಸಿ ಗ್ರಾಪಂ ಕಚೇರಿಗೆ ಮುತ್ತಿಗೆ ಹಾಕಿದ ಘಟನೆ ತಾಲೂಕಿನ ಸೋಗಿ ಗ್ರಾಮದಲ್ಲಿ ಸೋಮವಾರ ಜರುಗಿದೆ.
ಈ ಹಿಂದೆ ಸರ್ಕಾರ ಸೋಗಿ ಗ್ರಾಪಂಗೆ 403 ಬಸವ ವಸತಿ ಮನೆಗಳನ್ನು ಮಂಜೂರು ಮಾಡಿತ್ತು. ನಿಯಮ ಮೀರಿ ಹಂಚಿಕೆ ಮಾಡಲಾಗಿದೆ ಎಂದು ಗ್ರಾಪಂ ಮಾಜಿ ಅಧ್ಯಕ್ಷ ಮಹೇಶಪ್ಪ ಜಿಪಂ ಸಿಇಓಗೆ ದೂರು ಸಲ್ಲಿಸಿದ್ದರು.
ಹಂಚಿಕೆ ವಿಚಾರದಲ್ಲಿ ಗೊಂದಲ: ಇದಕ್ಕೂ ಮುನ್ನ ಸೋಗಿ ಗ್ರಾಪಂನ ಕಾಂಗ್ರೆಸ್, ಬಿಜೆಪಿ ಸದಸ್ಯರ ಮಧ್ಯೆ ಮನೆ ಹಂಚಿಕೆ ವಿಚಾರದಲ್ಲಿ ಸಾಕಷ್ಟು ಬಾರಿ ಗುದ್ದಾಟಗಳು ನಡೆದಿದ್ದವು. ಕೆಲ ಗೊಂದಲಗಳ ನಡುವೆಯೇ ಫಲಾನುಭವಿಗಳ ಆಯ್ಕೆ ಮಾಡಿದ್ದಾರೆ, ಮನೆಗಳ ಹಂಚಿಕೆ ವಿಚಾರವನ್ನು ಎರಡು ಪಕ್ಷಗಳು ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದೇ ಇಷ್ಟೆಲ್ಲಾ ಗೊಂದಲಗಳಿಗೆ ಕಾರಣ ಎಂಬ ಮಾತು ಕೇಳಿ ಬಂದವು.
ಈ ಹಿಂದೆ ಆಯ್ಕೆಯಾದ ಯೋಜನೆಯ ಫಲಾನುಭವಿಗಳು ಚೆಕ್ ವಿತರಣೆ ಮಾಡಬೇಕೆಂದು ಆಗ್ರಹಿಸಿ ಗ್ರಾಪಂಗೆ ಮುತ್ತಿಗೆ ಹಾಕಿದ್ದರು.
ಮತ್ತೆ 63 ಮನೆ ಮಂಜೂರು: ಸೋಗಿ ಗ್ರಾಪಂಗೆ ಮತ್ತೆ 63 ಇಂದಿರಾ ಅವಾಸ ಮನೆಗಳು ಮಂಜೂರಾಗಿವೆ. ಈ ವರೆಗೂ ಫಲಾನುಭವಿಗಳ ಆಯ್ಕೆ ನಡೆದಿಲ್ಲ, ಈ ಬಾರಿ ಕಾಂಗ್ರೆಸ್ ಸದಸ್ಯರಿಗೆ ಇಂತಿಷ್ಟು ಮನೆಗಳನ್ನು ನೀಡಲು ಅವಕಾಶ ನೀಡಬೇಕೆಂದು ವಾದ ಬಲವಾಗಿ ಕೇಳಿ ಬಂತು.
ರಾಜಿ ಪಂಚಾಯ್ತಿ: ಯೋಜನೆಯಡಿ ಬಹುತೇಕ ಕಡುಬಡವರಿಗೆ ಮತ್ತು ಗುಡಿಸಲು ವಾಸಿಗಳನ್ನು ಆಯ್ಕೆ ಮಾಡಿ ಮನೆ ಮಂಜೂರು ಮಾಡಲಾಗಿದೆ. ಹೀಗಾಗಿ ಗ್ರಾಮಕ್ಕೆ ಮಂಜೂರಾಗಿರುವ ಮನೆಗಳನ್ನು ಬಡವರಿಗೆ ಹಾಗೂ ಅರ್ಹ ಫಲಾನುಭವಿಗಳಿಗೆ ಹಂಚಿಕೆ ಮಾಡಬೇಕೆಂದು ಗ್ರಾಮದ ಹಿರಿಯರೊಬ್ಬರ ಸಲಹೆಯಂತೆ ಕಾಂಗ್ರೆಸ್ ಹಾಗೂ ಬಿಜೆಪಿ ಸದಸ್ಯರ ನಡುವೆ ರಾಜಿ ಮಾಡಿ ಈಗಿರುವ ಬಸವ ವಸತಿ ಯೋಜನಾ ಫಲಾನುಭವಿಗಳಿಗೆ ಮಂಗಳವಾರದಿಂದ ನೋಡಲ್ ಅಧಿಕಾರಿಗಳು ಬಂದು ಪರಿಶೀಲನೆ ಮಾಡಿ ಬಡವರಿಗೆ ಬುನಾದಿ ನಿರ್ಮಾಣದ ಚೆಕ್ ವಿತರಣೆ ಮಾಡಬೇಕೆಂದು ತೀರ್ಮಾನ ಕೈಗೊಳ್ಳಲಾಯಿತು. ಈ ಹಿನ್ನೆಲೆಯಲ್ಲಿ ಫಲಾನುಭವಿಗಳು ಪ್ರತಿಭಟನೆಯಿಂದ ಹಿಂದೆ ಸರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.