ಅನ್ನಭಾಗ್ಯದಿಂದ 3500 ಕುಟುಂಬ ವಂಚಿತ
ಹಗರಿಬೊಮ್ಮನಹಳ್ಳಿ: ಕಂಪ್ಯೂಟರ್ ಆಪರೇಟರ್ಗಳು ಮಾಡಿದ ಪ್ರಮಾದದಿಂದ ತಾಲೂಕಿನ ಸುಮಾರು 3500ಕ್ಕೂ ಹೆಚ್ಚು ಕುಟುಂಬಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಜಾರಿಗೆ ತಂದ ಅನ್ನಭಾಗ್ಯ ಯೋಜನೆಯಿಂದ ವಂಚಿತವಾಗಿವೆ.
ಯಾರೋ ಮಾಡಿದ ತಪ್ಪಿಗೆ ಇದೀಗ ರು. 1ಗೆ ಕೆಜಿ ಅಕ್ಕಿಯಿಂದ ಈ ಕುಟುಂಬಗಳು ಸಂಪೂರ್ಣ ವಂಚಿತರಾಗುವಂತಾಗಿದೆ. ಅನ್ನಭಾಗ್ಯ ಆರಂಭವಾಗುವವರೆಗೂ ಬಿಪಿಎಲ್ ಕಾರ್ಡ್ ಪಡೆಯುವವರ ಯಾದಿಯಲ್ಲಿದ್ದ ಈ ಕುಟುಂಬಗಳ ಹೆಸರು, ಅನ್ನಭಾಗ್ಯ ಯೋಜನೆ ಆರಂಭವಾದ ನಂತರ ಫಲಾನುಭವಿಗಳ ಯಾದಿಯಲ್ಲಿ ಕಣ್ಮರೆಯಾಗಿವೆ. ಇದು ಜನತೆಯಲ್ಲಿ ತೀವ್ರ ಅಸಮಾಧಾನ ಉಂಟುಮಾಡಿದೆ.
ಬಿಪಿಎಲ್ ಪಡಿತರ ಚೀಟಿ ಪಡೆಯುವ ಸಲುವಾಗಿ ಜನವರಿಯಲ್ಲಿ ತಾಲೂಕಿನ ಪ್ರತಿ ಗ್ರಾಪಂನಲ್ಲಿ ವ್ಯವಸ್ಥೆ ಮಾಡಿದ್ದ ಪೋಟೋ ಸಹಿತ ಹೆಬ್ಬೆಟ್ಟು ಗುರುತು ಪಡೆಯುವಾಗ ಕಾರ್ಡ್ದಾರರು ನೀಡಿದ್ದ ಹೆಬ್ಬೆಟ್ಟು ಗುರುತು ಬಿಪಿಎಲ್ ಕಾರ್ಡ್ ವಿತರಿಸುವ ಸಮಯದಲ್ಲಿ ತಾಳೆಯಾಗಗಿಲ್ಲ. ಹೀಗಾಗಿ ಈ ಯೋಜನೆಯಿಂದ ಈ ಕುಟುಂಬಗಳು ವಂಚನೆಗೀಡಾಗಿವೆ. ಬಿಪಿಎಲ್ ಕಾರ್ಡ್ ಯಾದಿಯಲ್ಲಿ ಹೆಸರಿಲ್ಲದಿರುವ ಕುಟುಂಬಗಳನ್ನು ಸಹಜವಾಗಿಯೇ ಅನ್ನಭಾಗ್ಯ ಯೋಜನೆಯ ಫಲಾಭವಿಗಳ ಯಾದಿಯಿಂದ ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ಕೈಬಿಟ್ಟಿದೆ.
ಏನಿದು ಹೆಬ್ಬೆಟ್ಟು ಪ್ರಮಾದ?: ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಹಾಕಿದ ಪ್ರತಿ ಕುಟುಂಬಕ್ಕೆ ಸೇರಿದ 12 ವರ್ಷ ಮೇಲ್ಪಟ್ಟ ಸದಸ್ಯರ ಭಾವಚಿತ್ರ ಹಾಗೂ ಹೆಬ್ಬೆಟ್ಟು ಗುರುತು ಪಡಿತರ ಚೀಟಿಗೆ ಅಗತ್ಯ. ಸರ್ಕಾರದಿಂದ ನಿಯೋಜಿತವಾದ ಗಣಕಯಂತ್ರ ಸಂಸ್ಥೆಯವರು ಆಯಾ ಗ್ರಾಪಂನಲ್ಲಿ ಸ್ಥಾಪಿಸಿದ್ದ ಕೇಂದ್ರಗಳಿಗೆ ಇಡೀ ಕುಟುಂಬ ಸದಸ್ಯರು ಹೋಗಿ ಅಗತ್ಯವಿದ್ದ ದಾಖಲಾತಿ ಕೊಟ್ಟು, ಅಲ್ಲಿಯೇ ತಮ್ಮ ಭಾವಚಿತ್ರ ತೆಗೆಸಿ, ಹೆಬ್ಬೆಟ್ಟು ಒತ್ತಿದ್ದರು. ಇದರಿಂದ ಅರ್ಜಿ ಸಲ್ಲಿಸಿದ ಪಡಿತರ ಚೀಟಿ ಅಧಿಕೃತವಾಗುತ್ತದೆ. ಹೆಬ್ಬೆಟ್ಟು ಗುರುತು ಪಡೆಯುವಾಗ ಗಣಕಯಂತ್ರ ಆಪರೇಟರ್ಗಳು ಸಾಕಷ್ಟು ಮುತುವರ್ಜಿವಹಿಸುವುದು ಅಗತ್ಯ. ಸ್ವಲ್ಪ ಏರುಪೇರಾದರೆ ಎಲ್ಲ ಉಲ್ಟಾಪಲ್ಟ. ಈಗ ತಾಲೂಕಿನಲ್ಲಿ ಅಗಿರುವುದೇ ಇದು.
ಆಪರೇಟರ್ಗಳ ಯಡವಟ್ಟು: ಪಡಿತರ ಚೀಟಿಗಾಗಿ ಭಾವಚಿತ್ರ ಕ್ಲಿಕ್ಕಿಸುವ ಮತ್ತು ಹೆಬ್ಬೆಟ್ಟು ಮಾರ್ಕ್ ಪಡೆಯುವಾಗ ಎಲ್ಲ ಗ್ರಾಪಂಗಳಲ್ಲಿ ಸಾಕಷ್ಟು ಜನಸಂದಣಿ ಇತ್ತು. ಈ ಒತ್ತಡ ನಿವಾರಿಸಲು ಅವಸರವಸರವಾಗಿ ಹೆಬ್ಬೆಟ್ಟು ಗುರುತು ಪಡೆದಿದ್ದಾರೆ. ಜನವರಿಯಲ್ಲಿ ಹಲವು ಕುಟುಂಬಗಳ ಸದಸ್ಯರು ನೀಡಿದ್ದ ಹೆಬ್ಬೆಟ್ಟು ಗುರುತು, ಕಾರ್ಡ್ ವಿತರಿಸುವಾಗ ತಾಳೆಯಾಗಿಲ್ಲ. ಆಗ ಯಾವ ಕುಟುಂಬ ಸದಸ್ಯರ ಹೆಬ್ಬೆಟ್ಟು ತಾಳೆಯಾಗಿಲ್ಲವೋ ಆ ಕುಟುಂಬಗಳ ಬಿಪಿಎಲ್ ಕಾರ್ಡ್ನ್ನು ಆಹಾರ ಮತ್ತು ನಾಗರೀಕ ಪೂರೈಕೆ ಇಲಾಖೆ ರದ್ದುಗೊಳಿಸಿದೆ.
ಬಿಪಿಎಲ್ ಹಾಗೂ ಎಪಿಎಲ್ ಪಡಿತರ ಚೀಟಿಗಾಗಿ ಅರ್ಜಿ ಹಾಕಿದ ಪ್ರತಿ ಕುಟುಂಬಕ್ಕೆ ಸೇರಿದ 12 ವರ್ಷ ಮೇಲ್ಪಟ್ಟ ಸದಸ್ಯರ ಭಾವಚಿತ್ರ ಹಾಗೂ ಹೆಬ್ಬೆಟ್ಟು ಗುರುತು ಪಡಿತರ ಚೀಟಿಗೆ ಅಗತ್ಯ. ಸರ್ಕಾರದಿಂದ ನಿಯೋಜಿತವಾದ ಗಣಕಯಂತ್ರ ಸಂಸ್ಥೆಯವರು ಆಯಾ ಗ್ರಾಪಂನಲ್ಲಿ ಸ್ಥಾಪಿಸಿದ್ದ ಕೇಂದ್ರಗಳಿಗೆ ಇಡೀ ಕುಟುಂಬ ಸದಸ್ಯರು ಹೋಗಿ ಅಗತ್ಯವಿದ್ದ ದಾಖಲಾತಿ ಕೊಟ್ಟು, ಅಲ್ಲಿಯೇ ತಮ್ಮ ಭಾವಚಿತ್ರ ತೆಗೆಸಿ, ಹೆಬ್ಬೆಟ್ಟು ಒತ್ತಿದ್ದರು. ಇದರಿಂದ ಅರ್ಜಿ ಸಲ್ಲಿಸಿದ ಪಡಿತರ ಚೀಟಿ ಅಧಿಕೃತವಾಗುತ್ತದೆ. ಹೆಬ್ಬೆಟ್ಟು ಗುರುತು ಪಡೆಯುವಾಗ ಗಣಕಯಂತ್ರ ಆಪರೇಟರ್ಗಳು ಸಾಕಷ್ಟು ಮುತುವರ್ಜಿವಹಿಸುವುದು ಅಗತ್ಯ. ಸ್ವಲ್ಪ ಏರುಪೇರಾದರೆ ಎಲ್ಲ ಉಲ್ಟಾಪಲ್ಟ.
ಗ್ರಾಪಂನಲ್ಲಿ ಪೋಟೋ, ಹೆಬ್ಬೆಟ್ಟು ಗುರುತು ಪಡೆಯಲು ನೇಮಕವಾಗಿದ್ದ ಕಂಪ್ಯೂಟರ್ ಆಪರೇಟರ್ಗಳು ಮಾಡಿದ ಯಡವಟ್ಟಿನಿಂದಾಗಿ ಇವತ್ತು ಗ್ರಾಮೀಣ ಪ್ರದೇಶದಲ್ಲಿನ ಬಡವರು ಸರ್ಕಾರದ ಮಹತ್ವದ ಯೋಜನೆಯಿಂದ ವಂಚಿತರಾಗುವಂತಾಗಿದೆ. ಕೂಡಲೆ ಸರ್ಕಾರ ಹೆಬ್ಬೆಟ್ಟು ಗುರುತು ಪ್ರಮಾದದಲ್ಲಿ ಆಗಿರುವ ಲೋಪದೋಷ ಸರಿಪಡಿಸಿ, ಬಡವರಿಗೆ ಅನ್ನಭಾಗ್ಯ ಸೀಗುವಂತೆ ಮಾಡಬೇಕು.
- ಹೇಮಂತ್, ಮಾಲ್ವಿ ಗ್ರಾಮಸ್ಥ.
ಬಿಪಿಎಲ್ ಕಾರ್ಡ್ ರದ್ದಾಗಿರುವ ಕುರಿತು ಕಾರ್ಡ್ದಾರರಿಗೆ ಉತ್ತರ ಕೊಡಲು ಕಷ್ಟವಾಗುತ್ತಿದೆ. ನಮಗೆ ಅದೆಲ್ಲ ಗೊತ್ತಿಲ್ಲ, ನಾವು ಪೋಟೋ ತೆಗೆಸಿದ್ದೆವು, ಹೆಬ್ಬೆಟ್ಟು ಒತ್ತಿ ಬಂದಿದ್ದೇವೆ, ನಮಗೆ ರುಪಾಯಿಗೊಂದು ಕೆಜಿ ಅಕ್ಕಿ ಕೋಡಲೇಬೇಕು ಎಂದು ಜನ ಹಠ ಮಾಡುತ್ತಿದ್ದಾರೆ. ಇಂತಹ ಇಕ್ಕಟಿನ ಪರಿಸ್ಥಿತಿಯಿಂದ ನಾವು ಹೇಗೆ ಬಚಾವ್ ಆಗಬೇಕೋ ನಮಗೆ ದಾರಿತೋರದಂತಾಗಿದೆ.
- ಎಚ್.ಎ. ಕೊಟ್ರೇಶ್, ನ್ಯಾಯಬೆಲೆ ಅಂಗಡಿ ಮಾಲೀಕ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

