ಬಳ್ಳಾರಿ

ಶೀಘ್ರದಲ್ಲೇ ಬಸವಣ್ಣನ ಕಂಚಿನ ಪುತ್ಥಳಿ ಪ್ರತಿಷ್ಠಾಪನೆ

Published On :

ಹಗರಿಬೊಮ್ಮನಹಳ್ಳಿ: ಪಟ್ಟಣದ ಹೊಸಪೇಟೆ- ಶಿವಮೊಗ್ಗ ರಾಜ್ಯ ಹೆದ್ದಾರಿ ಮೇಲಿನ ಬಸವ ವೃತ್ತದಲ್ಲಿ ಅತಿ ಶೀಘ್ರದಲ್ಲೇ ಕಾಯಕಯೋಗಿ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಲಾಗುವುದು ಎಂದು ನೂತನ ಶಾಸಕ ಎಸ್. ಭೀಮಾನಾಯ್ಕ ಹೇಳಿದರು.
ಭಾನುವಾರ ಮಧ್ಯಾಹ್ನ ಪಟ್ಟಣದ ತಾಲೂಕು ಕಚೇರಿ ಬಳಿಯ ರಾಜ್ಯ ಹೆದ್ದಾರಿಯಲ್ಲಿ ನಿರ್ಮಾಣ ಹಂತದಲ್ಲಿರುವ ಬಸವ ವೃತ್ತದ ಕಾಮಗಾರಿ ವೀಕ್ಷಣೆ ಮಾಡಿ ನಂತರ ಮಾತನಾಡಿದ ಅವರು, ಪಟ್ಟಣದ ಅತ್ಯಂತ ಜನನಿಬೀಡ ಸ್ಥಳದಲ್ಲಿ ಬಸವ ವೃತ್ತ ನಿರ್ಮಾಣವಾಗುತ್ತಿದ್ದು, ಈ ವೃತ್ತವನ್ನು ಸುಂದರವಾಗಿ ನಿರ್ಮಿಸಿ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸಿ, ಕಾಯಕಯೋಗಿಯನ್ನು ಸ್ಮರಿಸುವ ಕೆಲಸವನ್ನು ಮಾಡಲಾಗುವುದು ಎಂದರು.
ಪಟ್ಟಣದಲ್ಲಿ ಬಸವಣ್ಣನವರ ಕಂಚಿನ ಪುತ್ಥಳಿಯನ್ನು ಪ್ರತಿಷ್ಠಾಪಿಸುವ ವಿಚಾರವಾಗಿ ಶೀಘ್ರದಲ್ಲೇ ಸಮಾಜದ ಎಲ್ಲ ಮುಖಂಡರ ಸಭೆ ಕರೆದು ಚರ್ಚೆ ನಡೆಸಿದ ಬಳಿಕ ಪುತ್ಥಳಿ ಪ್ರತಿಷ್ಠಾಪನೆ ದಿನವನ್ನು ಗೊತ್ತುಪಡಿಸಲಾಗುವುದು. ತಾಲೂಕು ಕೇಂದ್ರಸ್ಥಾನವಾಗಿರುವ ಪಟ್ಟಣಕ್ಕೆ ಬಸವ ವೃತ್ತ ಹೆಮ್ಮೆಯ ಸಂಕೇತವಿದ್ದಂತೆ. ಆಧುನಿಕ ಶೈಲಿಯಲ್ಲಿ ಅತ್ಯಂತ ಅಂದವಾಗಿ ವೃತ್ತವನ್ನು ನಿರ್ಮಾಣ ಮಾಡಲಾಗುವುದು ಎಂದರು.
ಜೆಡಿಎಸ್ ಪಕ್ಷದ ಹಿರಿಯ ಮುಖಂಡ ಕುರಿ ಶಿವಮೂರ್ತಿ, ಹೂಗಾರ ಮಲ್ಲಣ್ಣ, ಅಡಿಟರ್ ನಟರಾಜ್, ತಾಲೂಕಾಧ್ಯಕ್ಷ ವೈ. ಮಲ್ಲಿಕಾರ್ಜುನ, ಬನ್ನಿಗೋಳ ವೆಂಕಣ್ಣ, ಚಿಂತ್ರಪಳ್ಳಿ ಗ್ರಾಪಂ ಅಧ್ಯಕ್ಷ ಎಂ. ಆನಂದ್, ಗ್ರಾಪಂ ಮಾಜಿ ಅಧ್ಯಕ್ಷ ಎಚ್.ಎಂ. ಚೋಳರಾಜ್, ತಾಪಂ ಮಾಜಿ ಸದಸ್ಯ ಚಿಂತ್ರಪಳ್ಳಿ ದೇವೇಂದ್ರ, ಆರ್. ವೆಂಕಟೇಶ್, ಸದಸ್ಯರಾದ ನಾಗರಾಜ ಜನ್ನು, ಸಂಪತ್ ಕುಮಾರ್, ರೈತ ಸೇವಾ ಸಹಕಾರ ಬ್ಯಾಂಕ್ ಅಧ್ಯಕ್ಷ ಉಡೇದ್ ಗುರುಬಸವರಾಜ, ತತ್ತಿಖಾಸೀಂ, ತಾಲೂಕು ಪದವೀಧರ ಸಂಘದ ಅಧ್ಯಕ್ಷ ಎಚ್. ಜಂದೀಸಾಹೇಬ್, ಆಟೋ ಚಾಲಕರ ಸಂಘದ ಮುಖಂಡ ಅಬ್ದುರ್ ರಜಾಕ್, ಗಂಡಿ ಬಸವರಾಜ, ಪ್ರಮೋದ್ ವಾಲ್ಮೀಕಿ, ವರದಾಪುರ ಕುಮಾರ, ಹಂಚಿನಮನಿ ಹನುಮಂತಪ್ಪ, ಸೋಗಿ ಕೊಟ್ರೇಶ್, ಕೊಲುಮಿ ರಹೆಮಾನ್, ಬಂಗಾರಿ ಗಾಳಿರಾಜ ಇತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.