ಬಳ್ಳಾರಿ

ಗ್ರಾಮೀಣ ಬ್ಯಾಂಕ್‌ನಲ್ಲೂ ಎಲ್ಲ ಸೌಲಭ್ಯ

Published On :

ಸಿರುಗುಪ್ಪ: ವಾಣಿಜ್ಯ ಬ್ಯಾಂಕ್‌ಗಳಂತೆ ಗ್ರಾಮೀಣ ಬ್ಯಾಂಕಿನಲ್ಲೂ ಎಲ್ಲ ರೀತಿಯ ಸೌಲಭ್ಯಗಳನ್ನು ಕಲ್ಪಿಸಲಾಗಿದ್ದು, ಗ್ರಾಹಕರು ಸದುಪಯೋಗಪಡಿಸಿಕೊಳ್ಳಿ ಎಂದು ಪ್ರಗತಿ ಗ್ರಾಮೀಣ ಬ್ಯಾಂಕಿನ ಪ್ರಾದೇಶಿಕ ಪ್ರಬಂಧಕ ಕೆ.ಎಂ. ಹಿರೇಮಠ ಹೇಳಿದರು. ಪಟ್ಟಣದಲ್ಲಿ ಗುರುವಾರ ನಡೆದ ಪ್ರಗತಿ ಗ್ರಾಮೀಣ ಬ್ಯಾಂಕಿನ ಗ್ರಾಹಕರ ಸಭೆಯಲ್ಲಿ ಅವರು ಮಾತನಾಡಿದರು. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ. ಅನೇಕ ನಿರ್ಬಂಧಗಳನ್ನು ಗ್ರಾಹಕರ ಅನುಕೂಲಕ್ಕಾಗಿ ಸಡಿಲಗೊಳಿಸಲಾಗಿದೆ. ಕಾನೂನುಬದ್ಧವಾಗಿ ನಡೆಸುವ ಯಾವುದೇ ವ್ಯವಹಾರಕ್ಕೂ ನಮ್ಮ ಬ್ಯಾಂಕು ಆರ್ಥಿಕ ನೆರವು ನೀಡಲಿದೆ ಎಂದರು.
ಪಿ.ಜಿ. ಬ್ಯಾಂಕಿನ ಮಹಾ ಪ್ರಬಂಧಕ ಸುಬ್ಬಾರಾವ್ ಮಾತನಾಡಿ, ಬ್ಯಾಂಕ್ ಮತ್ತು ಗ್ರಾಹಕರ ಮಧ್ಯೆ ಅನ್ಯೋನ್ಯವಾದ ಸಂಬಂಧ ಬೆಸೆದಾಗ ಮಾತ್ರ ಗ್ರಾಹಕರು ಅಭಿವೃದ್ಧಿಯಾಗುತ್ತಾರೆ. ಬ್ಯಾಂಕ್ ಏಳ್ಗೆಯಾಗುತ್ತದೆ ಎಂದು ತಿಳಿಸಿದರು.
ತಾಪಂ ಇ.ಓ. ರಾಧಾಕೃಷ್ಣರೆಡ್ಡಿ ಮಾತನಾಡಿ, ಬ್ಯಾಂಕ್‌ಗಳಲ್ಲಿ ಸರ್ಕಾರದ ಯೋಜನೆಗಳಿಂದ ಸಾಲ ಪಡೆದ ಗ್ರಾಹಕರು ಸಕಾಲಕ್ಕೆ ಸಾಲ ಮರುಪಾವತಿ ಮಾಡಿರಿ ಎಂದು ಹೇಳಿದರು. ಬ್ಯಾಂಕ್‌ನ ಶಾಖಾ ವ್ಯವಸ್ಥಾಪಕ ಎಸ್. ಗುರುರಾಜ ಬ್ಯಾಂಕಿನ ಸಾಧನೆ ವಿವರಿಸಿದರು. ಸಭೆಯಲ್ಲಿ ಗ್ರಾಹಕರಾದ ತೆಕ್ಕಲಕೋಟೆಯ ಪಾಂಡುರಂಗದೇಸಾಯಿ, ಬಾಗವಾಡಿ ಮುದುಕಪ್ಪನಾಯಕ್, ಆಂಜಿನೇಯಲು ಹಾಗೂ ಇತರರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಎಸ್.ಕೆ. ಹನುಮೇಶರಾವ್ ಸ್ವಾಗತಿಸಿದರು. ಪ್ರವೀಣಕುಮಾರ್ ವೇದಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.