ಎಬಿಸಿಡಿ ವರ್ಗೀಕರಣದಿಂದ ಮಾತ್ರ ಮಾದಿಗ ಸಮಾಜ ಅಭಿವೃದ್ಧಿ
ಕನ್ನಡಪ್ರಭ ವಾರ್ತೆ, ಸಿರುಗುಪ್ಪ, ಜು. 8
ಎಬಿಸಿಡಿ ವರ್ಗೀಕರಣವಾದಾಗ ಮಾತ್ರ ಮಾದಿಗ ಸಮಾಜ ಎಲ್ಲ ರಂಗಗಳಲ್ಲಿ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತದೆ ಎಂದು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿರಾಜ್ಯ ಪ್ರಧಾನ ಕಾರ್ಯದರ್ಶಿ ಎಚ್. ಅರ್ಜುನ ಅಭಿಪ್ರಾಯಪಟ್ಟರು.
ಅವರು ಮಾದಿಗ ದಂಡೋರ ಮಾದಿಗ ಮೀಸಲಾತಿ ಹೋರಾಟ ಸಮಿತಿಯ ಸಿರುಗುಪ್ಪ ತಾಲೂಕು ಬಲುಕುಂದಿ ಗ್ರಾಮ ಘಟಕವನ್ನು ಉದ್ಘಾಟಿಸಿ ಮಾತನಾಡಿ, ಸ್ವತಂತ್ರ ಪೂರ್ವದಿಂದ ಆಸ್ಪೃಶ್ಯರು, ಆಸ್ಪೃಶ್ಯರಾಗಿ ಉಳಿದಿರುವುದು ದುರದೃಷ್ಟಕರವಾಗಿದೆ. ಸಾಮಾಜಿಕ ನ್ಯಾಯ ಸರ್ವಧಿಕಾರದಿಂದ ವಂಚಿತರಾಗಿರತಕ್ಕಂತಹ ಮಾದಿಗ ಸಮಾಜವನ್ನು ಎಬಿಸಿಡಿ ವರ್ಗೀಕರಣ ಮಾಡಿದಾಗ ಮಾತ್ರ ನಿಜವಾದ ನ್ಯಾಯ ಮಾದಿಗ ಸಮುದಾಯಕ್ಕೆ ಸಿಗುತ್ತದೆ ಎಂದು ತಿಳಿಸಿದರು.
ಮಾದಿಗ ದಂಡೋರದ ಸಿರುಗುಪ್ಪ ತಾಲೂಕು ಅಧ್ಯಕ್ಷ ಎಂ. ವೀರೇಶ್ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಸಂಘಟನೆಯ ಎನ್.ಡಿ. ವೆಂಕಮ್ಮ, ಜಾನ್ಪ್ರಕಾಶ್, ಮುನಿಸ್ವಾಮಿ, ಕೊಡ್ಲೆ ಮಲ್ಲಿಕಾರ್ಜುನ, ಎಂ. ಮಹದೇವ ಉಪಸ್ಥಿತರಿದ್ದರು. ಬಲಕುಂದಿ ಗ್ರಾಮ ಘಟಕದ ಗೌರವಾಧ್ಯಕ್ಷರಾಗಿ ರಂಗಪ್ಪ, ಅಧ್ಯಕ್ಷರಾಗಿ ಶೇಖನ್ನ, ಕಾರ್ಯದರ್ಶಿಯಾಗಿ ಸಣ್ಣ ಪರಶುರಾಮ್, ವೀರೇಶ್, ಹಳೇಕೋಟೆ ಹನುಮಂತಪ್ಪ, ಸಣ್ಣ ಪರಶು, ಕಾಳಿಂಗಪ್ಪ, ಮಹಾಪ್ರಧಾನ ಕಾರ್ಯದರ್ಶಿಯಾಗಿ ಸಂಗನಕಲ್ ವೀರೇಶ್, ಖಜಾಂಚಿಯಾಗಿ ತಳವಾರು ಮಾತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

