ಸುದ್ದಿ ಸಂಕ್ಷೇಪ
ಉಜ್ಜಿನಿ: ಬಿಜೆಪಿ ಕಾರ್ಯಕರ್ತರ ಸಭೆ
ಕೂಡ್ಲಿಗಿ: ಬಿಜೆಪಿ ಬಗ್ಗೆ ಜನತೆಯಲ್ಲಿ ಒಲವಿದೆ. ಆದರೆ ಪಕ್ಷದ ಮುಖಂಡರು ಒಗ್ಗೂಡಬೇಕಷ್ಟೇ. ಬರಲಿರುವ ಲೋಕಸಭೆ ಚುನಾವಣೆ ವೇಳೆಗೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಬಲಾಡ್ಯ ಪಕ್ಷವಾಗಿ ಹೊರಹೊಮ್ಮಲಿದೆ ಎಂದು ಬಿಜೆಪಿ ತಾಲೂಕು ಘಟಕದ ನೂತನ ಅಧ್ಯಕ್ಷ ಸಿ. ರೇವಣಸಿದ್ದಪ್ಪ ವಿಶ್ವಾಸ ವ್ಯಕ್ತಪಡಿಸಿದರು. ಅವರು ತಾಲೂಕಿನ ಉಜ್ಜಿನಿಯಲ್ಲಿ ನಡೆದ ಬಿಜೆಪಿ ಕಾರ್ಯಕರ್ತರ ಸಮಾಲೋಚನೆ ಹಾಗೂ ನೂತನ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಮಾತನಾಡಿ, ಪಕ್ಷದ ತತ್ವ, ಸಿದ್ಧಾಂತಗಳನ್ನು ನಂಬಿ ದುಡಿಯುವವರು ಬೇಕಾಗಿದ್ದಾರೆ. ಪಕ್ಷದ ಬಲವರ್ಧನೆಗೆ ಒತ್ತು ನೀಡಿ, ಪ್ರತಿ ಗ್ರಾಮದಲ್ಲಿ ಕಾರ್ಯಕರ್ತರನ್ನು ಸಂಘಟಿಸಲಾಗುವುದು ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಮುಖಂಡ ಸತೀಶ್ ಚಕ್ರವರ್ತಿ, ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗ್ರಾಮೀಣ ಮಟ್ಟದಿಂದ ಪಕ್ಷವನ್ನು ಪುನರ್ ಸಂಘಟಿಸುವ ಅನಿವಾರ್ಯತೆ ಇದೆ. ಈ ನಿಟ್ಟಿನಲ್ಲಿ ಮುಖಂಡರು, ಕಾರ್ಯಕರ್ತರು ಕಾರ್ಯಪ್ರವೃತ್ತರಾಗಬೇಕು ಎಂದು ಹೇಳಿದರು. ಜಿಲ್ಲಾ ಕಾರ್ಯದರ್ಶಿ ಕಾಂತರಾಜ, ಮುಖಂಡರಾದ ಎಂ. ರಾಮಪ್ಪ, ಸಫಾರೆ ರಾಜು, ಫೋಟೊ ತಿಪ್ಪೇಸ್ವಾಮಿ. ಕಾನಮಡುಗು ಜಯರಾಜ್, ಎಂ.ಬಿ. ಅಯ್ಯನಹಳ್ಳಿ ಜಿನ್ನಿದ ರಾಮಣ್ಣ, ಮೊಹಮ್ಮದ್ ಸುಭಾನಿ ಇದ್ದರು. ಬಿಜೆಪಿ ತಾಲೂಕು ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಸಿ. ರೇವಣಸಿದ್ದಪ್ಪ (ಅಧ್ಯಕ್ಷ) ಜಯರಾಜ್ (ಪ್ರಧಾನ ಕಾರ್ಯದರ್ಶಿ), ಚನ್ನಬಸವನಗೌಡ, ಟಿ. ಮಹೇಶ, ಸಂಕನಗೌಡ, ಶಿವರುದ್ರಪ್ಪ (ಉಪಾಧ್ಯಕ್ಷ), ಅಪ್ಪಾಜಿ (ಸಹ ಕಾರ್ಯದರ್ಶಿ), ಎಂ.ಬಿ. ಅಯ್ಯನಹಳ್ಳಿ ರಾಮಣ್ಣ (ಎಸ್ಟಿ ಮೋರ್ಚಾ ಅಧ್ಯಕ್ಷ), ಓಬಳೇಶ (ಕಾರ್ಯದರ್ಶಿ), ಕೆ.ನಾಗರಾಜ (ಸಹ ಕಾರ್ಯದರ್ಶಿ), ಶಿವಣ್ಣ ಚಲವಾದಿ (ಎಸ್ಸಿ ಮೋರ್ಚಾ ಅಧ್ಯಕ್ಷ), ಯು.ಎಂ. ಲಲಿತಮ್ಮ (ಮಹಿಳಾ ಮೋರ್ಚಾ ಅಧ್ಯಕ್ಷೆ), ಸರೋಜಮ್ಮ ಬೆನಕನಹಳ್ಳಿ (ಉಪಾಧ್ಯಕ್ಷೆ), ಮೊಹಮ್ಮದ್ ಸುಭಾನ್ (ಅಲ್ಪಸಂಖ್ಯಾತ ಘಟಕಾಧ್ಯಕ್ಷ), ಯೂಸಫ್ (ಕಾರ್ಯದರ್ಶಿ) ಆಯ್ಕೆಯಾಗಿದ್ದಾರೆಂದು ಜಿಲ್ಲಾ ಮುಖಂಡ ಸತೀಶ್ ಚಕ್ರವರ್ತಿ ಘೋಷಿಸಿದರು.
25ರಂದು ತಾಪಂ ಸಾಮಾನ್ಯ ಸಭೆ
ಬಳ್ಳಾರಿ: ಬಳ್ಳಾರಿ ತಾಪಂ ಸಭಾಂಗಣದಲ್ಲಿ ಜು. 25ರಂದು ಬೆಳಗ್ಗೆ 11ಕ್ಕೆ 12ನೇ ಸಾಮಾನ್ಯ ಸಭೆ ನಡೆಯಲಿದೆ. ತಾಪಂ ಸದಸ್ಯರು, ತಾಲೂಕು ಮಟ್ಟದ ಅಧಿಕಾರಿಗಳು ಹಾಜರಾಗಬೇಕೆಂದು ತಾಪಂ ಇಒ ಜಾನಕೀರಾಮ್ ತಿಳಿಸಿದ್ದಾರೆ.
ನಿಲಯ ಪ್ರವೇಶಕ್ಕೆ ಅರ್ಜಿ ಆಹ್ವಾನ
ಹೊಸಪೇಟೆ: ತಾಲೂಕಿನ ಸಮಾಜ ಕಲ್ಯಾಣ ಇಲಾಖೆಯಿಂದ ನಡೆಸಲಾಗುತ್ತಿರುವ ಮೆಟ್ರಿಕ್ ನಂತರದ ವಸತಿ ನಿಲಯಗಳ 2013-14ನೇ ಸಾಲಿನ ಪ್ರವೇಶಕ್ಕೆ ಅರ್ಹ ಪ. ಜಾತಿ, ಪಂಗಡದ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಬಾಲಕ, ಬಾಲಕಿಯರ ವಿದ್ಯಾರ್ಥಿ ನಿಲಯಗಳಲ್ಲಿ ಖಾಲಿ ಇರುವ ಸ್ಥಾನಗಳಿಗೆ ಅರ್ಜಿ ಅಹ್ವಾನಿಸಲಾಗಿದೆ. ಮೆಟ್ರಿಕ್ ನಂತರದ ಬಾಲಕ ಮತ್ತು ಬಾಲಕಿಯರ ವಸತಿ ನಿಲಯಗಳಿಗೆ ಪ. ಜಾತಿ, ಪ. ವರ್ಗದ ಬಾಲಕ ಮತ್ತು ಬಾಲಕಿಯರು ಅರ್ಜಿ ಸಲ್ಲಿಸಬಹುದು. ಅಭ್ಯರ್ಥಿಗಳ ಪೋಷಕರ ವಾರ್ಷಿಕ ವರಮಾನ 2.5 ಲಕ್ಷಗಳಿಗಿಂತ ಕಡಿಮೆಯಿದ್ದು, ಮೆಟ್ರಿಕ್ ನಂತರದ ಕೋರ್ಸುಗಳಲ್ಲಿ ವ್ಯಾಸಂಗ ಮಾಡುತ್ತಿರಬೇಕು. ಆಸಕ್ತರು ತಮ್ಮ ಅರ್ಜಿಗಳನ್ನು ಜುಲೈ 25ರೊಳಗಾಗಿ ತಾಲೂಕು ಸಮಾಜ ಕಲ್ಯಾಣಾಧಿಕಾರಿಗಳು, ಹೊಸಪೇಟೆ ಇವರ ಕಚೇರಿಗೆ ಸಲ್ಲಿಸಬೇಕು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

