ಎಸ್ಸೆಸ್ಸೆಲ್ಸಿ: 32ನೇ ಸ್ಥಾನಕ್ಕೆ ಕುಸಿದ ಬಳ್ಳಾರಿ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ಮೇ 7
2012-13ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ರಾಜ್ಯಮಟ್ಟದಲ್ಲಿ ಕಳೆದ ಬಾರಿ 25ನೇ ಸ್ಥಾನದಲ್ಲಿದ್ದ ಬಳ್ಳಾರಿ ಜಿಲ್ಲೆ ಪ್ರಸಕ್ತ ಸಾಲಿನಲ್ಲಿ 32ಕ್ಕೆ ಇಳಿಕೆಯಾಗಿದೆ. ಕಳೆದ ಸಾಲಿನಲ್ಲಿ ಶೇ. 76.13ರಷ್ಟಿದ್ದ ಫಲಿತಾಂಶ ಈ ಬಾರಿ ಶೇ. 77.47 ರಷ್ಟಾಗಿ ಶೇಕಡಾವಾರು ಫಲಿತಾಂಶದಲ್ಲಿ ಮಾತ್ರ ಶೇ. 1.34ರಷ್ಟು ಹೆಚ್ಚಳವಾಗಿದ್ದರೂ ಬಳ್ಳಾರಿ ಹಿಂದುಳಿದಿದೆ.
ಈ ಬಾರಿ ಪರೀಕ್ಷೆಗೆ ಹಾಜರಾದ 25,865 ವಿದ್ಯಾರ್ಥಿಗಳ ಪೈಕಿ 20,151 ವಿದ್ಯಾರ್ಥಿಗಳು ಉತ್ತಿರ್ಣವಾಗಿದ್ದಾರೆ. ಅದರಲ್ಲಿ 768 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿ, 6,410 ಪ್ರಥಮ, 4,635 ದ್ವಿತೀಯ ಹಾಗೂ 8,338 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈ ಬಾರಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಫಲಿತಾಂಶದಲ್ಲಿ ಮೇಲುಗೈ ಸಾಧಿಸಿದ್ದಾರೆ. ಪರೀಕ್ಷೆ ಬರೆದ 14,532 ವಿದ್ಯಾರ್ಥಿಗಳಲ್ಲಿ ಶೇ. 80ರಷ್ಟು ಫಲಿತಾಂಶ ಪಡೆದಿದ್ದರೆ, ನಗರದ ಮಕ್ಕಳು ಶೇ. 71ರಷ್ಟು ಫಲಿತಾಂಶ ಪಡೆದಿದ್ದಾರೆ. ಗ್ರಾಮೀಣರ ಪೈಕಿ ಬಾಲಕರು ಶೇ. 77 ಹಾಗೂ ಬಾಲಕಿಯರು ಶೇ. 83 ಮತ್ತು ನಗರದ ಬಾಲಕರು ಶೇ. 67 ಹಾಗೂ ಬಾಲಕಿಯರು ಶೇ. 75ರಷ್ಟು ಫಲಿತಾಂಶ ಪಡೆದು ಗಮನ ಸೆಳೆದಿದ್ದಾರೆ.
ಕನ್ನಡ ಮಾಧ್ಯಮದ ಒಟ್ಟು 20,697 ವಿದ್ಯಾರ್ಥಿಗಳಲ್ಲಿ 14,882 ತೇರ್ಗಡೆಯಾಗಿದ್ದಾರೆ. ಇದರಲ್ಲಿ ಶೇ. 75ರಷ್ಟು ಬಾಲಕಿಯರು ಹಾಗೂ ಶೇ. 70ರಷ್ಟು ಬಾಲಕರು ಉತ್ತೀರ್ಣ ರಾಗುವ ಮೂಲಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ಆಂಗ್ಲ ಮಾಧ್ಯಮದಲ್ಲೂ ಬಾಲಕಿಯರು ಮೇಲುಗೈ ಸಾಧಿಸಿದ್ದು, ಶೇ. 92ರಷ್ಟು, ಬಾಲಕರು ಶೇ. 87ರಷ್ಟು ಫಲಿತಾಂಶ ಪಡೆದಿದ್ದಾರೆ.
ಜಿಲ್ಲೆಯ 72 ಶಾಲೆಗಳು ಶೇ. 100ರಷ್ಟು ಫಲಿತಾಂಶ ಪಡೆದಿದ್ದು, ಸರ್ಕಾರಿ ಶಾಲೆಗಳು 20, ಅನುದಾನಿತ 2, ಅನುದಾನ ರಹಿತ 50 ಶಾಲೆಗಳಿವೆ. ಶೇ. 80ರಷ್ಟು ಮೇಲ್ಪಟ್ಟು ಸರ್ಕಾರಿ 72, ಅನುದಾನಿತ 37, ಅನುದಾನ ರಹಿತ 92 ಸೇರಿದಂತೆ ಒಟ್ಟು 201 ಶಾಲೆಗಳಿವೆ. 60 ರಿಂದ 80ರವರೆಗೆ ಪಡೆದ ಶಾಲೆಗಳಲ್ಲಿ ಸರ್ಕಾರಿ 52, ಅನುದಾನಿತ 19, ಅನುದಾನ ರಹಿತ 28 ಸೇರಿದಂತೆ ಒಟ್ಟು 99 ಶಾಲೆಗಳಿದ್ದು, ಶೇ. 40ರಿಂದ 60ರಷ್ಟು ಫಲಿತಾಂಶ ಪಡೆದ 42 ಶಾಲೆಗಳಲ್ಲಿ ಸರ್ಕಾರಿ 26, ಅನುದಾನಿತ 5, ಅನುದಾನ ರಹಿತ 11 ಹಾಗೂ ಶೇ. 0ದಿಂದ 40ರವರೆಗೆ ಫಲಿತಾಂಶ ಪಡೆದ 15 ಶಾಲೆಗಳಲ್ಲಿ ಸರ್ಕಾರಿ 7, ಅನುದಾನಿತ 2, ಅನುದಾನ ರಹಿತ 6 ಶಾಲೆಗಳಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

