ಬಳ್ಳಾರಿ

ವೃದ್ಧೆ ಕೊಲೆ ಪ್ರಕರಣ ಭೇದಿಸಿದ ಪೊಲೀಸರು : ಆರೋಪಿ ಬಂಧನ

Published On :

ಬಳ್ಳಾರಿ: ನಗರದಲ್ಲಿ ನವೆಂಬರ್ ತಿಂಗಳಲ್ಲಿ ನಡೆದಿದ್ದ ವೃದ್ಧೆಯ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.
ಕಳೆದ ವರ್ಷ ನವೆಂಬರ್ 24ರಂದು ನಗರದ ಸಭಾಪತಿ ಬೀದಿಯ ನಿವಾಸಿ ಎರ್ರೆಮ್ಮ (80) ಎಂಬ ವೃದ್ಧ ಮಹಿಳೆಯನ್ನು ಹರಿತವಾದ ಆಯುಧದಿಂದ ಹಲ್ಲೆ ನಡೆಸಿ, ತಲೆಗೆ ಹೊಡೆದು ಗಾಯಗೊಳಿಸಿ, ಕೊಲೆ ಮಾಡಿ ಬಂಗಾರದ ಒಡವೆಗಳು, ನಗದು ಹಣವನ್ನು ಕಳ್ಳತನ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ನಗರದ ಬ್ರೂಸ್‌ಪೇಟೆ ಪೊಲೀಸರು ಬೇಧಿಸಿದ್ದು, ಆರೋಪಿ ಕೊಟ್ರೇಶ್ ಎಂಬುವವನನ್ನು ಬಂಧಿಸಿದ್ದಾರೆ.
ಹೆಚ್ಚುವರಿ ಎಸ್ಪಿ ಸಿ.ಕೆ. ಬಾಬಾ ಮಾರ್ಗದರ್ಶನದಲ್ಲಿ ನಗರ ಡಿವೈಎಸ್‌ಪಿ ಮುರುಗಣ್ಣನವರ್ ನೇತೃತ್ವದಲ್ಲಿ ಸಿಪಿಐ ಬೋಪಯ್ಯ, ಪಿಎಸ್‌ಐ ನಿರಂಜನ್, ಎಎಸ್‌ಐ ಕೆ.ಎ. ಬಸವರಾಜ್, ಎಚ್‌ಸಿ ಜಟಿಂಗೆಪ್ಪ, ಪಿಸಿ ನಾಗರಾಜ್, ಸಿದ್ಧಯ್ಯ, ಮತ್ತು ಅನ್ವರ್ ಮತ್ತಿತರರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ.
ದಂಡುಪಾಳ್ಯ ಸಿನಿಮಾದಿಂದ ಪ್ರೇರಿತನಾಗಿ ಅದೇ ರೀತಿಯಲ್ಲಿ ವೃದ್ಧೆಯನ್ನು ರಾಡ್‌ನಿಂದ ಹೊಡೆದು ಕೈ ನರವನ್ನು ಕೊಯ್ದು ಕೊಲೆ ಮಾಡಿದ್ದನು. ಆರೋಪಿಯಿಂದ ಬಂಗಾರದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಎಸ್ಪಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.