ಬಳ್ಳಾರಿ

ಸ್ತ್ರೀವಾದಿ ಸಿದ್ಧಾಂತ ಪುರುಷ ವಿರೋಧಿಯಲ್ಲ: ಇಂದಿರಾ

Published On :

ಕನ್ನಡಪ್ರಭ ವಾರ್ತೆ, ಹೊಸಪೇಟೆ, ಮಾ. 30
ಸ್ತ್ರೀವಾದಿ ಸಿದ್ಧಾಂತ ಪುರುಷ ವಿರೋಧಿಯಲ್ಲ. ಪುರುಷರನ್ನು ಸೇರಿಸಿಕೊಂಡಂತೆ ಮಹಿಳೆಯರ ಶೋಷಣೆ, ಅಸಮಾನತೆಯನ್ನು ಪ್ರಶ್ನಿಸುವಂಥಾದ್ದಾಗಿದೆ ಎಂದು ಮೈಸೂರು ವಿಶ್ವವಿದ್ಯಾಲಯ ಸಮಾಜಶಾಸ್ತ್ರ ಅಧ್ಯಯನ ವಿಭಾಗದ ಪ್ರಾಧ್ಯಾಪಕಿ ಡಾ. ಇಂದಿರಾ ಆರ್. ಅಭಿಪ್ರಾಯಪಟ್ಟರು.
ಅವರು ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ 'ಲಿಂಗ ವ್ಯವಸ್ಥೆಯ ಅಧ್ಯಯನಗಳು- ವಿಧಾನಗಳು, ವೈಧಾನಿಕತೆ ಮತ್ತು ಸಿದ್ಧಾಂತಗಳು' ಕುರಿತಾದ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು. ಸ್ತ್ರೀವಾದಿ ಸಿದ್ಧಾಂತ ವೈವಿಧ್ಯಮಯವಾಗಿದೆ. ಅದೊಂದು ದೃಷ್ಟಿಕೋನವಾಗಿದೆ. ಅದನ್ನು ರೂಪಿಸಿಕೊಂಡು ವಿಧಾನಗಳನ್ನು ವೈಧಾನಿಕತೆಯನ್ನು ರೂಪಿಸಿಕೊಳ್ಳಬೇಕಿದೆ ಎಂದರು.
ಸ್ತ್ರೀವಾದಿ ಚಳವಳಿಯೊಂದಿಗೆ ಸಂಬಂಧ ಇರಿಸಿಕೊಂಡೇ ಅಧ್ಯಯನ ವಿಧಾನ ಬೆಳೆದು ಬರಬೇಕಿದೆ. ಸ್ತ್ರೀವಾದಿ ಚಳವಳಿಯಿಂದಾಗಿಯೇ ಚಿಂತನೆ ಮೂಡಿ ಬಂದಿದೆ. ಇಲ್ಲಿ ಸಾಮಾಜಿಕ ಬದ್ಧತೆ ಮುಖ್ಯವಾಗಬೇಕಿದೆ ಎಂದರು.
ಹೈದರಾಬಾದ್ನ ಇಂಗ್ಲಿಷ್ ಮತ್ತು ವಿದೇಶಿ ಭಾಷೆಗಳ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ವಿ.ಬಿ. ತಾರಕೇಶ್ವರ ಮಾತನಾಡಿ, ಸ್ತ್ರೀವಾದಿ ಚಿಂತನೆಯ ಸಂಶೋಧನೆಗೆ ಹೊಸ ಆಕರ, ಹೊಸ ವೈಧಾನಿಕತೆ ರೂಪಿಸಿಕೊಳ್ಳಬೇಕು. ಈಗ ಇರುವ ಸಿದ್ಧ ಮಾದರಿಗಳನ್ನು ಬಿಟ್ಟು ಹೊಸ ಮಾರ್ಗ ಶೋಧಿಸಿಕೊಳ್ಳಬೇಕಿದೆ. ಇತಿಹಾಸದ ಘಟನಾವಳಿಗಳನ್ನು ಆಯ್ದು ಸಂಭ್ರಮ ಪಡುವುದನ್ನು ಬಿಡಬೇಕು. ವಾಸ್ತವಕ್ಕೆ ಮುಖಾಮುಖಿಯಾಗಬೇಕಿದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡೀನ್ ಪಾಂಡುರಂಗ ಬಾಬು ಮಾಡನಾಡಿ, ಅಧ್ಯಯನದಲ್ಲಿ ಅನ್ವಯಿಕತೆ ನಡೆಸುವಾಗ ಅಪಾಯಗಳನ್ನು ಗಮನಿಸಬೇಕು ಎಂದರು.
ಮಹಿಳಾ ಅಧ್ಯಯನ ವಿಭಾಗದ ಮುಖ್ಯಸ್ಥೆ ಡಾ. ಶೈಲಜಾ ಹಿರೇಮಠ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.
ಡಾ. ಟಿ.ಆರ್. ಚಂದ್ರಶೇಖರ್, ಡಾ. ಮೋಹನ ಕೃಷ್ಣ ರೈ, ಡಾ. ಡೊಮನಿಕ್, ಡಿ. ಗಾಯತ್ರಿ, ಡಾ. ಜಯಶ್ರೀ, ಡಾ. ಮೇಟಿ ಮಲ್ಲಿಕಾರ್ಜುನ ಮೊದಲಾದವರು ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು. ವಿದ್ಯಾರ್ಥಿಗಳು ಗುಂಪು ಚರ್ಚೆಯಲ್ಲಿ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.