ಬಳ್ಳಾರಿ

ಶ್ರೀರಾಮುಲು ಹಾಲಿ ಕ್ಷೇತ್ರ ಕಳೆದುಕೊಳ್ಳುತ್ತಾರೆ

Published On :




ಹಗರಿಬೊಮ್ಮನಹಳ್ಳಿ: ಬಿಎಸ್ಸಾರ್ ಕಾಂಗ್ರೆಸ್ ಸಂಸ್ಥಾಪಕ ಬಿ. ಶ್ರೀರಾಮುಲು ರಾಜ್ಯದ ಮುಖ್ಯಮಂತ್ರಿ ಅಗುವುದಿರಲಿ, ಹಾಲಿ ಅವರು ಪ್ರತಿನಿಧಿಸುತ್ತಿರುವ ಬಳ್ಳಾರಿ ಗ್ರಾಮೀಣ ಕ್ಷೇತ್ರದಿಂದ ಈ ಬಾರಿ ಗೆದ್ದು ಬಂದರೆ ಸಾಕು. ಜಿಲ್ಲೆಯಲ್ಲಿ ಅವರ ಪಕ್ಷದ ಸಾಧನೆ ಸಂಪೂರ್ಣ ಶೂನ್ಯ ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ನಾರಾ ಸೂರ್ಯನಾರಾಯಣ ರೆಡ್ಡಿ ಭವಿಷ್ಯ ನುಡಿದರು.
ಪಟ್ಟಣದಲ್ಲಿ ಸೋಮವಾರ ಜರುಗಿದ ಜೆಡಿಎಸ್ ಕಾರ್ಯಕರ್ತರ ಸಮಾವೇಶದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶ್ರೀರಾಮುಲು ಹಾಗೂ ಅವರೊಂದಿಗಿರುವ ಬಹುತೇಕ ಮುಖಂಡರು ಆಕ್ರಮ ಗಣಿಗಾರಿಕೆಯಲ್ಲಿ ಹಣ ಲೂಟಿ ಹೊಡೆದವರೇ ಆಗಿದ್ದಾರೆ ಎಂದರು.
ಕಳೆದ ನಾಲ್ಕೂವರೆ ವರ್ಷದಲ್ಲಿ ಇವರು ಗಳಿಸಿರುವ ಆಕ್ರಮ ಆಸ್ತಿ, ಲೂಟಿ ಮಾಡಿದ್ದನ್ನು ಜಿಲ್ಲೆಯ ಮತದಾರ ಮರೆತಿಲ್ಲ. ಬರುವ ಚುನಾವಣೆಯಲ್ಲಿ ಬಿಎಸ್ಸಾರ್‌ಗೆ ಮತದಾರ ಸರಿಯಾದ ಪಾಠ ಕಲಿಸಲಿದ್ದಾನೆ. ಆ ಮೂಲಕ ಬಿಎಸ್ಸಾರ್ ಸಾಮ್ರಾಜ್ಯ ಕಣ್ಮರೆಯಾಗಲಿದೆ ಎಂದರು.
ಜಿಲ್ಲೆಯಲ್ಲಿ ಕಾಂಗ್ರೆಸ್ ಮತ್ತು ಬಿಎಸ್ಸಾರ್ ಮಧ್ಯ ಒಳಒಪ್ಪಂದ ಏರ್ಪಟ್ಟಂತೆ ಕಾಣುತ್ತಿದೆ. ಕಾಂಗ್ರೆಸ್ ಜಿಲ್ಲಾಧ್ಯಕ್ಷರೇ ನೇರವಾಗಿ ಬಿಎಸ್ಸಾರ್ ಜತೆಗೆ ಕೈಜೋಡಿಸಿದ್ದಾರೆ. ಇತ್ತೀಚಿಗೆ ಜರುಗಿದ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ ಚುನಾವಣೆಯೇ ಇದಕ್ಕೆ ಸಾಕ್ಷಿ ಎಂದರು.
ಯಾವುದೆ ಸಮಯದಲ್ಲಿ ಚುನಾವಣೆ ನಡೆದರು ಅದನ್ನು ಎದುರಿಸಲು ಪಕ್ಷ ಸಿದ್ಧವಿದ್ದು, ಜಿಲ್ಲೆಯ ಐದು ಕ್ಷೇತ್ರಗಳಲ್ಲಿ ನಾವು ಜಯಗಳಿಸುತ್ತೇವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಪಕ್ಷದ ಮುಖಂಡ ಮುಂಡ್ರಿಗಿ ನಾಗರಾಜ, ಸೋಮನಗೌಡ, ಬನ್ನಿಗೋಳ ವೆಂಕಣ್ಣ, ವೈ. ಮಲ್ಲಿಕಾರ್ಜುನ, ಮಾತಾಗ್ಯಾಸ್ ಎರ್ರಿಸ್ವಾಮಿ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.