ಮೂಕ ವಿಧವೆ ಮೇಲೆ ಗ್ಯಾಂಗ್‌ರೇಪ್
ಹೂವಿನಹಡಗಲಿ: ಮೂಕ ವಿಧವೆ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಘಟನೆ ಸೋಮವಾರ ಸಂಜೆ ತಾಲೂಕಿನ ಕೊಯಿಲಾರಗಟ್ಟಿ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಅತ್ಯಾಚಾರಕ್ಕೆ ಒಳಗಾಗಿರುವ ಮಹಿಳೆ ಸಮೀಪದ ಬಸರಹಳ್ಳಿ ತಾಂಡಾಕ್ಕೆ ಸೇರಿದವಳು. ಈಕೆಯ ಮೇಲೆ ಅತ್ಯಾಚಾರ ಎಸಗಿರುವ ಇಬ್ಬರು ಯುವಕರೂ ಇದೇ ತಾಂಡಾದವರು. ವಾಲ್ಯಾನಾಯ್ಕ (26), ರಾಜನಾಯ್ಕ (26) ಇಬ್ಬರು ಆರೋಪಿಗಳನ್ನು ಮಂಗಳವಾರ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಇಲ್ಲಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಪರೀಕ್ಷೆ ನಡೆಸಿದಾಗ ಅತ್ಯಾಚಾರ ಎಸಗಿದ್ದು ದೃಢಪಟ್ಟಿದೆ. ಅದೇ ಆಸ್ಪತ್ರೆಯಲ್ಲಿ ಮಹಿಳೆಗೆ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಹೂವಿನಹಡಗಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಭಾರಿ ಸಿಪಿಐ ವಿಜಯಕುಮಾರ ತನಿಖೆ ಕೈಗೆತ್ತಿಕೊಂಡಿದ್ದಾರೆ.
ಘಟನೆ ಹಿನ್ನೆಲೆ: ಅತ್ಯಾಚಾರಕ್ಕೆ ಒಳಗಾದ ಮಹಿಳೆ ಮೂಲತಃ ಮುಂಡರಗಿ ತಾಲೂಕಿನವಳಾಗಿದ್ದು, ಮೂಕಿ. ಮಾಸಿಕ ಅಂಗವಿಕಲರ ವೇತನ ಪಡೆಯಲು ಸೋಮವಾರ ಮುಂಡರಗಿಗೆ ಹೋಗಿದ್ದಾಳೆ. ಅತ್ಯಾಚಾರ ಎಸಗಿದ ಈ ಇಬ್ಬರು ಯುವಕರು ಜೆಸಿಬಿ ಆಪರೇಟರ್‌ಗಳಾಗಿ ಕೆಲಸ ಮಾಡುತ್ತಿದ್ದು, ಕೊಯಿಲಾರಗಟ್ಟಿಯಲ್ಲಿ ಪಾನಮತ್ತರಾಗಿ ಬೈಕ್‌ನಲ್ಲಿ ಬರುವ ದಾರಿ ಮಧ್ಯದಲ್ಲಿ ಈ ವಿಧವೆ ಮಹಿಳೆ ನಡೆದು ಹೋಗುತ್ತಿರುವುದನ್ನು ಕಂಡು ನಿಮ್ಮ ತಾಂಡಾಕ್ಕೆ ಹೋಗುತ್ತಿದ್ದೇವೆ, ಬೈಕ್‌ನಲ್ಲಿ ಹೋಗೋಣ ಬಾ ಎಂದು ಕರೆದು ದಾರಿ ಮಧ್ಯೆದಲ್ಲಿ ಬರುವ ಕೊಯಿಲಾರಗಟ್ಟಿ ಅರಣ್ಯ ಪ್ರದೇಶದಲ್ಲಿ ಈ ಮಹಿಳೆಗೆ ಒತ್ತಾಯಪೂರ್ವಕವಾಗಿ ಮದ್ಯ ಕುಡಿಸಿ, ಅರಣ್ಯ ರಕ್ಷಣೆಗೆ ತೆಗೆಯಲಾಗಿದ್ದ ಗುಂಡಿಯಲ್ಲಿ ಕರೆದೊಯ್ದು ಅತ್ಯಾಚಾರ ಎಸಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. ಬಸರಹಳ್ಳಿ ತಾಂಡಾಕ್ಕೆ ಹೋಗಿ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು ತನ್ನ ಅಕ್ಕನಿಗೆ ತಿಳಿಸಿದ್ದಾಳೆ. ಆಗ ತಾಂಡಾದ ಕೆಲ ಜನ ಪಂಚಾಯಿತಿ ಮಾಡಿ ಮುಗಿಸುವ ಹಂತಕ್ಕೆ ಬಂದಿದ್ದರು. ಆದರೆ ಪ್ರತ್ಯಕ್ಷದರ್ಶಿ ಕೂಬ್ಯಾನಾಯ್ಕ ಎಂಬುವವರು ಮಹಿಳೆಯ ಪರ ದೂರು ನೀಡಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

