ಸುದ್ದಿ ಸಂಕ್ಷೇಪ
ಅನಾಥ ಬಾಲಕಿ ಕೊಲೆ: ಆರೋಪಿ ಬಂಧನ
ಬಳ್ಳಾರಿ: ಅನಾಥ ಬಾಲಕಿಯೋರ್ವಳನ್ನು ಕೊಂದು ಅರೆಬರೆಯಾಗಿ ಸುಟ್ಟು ಹಾಕಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆಂಧ್ರಪ್ರದೇಶದ ವಿಕಾರಾಬಾದ್ನ ಆರೋಪಿಯೋರ್ವನ್ನು ಬಳ್ಳಾರಿಯ ಬ್ರೂಸ್ಪೇಟೆ ಪೊಲೀಸರು ಗುರುವಾರ ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ವಿಕಾರಾಬಾದ್ನ ಭಿಕ್ಷುಕ ರಾಮು ಎಂದು ಗುರುತಿಸಲಾಗಿದೆ. ರಾಮು ಕೆಲ ದಿನಗಳ ಹಿಂದೆ ಬಳ್ಳಾರಿಗೆ ಬಂದು ರೇಲ್ವೆ ನಿಲ್ದಾಣದ ಪ್ರಾಂಗಣದಲ್ಲಿ ಬಿಡಾರ ಹೂಡಿ, ನಿತ್ಯ ಭಿಕ್ಷೆ ಬೇಡಿ ಜೀವನ ಸಾಗಿಸುತ್ತಿದ್ದನು. ನಾಲ್ಕು ವರ್ಷದ ಅನಾಥ ಬಾಲಕಿಯೊಬ್ಬಳು ಬಂದು ರಾಮುವಿಗೆ ಭಿಕ್ಷೆ ಕೇಳಿದಾಗ, ಆಕೆಗೆ ಭಿಕ್ಷೆ ನೀಡದೆ ಕಟ್ಟಿಗೆಯಿಂದ ಹೊಡೆದ ಪರಿಣಾಮ ಬಾಲಕಿ ಸ್ಥಳದಲ್ಲೇ ಮೃತಪಟ್ಟಿದ್ದಾಳೆ. ಮೇ 13ರಂದು ಸೋಮವಾರ ಬೆಳಗ್ಗೆ ರೇಲ್ವೆ ನಿಲ್ದಾಣದ ಮೂಲೆಯಲ್ಲಿನ ಕಸದ ರಾಶಿಯಲ್ಲಿ ಎಸೆದು ಅರೆಬರೆ ಸುಟ್ಟುಹಾಕಿದ್ದನು. ಇದನ್ನು ಸಾರ್ವಜನಿಕರು ನೋಡಿ, ಪೊಲೀಸರಿಗೆ ಮಾಹಿತಿ ನೀಡಿದ್ದರು. ಈ ಕುರಿತು ಬ್ರೂಸ್ಪೇಟೆ ಪೊಲೀಸರು ಕೇಸು ದಾಖಲಿಸಿ, ಆರೋಪಿಗಾಗಿ ಹುಡುಕಾಟ ನಡೆಸಿದ್ದರು. ಎಸ್ಪಿ ಡಾ. ಚಂದ್ರಗುಪ್ತಾ ಅವರು ಡಿವೈಎಸ್ಪಿ ಮುರುಗಣ್ಣನವರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬೈಕ್ಗಳ ಮುಖಾಮುಖಿ: ಓರ್ವ ಸಾವು
ಕೊಟ್ಟೂರು: ಬೈಕ್ಗಳೆರಡು ಡಿಕ್ಕಿ ಹೊಡೆದ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಗುರುವಾರ ಮಧ್ಯಾಹ್ನ ಸಮೀಪದ ಕೆ.ಅಯ್ಯನಹಳ್ಳಿ ಬಳಿ ನಡೆದಿದೆ.
ಮೃತ ಯುವಕನನ್ನು ದಾವಣಗೆರೆ ಜಿಲ್ಲೆ ಹರಿಹರ ತಾಲೂಕು ದೀಟೂರು ಗ್ರಾಮದ ರವಿ (28 ) ಎಂದು ಗುರುತಿಸಲಾಗಿದೆ. ಈತನು ತನ್ನೂರಾದ ದೀಟೂರಿನತ್ತ ಬೈಕ್ನಲ್ಲಿ ಪ್ರಯಾಣಿಸುವಾಗ ಕೆ. ಅಯ್ಯನಹಳ್ಳಿ ಬಳಿ ಸೇತುವೆಯ ಹತ್ತಿರ ಎದುರಿಗೆ ಬರುತ್ತಿದ್ದ ಯುವಕನೊಬ್ಬನ ಬೈಕ್ ರಭಸದಿಂದ ಡಿಕ್ಕಿ ಹೊಡೆದಿದೆ. ಇದರ ಪರಿಣಾಮ ರವಿ ಮೃತಪಟ್ಟಿದ್ದಾನೆ. ಈತನ ಬೈಕ್ನಲ್ಲಿದ್ದ ನಂಜುಂಡೇಶ್ವರ ಎಂಬ ಯುವಕ ತೀವ್ರ ಗಾಯಗೊಂಡಿದ್ದರಿಂದ ಆತನನ್ನು ದಾವಣಗೆರೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಈತನ ಪರಿಸ್ಥಿತಿ ಗಂಭೀರವಾಗಿದೆ ಎಂದು ಹೇಳಲಾಗಿದೆ. ಘಟನಾ ಸ್ಥಳಕ್ಕೆ ಕೊಟ್ಟೂರು ಸಿಪಿಐ ಗುರುರಾಜ್ ಮೈಲಾರ ಭೇಟಿ ನೀಡಿ ಪರಿಶೀಲಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

