ಬಳ್ಳಾರಿ

ಪ್ರವಾಹ: ನಿರಾಶ್ರಿತರಿಗೆ ಶ್ರೀಕೃಷ್ಣದೇವರಾಯ ವಿವಿಯಿಂದ ಧನಸಹಾಯ

Published On :

ಬಳ್ಳಾರಿ: ಉತ್ತರಾಖಂಡದಲ್ಲಿ ಇತ್ತೀಚಿಗೆ ಪ್ರವಾಹಕ್ಕೆ ಸಿಲುಕಿ ನಿರಾಶ್ರಿತರಾದ ಸಂತ್ರಸ್ತರ ನೆರವಿಗಾಗಿ ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಅಧೀನದ ನಗರದ ಇಂಡೋ-ಅಮೆರಿಕನ್ ಡಿಗ್ರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳಿಂದ ಸಂಗ್ರಹಿಸಲಾದ ರು. 1,76,830ಗಳ ಡಿ.ಡಿ. ಮತ್ತು ಚೆಕ್ಕನ್ನು ವಿವಿಯ ಕುಲಪತಿ ಡಾ. ಮಂಜಪ್ಪ ಡಿ. ಹೊಸಮನೆ ಅವರು, ಜಿಲ್ಲಾಧಿಕಾರಿ ಎ.ಎ ಬಿಸ್ವಾಸ್‌ರ ಮೂಲಕ ಪ್ರಧಾನ ಮಂತ್ರಿಗಳ ವಿಪತ್ತು ಪರಿಹಾರ ನಿಧಿಗೆ ಸೋಮವಾರ ಮಧ್ಯಾಹ್ನ ಕಳುಹಿಸಿಕೊಟ್ಟರು.
ಸಂತ್ರಸ್ತರಿಗೆ ಪರಿಹಾರ ನಿಧಿಯನ್ನು ನೀಡಲು ವಿವಿ ವ್ಯಾಪ್ತಿಯ ಖಾಸಗಿ ಕಾಲೇಜುಗಳಲ್ಲಿ ಒಂದಾಗಿರುವ ಬಳ್ಳಾರಿಯ ಇಂಡೋ-ಅಮೇರಿಕನ್ ಡಿಗ್ರಿ ಕಾಲೇಜಿನ ಎನ್‌ಎಸ್‌ಎಸ್ ವಿದ್ಯಾರ್ಥಿಗಳು ನಗರದ ವಿವಿಧೆಡೆ ಸಂಚರಿಸಿ ಪರಿಹಾರ ಧನ ಸಂಗ್ರಹಿಸಿದ್ದರು.
ಜಾಥಾ: ಕಾಲೇಜಿನ ವಿದ್ಯಾರ್ಥಿಗಳು ಸೋಮವಾರ ಕಾಲೇಜಿನಿಂದ ಜಾಥಾ ಪ್ರಾರಂಭಿಸಿ, ನಗರದ ಕನಕ ವೃತ್ತ, ಎಸ್‌ಪಿ ವೃತ್ತ, ದುರ್ಗಮ್ಮ ಗುಡಿ ವೃತ್ತ, ಅಂಡರ್ ಬ್ರಿಡ್ಜ್, ರಾಯಲ್ ವೃತ್ತ, ಬೆಂಗಳೂರು ರಸ್ತೆ, ಕಾಳಮ್ಮ ಬೀದಿ ಮೂಲಕ ಜಿಲ್ಲಾಧಿಕಾರಿ ಕಚೇರಿ ತಲುಪಿದರು.
ವಿವಿ ಎನ್‌ಎಸ್‌ಎಸ್ ಘಟಕದ ಪರವಾಗಿ ಹಮ್ಮಿಕೊಂಡಿದ್ದ ಈ ಜಾಥಾದಲ್ಲಿ ವಿವಿಯ ಕುಲಪತಿ ಡಾ. ಮಂಜಪ್ಪ ಡಿ. ಹೊಸಮನೆ ಅವರು ಜಿಲ್ಲಾಧಿಕಾರಿಗೆ ರು. 1,56,830 ಲಕ್ಷಗಳ ಡಿಡಿ ಹಾಗೂ ರು. 20 ಸಾವಿರಗಳ ಚೆಕ್ ನೀಡಿದರು.
ಈ ಸಂದರ್ಭ ಎಸ್.ಪಿ ಡಾ. ಚೇತನ್‌ಸಿಂಗ್ ರಾಥೋರ್, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಸಿ. ಕೊಂಡಯ್ಯ, ವಿವಿ ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಡಾ.ಎಚ್. ರಾಮಕೃಷ್ಣ, ಕಾಲೇಜಿನ ಅಧ್ಯಕ್ಷ ಪಿ.ಎಚ್. ನಾಯ್ಡು, ಪ್ರಾಂಶುಪಾಲ ವಿಜಯ ಭಾಸ್ಕರರೆಡ್ಡಿ, ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ದಿನೇಶ್ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.