ಬಳ್ಳಾರಿ

ವಿದ್ಯುತ್ ತಂತಿ ಸಮಸ್ಯೆ ನಿವಾರಿಸಿ: ಜೆಸ್ಕಾಂಗೆ ಮನವಿ

Published On :

ಬಳ್ಳಾರಿ: ವಿದ್ಯುತ್ ತಂತಿಗಳಿಂದ ಸಾರ್ವಜನಿಕರು ಎದುರಿಸುತ್ತಿರುವ ಸಮಸ್ಯೆಗಳನ್ನು ನಿವಾರಿಸುವಂತೆ ಒತ್ತಾಯಿಸಿ ಸ್ಥಳೀಯ ರೆಡ್ಡಿ ಬೀದಿಯ ನಾಗರಿಕ ವೇದಿಕೆ ನೇತೃತ್ವದಲ್ಲಿ ಜೆಸ್ಕಾಂಗೆ ಮನವಿ ಸಲ್ಲಿಸಲಾಯಿತು.
ವೇದಿಕೆ ಅಧ್ಯಕ್ಷ ಎಸ್. ಮಂಜುನಾಥ ಈ ಸಂದರ್ಭದಲ್ಲಿ ಮಾತನಾಡಿ, ರೆಡ್ಡಿ ಬೀದಿಯಲ್ಲಿ ವಿದ್ಯುತ್ ತಂತಿಗಳು ದಾರಿಹೋಕರಿಗೆ ತಗಲುವಂತೆ ಕೆಳಗೆ ನೇತಾಡುತ್ತಿವೆ. ಕೆಲವೆಡೆ ಎರಡು ಕಂಬಗಳ ಮಧ್ಯೆ ಹೆಚ್ಚು ಅಂತರವಿರುವ ಕಾರಣ ತಂತಿಗಳು ಬಹಳಷ್ಟು ಕೆಳಗೆ ಜೋತುಬಿದ್ದಿದ್ದು, ಯಾವುದೇ ಕ್ಷಣದಲ್ಲಿ ಕತ್ತರಿಸಿ ಬೀಳುವ ಅಪಾಯವಿದೆ. ಸೂಕ್ತ ವ್ಯವಸ್ಥೆ ಮಾಡಬೇಕೆಂದು ಒತ್ತಾಯಿಸಿದರು.
ಇದೇ ಬೀದಿಯಲ್ಲಿ ಶಾಲೆಯಿರುವುದರಿಂದ ವಿದ್ಯುತ್ ತಂತಿಯ ಕೆಳಗೆ ಯಾವಾಗಲು ಶಾಲಾ ಮಕ್ಕಳು ಆಟವಾಡುತ್ತಿರುತ್ತಾರೆ. ತಿಂಗಳ ಹಿಂದಷ್ಟೇ ರೆಡ್ಡಿ ಬೀದಿಯ ಪಕ್ಕದ ಕಮ್ಮಿಂಗ್ ರಸ್ತೆಯಲ್ಲಿ ವಿದ್ಯುತ್ ತಂತಿ ಕತ್ತರಿಸಿ ಬಿದ್ದು ಇಬ್ಬರು ಮೃತಪಟ್ಟಿದ್ದು, ಆದರೂ ಕ್ರಮಕ್ಕೆ ಮುಂದಾಗಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಹಲವು ಬಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅಮಾಯಕರ ಪ್ರಾಣ ಕಾಪಾಡಬೇಕೆಂದು ಜೆಸ್ಕಾಂಗೆ ಮನವಿ ಮಾಡಿದರು.
ಸಹಾಯಕ ಕಾರ್ಯನಿರ್ವಾಹಕ ಅಭಿಯಂತ ರಾಘವೇಂದ್ರ ಮನವಿ ಸ್ವೀಕರಿಸಿದರು. ರೆಡ್ಡಿ ಬೀದಿ ನಾಗರಿಕ ವೇದಿಕೆಯ ಎಸ್. ವಿಶ್ವನಾಥ್, ಟಿ. ವಿನಯ್, ಎಸ್. ಅರ್ಜುನ್, ಆರ್. ರಮೇಶ್, ಬಿಎಂಡಿ ಶಾಲೆಯ ಮುಖ್ಯಗುರು ಈ. ಉಷಾರಾಣಿ, ಶಿಕ್ಷಕಿ ಭಾನುಮತಿ ಮತ್ತು ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.