ಬಳ್ಳಾರಿ

ಇಂದು ತಪಾಸಣೆ ಶಿಬಿರ (ಸುದ್ದಿ ಸಂಕ್ಷೇಪ)

Published On :

ಹೊಸಪೇಟೆ: ಇಲ್ಲಿನ ಟಿಎಂಎಇ ಸಂಸ್ಥೆಯ ಎಸ್‌ಸಿಎಸ್ ಆಯುರ್ವೇದಿಕ್ ಆಸ್ಪತ್ರೆ ಹಾಗೂ ಧಾರವಾಡದ ಎಸ್‌ಡಿಎಂ ನಾರಾಯಣ ಹೃದಯಾಲಯದ ಸಹಯೋಗದಲ್ಲಿ ಉಚಿತ ಹೃದಯ ರೋಗ ತಪಾಸಣೆ ಮತ್ತು ಸಲಹಾ ಶಿಬಿರವನ್ನು ಸಂಕ್ಲಾಪುರದ ಆಯುರ್ವೇದಿಕ್ ಆಸ್ಪತ್ರೆಯಲ್ಲಿ ಮಾ. 25ರಂದು ಬೆಳಗ್ಗೆ 10.30ಕ್ಕೆ ಹಮ್ಮಿಕೊಳ್ಳಲಾಗಿದೆ. ನಗರದ ಅನಂತಶಯನಗುಡಿ, ಎಂ.ಪಿ. ಪ್ರಕಾಶ ನಗರ, ಬಳ್ಳಾರಿ ವೃತ್ತದ ಎಂಬಿಟಿ ಪೆಟ್ರೋಲ್ ಬಂಕ್, ರಾಣಿಪೇಟೆಯ ಎಸ್‌ವಿಕೆ ಬಸ್‌ನಿಲ್ದಾಣ, ವಿಜಯನಗರ ಕಾಲೇಜು ಎದುರುಗಡೆ, ಸಹಕಾರಿ ಕಲ್ಯಾಣ ಮಂಟಪ, ಐಎಸ್‌ಆರ್ ಕಾರ್ಖಾನೆ ಹಾಗೂ ಬಿಎಸ್‌ಎನ್‌ಎಲ್ ಕಚೇರಿಯ ಮುಂದುಗಡೆ ಈ ಸ್ಥಳಗಳಿಂದ ಸಂಕ್ಲಾಪುರದ ಆಸ್ಪತ್ರೆಗೆ ಕರೆ ತರಲು ನಿರಂತರವಾಗಿ ಉಚಿತ ವಾಹನಗಳ ವ್ಯವಸ್ಥೆ ಮಾಡಲಾಗಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಡಾ. ಚಂದ್ರಶೇಖರ ಮೊ.ಸಂ-9916010811 ಹಾಗೂ ತಪಾಸಣೆಯ ನೋಂದಣಿಗಾಗಿ ಮೊ.ಸಂ-9845118022ಗೆ ಸಂಪರ್ಕಿಸುವಂತೆ ಪತ್ರಿಕಾ ಹೇಳಿಕೆಯಲ್ಲಿ ಕೋರಿದ್ದಾರೆ.
ಎಚ್‌ಐವಿ, ಏಡ್ಸ್ ಕುರಿತು ಜಾಗೃತಿ
ಬಳ್ಳಾರಿ: ನಗರದ ಸತ್ಯಂ ಎಂಎಸ್‌ಡಬ್ಲ್ಯೂ ಕಾಲೇಜು ವತಿಯಿಂದ ತಾಲೂಕಿನ ದಮ್ಮೂರು ಗ್ರಾಮದಲ್ಲಿ ಏರ್ಪಡಿಸಿರುವ ಸಮಾಜ ಕಾರ್ಯ ಶಿಬಿರದಲ್ಲಿ 3ನೇ ದಿನ ಎಚ್‌ಐವಿ, ಏಡ್ಸ್ ಕುರಿತ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸೌಖ್ಯ ಬೆಳಕು ಸಮುದಾಯ ಸೇವಾ ಸಂಸ್ಥೆಯ ಕಾರ್ಯಕ್ರಮ ಆಯೋಜಕಿ ಲಕ್ಷ್ಮಿ ನರಸಮ್ಮ ಎಚ್‌ಐವಿ, ಏಡ್ಸ್ ಕುರಿತು ಉಪನ್ಯಾಸ ನೀಡಿದರು. ಶಿಬಿರದ ನಿರ್ದೇಶಕಿ ಜಿ. ಲಲಿತಾರಾಣಿ ಅಧ್ಯಕ್ಷತೆ ವಹಿಸಿದ್ದರು. ದಮ್ಮೂರು ಗ್ರಾಪಂ ಸದಸ್ಯೆ ಲಕ್ಷ್ಮಿದೇವಿ, ಗ್ರಾಮದ ಮುಖಂಡರಾದ ಸೂಗೂರು ವಿಶ್ವನಾಥರೆಡ್ಡಿ, ನಂಜುಂಡ, ಹನುಮಂತಪ್ಪ, ದೇವೇಂದ್ರಪ್ಪ, ಮಲ್ಲಿಕಾರ್ಜುನಗೌಡ ಇತರರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಶಿಬಿರದ ಸಂಯೋಜಕ ಬಿ. ವಿರೂಪಾಕ್ಷಗೌಡ ನೇತೃತ್ವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಹುಲಿಗೆಮ್ಮ ಪ್ರಾರ್ಥಿಸಿ, ಎಚ್. ಉಮೇಶ್ ಸ್ವಾಗತಿಸಿ, ಲಚ್ಚುಮಯ್ಯ ನಿರೂಪಿಸಿ, ಅನಿಲ್ ಕುಮಾರ್ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.