ಬಳ್ಳಾರಿ

ಎಡಪಂಥೀಯ ಮುಖಂಡ ಚಂದ್ರಶೇಖರ ಬೆನ್ನೂರು ನಿಧನ

Published On :

ಹೂವಿನಹಡಗಲಿ: ಎಡಪಂಥೀಯ ಧೋರಣೆಗಳನ್ನು ಮೈಗೂಡಿಸಿಕೊಂಡಿದ್ದ ಕೊಟ್ಟೂರು ಪಿಕಾರ್ಡ್ ಬ್ಯಾಂಕ್ ವ್ಯವಸ್ಥಾಪಕ ಚಂದ್ರಶೇಖರ ಬೆನ್ನೂರು (59) ಗುರುವಾರ ಸಂಜೆ ನಿಧನರಾಗಿದ್ದಾರೆ. ಮೃತರಿಗೆ ಪತ್ನಿ, ಇಬ್ಬರು ಪುತ್ರಿಯರು, ಓರ್ವ ಪುತ್ರ ಇದ್ದಾರೆ. ಶುಕ್ರವಾರ ಪಟ್ಟಣದಲ್ಲಿ ಅವರ ಅಂತ್ಯಕ್ರಿಯೆ ಜರುಗಿತು.
ಅವರು ಈ ಹಿಂದೆ ಹೂವಿನಹಡಗಲಿ, ದಾವಣಗೆರೆ, ಕೊಪ್ಪಳ ಪಿಕಾರ್ಡ್ ಬ್ಯಾಂಕ್‌ಗಳಲ್ಲಿ ಸೇವೆ ಸಲ್ಲಿಸಿದ್ದರು. ರೈತಪರ ಚಳವಳಿಯಲ್ಲಿ ಗುರುತಿಸಿಕೊಂಡಿದ್ದ ಬೆನ್ನೂರು, ನರಗುಂದ, ನವಲಗುಂದ ರೈತ ಬಂಡಾಯ ಚಳವಳಿಯಲ್ಲಿ ಹೂವಿನಹಡಗಲಿ ತಾಲೂಕಿನ ನೇತೃತ್ವ ವಹಿಸಿದ್ದರು. ಕೊಮಾರನಹಳ್ಳಿ ತಾಂಡ ಹಾಗೂ ಬೂದನೂರು ಭೂ ಹೋರಾಟ ಚಳವಳಿಯಲ್ಲಿ ಪಾಲ್ಗೊಂಡಿದ್ದರು. ಕಮ್ಯುನಿಸ್ಟ್ ಸಿದ್ಧಾಂತಗಳೊಟ್ಟಿಗೆ, ಮಾರ್ಕ್ಸ್‌ವಾದಿ ಚಿಂತಕರಾಗಿದ್ದರು.
ಸಂತಾಪ: ಚಂದ್ರಶೇಖರ ಬೆನ್ನೂರು ನಿಧನಕ್ಕೆ ಕಾರ್ಮಿಕ ಖಾತೆ ರಾಜ್ಯ ಸಚಿವ ಪಿ.ಟಿ. ಪರಮೇಶ್ವರನಾಯ್ಕ್, ಶಾಸಕ ಎಂ.ಪಿ. ರವೀಂದ್ರ, ಮಾಜಿ ಸಚಿವ ಈಟಿ. ಶಂಭುನಾಥ, ಮಾಜಿ ಶಾಸಕರಾದ ನಂದಿಹಳ್ಳಿ ಹಾಲಪ್ಪ, ಬಿ. ಚಂದ್ರನಾಯ್ಕ್, ಸಿಪಿಐ ಪಕ್ಷದ ರಾಷ್ಟ್ರೀಯ ಮಂಡಳಿ ಸದಸ್ಯ ಡಾ. ಸಿದ್ದನಗೌಡ ಪಾಟೀಲ, ಸಿಐಟಿಯುಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಪ್ರಸನ್ನಕುಮಾರ್, ಸಾಹಿತಿಗಳಾದ ಎಚ್. ಶೇಷಗಿರಿರಾವ್, ಬಿ. ಪೀರಬಾಷ, ಪಿ.ಆರ್. ವೆಂಕಟೇಶ್, ಕಸಾಪ ಅಧ್ಯಕ್ಷ ಸುರೇಶ ಅಂಗಡಿ, ಮಾಜಿ ಅಧ್ಯಕ್ಷ ಎಚ್.ಜಿ. ಪಾಟೀಲ, ಎಐಟಿಯುಸಿ ಅಧ್ಯಕ್ಷ ಎಚ್. ಬಸವನಗೌಡ, ಕಾರ್ಯದರ್ಶಿ ಮತ್ತಿಹಳ್ಳಿ ಬಸವರಾಜ, ಅಂಗನವಾಡಿ ಫೆಡರೇಷನ್‌ನ ಬಿ. ಕಮಲಾಕ್ಷಿ, ಎನ್. ಮಂಜುಳಾ, ಪ್ರಗತಿಪರ ಸಂಘಟನೆಯ ಎಂ. ಚಿದಾನಂದ ಸಂತಾಪ ಸೂಚಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.