ವಿದ್ಯಾರ್ಥಿ ವೇತನಕ್ಕೆ ಆಯ್ಕೆ
ಹೊಸಪೇಟೆ: ಇಲ್ಲಿನ ವಿಕಾಸ ಸೌಹಾರ್ದ ಕೋ- ಆಪರೇಟಿವ್ ಬ್ಯಾಂಕ್ ಕೊಡಮಾಡುವ ವಿದ್ಯಾರ್ಥಿ ವೇತನಕ್ಕೆ 6 ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ವಿಕಾಸ ಬ್ಯಾಂಕ್ ಮುಖ್ಯಕಾರ್ಯನಿರ್ವಾಹಾಕ ಅಧಿಕಾರಿ ಇ. ಉಮಾದೇವಿ ತಿಳಿಸಿದ್ದಾರೆ.
2013-14ನೇ ಸಾಲಿಗೆ ವಿದ್ಯಾರ್ಥಿ ವೇತನ ಬಯಸಿ ಆರ್ಥಿಕ ದುರ್ಬಲ ಹಾಗೂ ಪ್ರತಿಭಾವಂತ ಒಟ್ಟು 40 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಈ ಪೈಕಿ ಸಾಮಾನ್ಯ ವರ್ಗ ಹಾಗೂ ಪ.ಜಾತಿ, ಪ.ಪಂಗಡದ ವರ್ಗದಿಂದ ಒಟ್ಟು 6 ವಿದ್ಯಾರ್ಥಿಗಳ ಆರ್ಥಿಕ ಮತ್ತು ವಿದ್ಯಾರ್ಹತೆ ಮಾನದಂಡದ ಮೇಲೆ ಬ್ಯಾಂಕ್ ವಿದ್ಯಾರ್ಥಿ ವೇತನಕ್ಕೆ ಆಯ್ಕೆಯಾಗಿದ್ದಾರೆ.
ಆಯ್ಕೆಯಾದ ವಿದ್ಯಾರ್ಥಿಗಳು: ಸಾಮಾನ್ಯ ವರ್ಗ ಹೊಸಪೇಟೆಯ ಬಿ. ವಿನಾಯಕ ಪ್ರಥಮ, ಅನುಷಾ ಕುಲಕರ್ಣಿ ದ್ವಿತೀಯ ಮತ್ತು ಡಣಾಪುರದ ಉಮಾದೇವಿ ತೃತೀಯ ಸ್ಥಾನಕ್ಕೆ ಆಯ್ಕಾಗಿದ್ದಾರೆ. ಪ. ಜಾತಿ ಮತ್ತು ಪ. ಪಂಗಡದ ಹೊಸಪೇಟೆಯ ಮೇಘನಾ ಎಸ್. ಪ್ರಥಮ, ಸಾಗರ ಜಿ. ದ್ವಿತೀಯ ಮತ್ತು ಗೌತಮ್ ನಾಯಕ್ ತೃತೀಯ ಸ್ಥಾನಕ್ಕೆ ಆಯ್ಕೆಯಾಗಿದ್ದಾರೆ. ಪ್ರಥಮ ಸ್ಥಾನ ಪಡೆದವರಿಗೆ ರು. 500, ದ್ವಿತೀಯ ರು. 400 ಹಾಗೂ ತೃತೀಯ ಸ್ಥಾನ ಪಡೆದವರು ರು. 300ಗಳನ್ನು ಎಪ್ರಿಲ್ ಹಾಗೂ ಮೇ ಹೊರತು ಪಡಿಸಿ ಎರಡು ವರ್ಷಗಳ ಕಾಲ ವಿದ್ಯಾರ್ಥಿವೇತನ ಪಡೆಯಲಿದ್ದಾರೆ. ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರು, ವಿದ್ಯಾರ್ಥಿ ವೇತನ ಆಯ್ಕೆ ಸಮಿತಿ ಸದಸ್ಯರು ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

