ಬಳ್ಳಾರಿ

ಎಲ್ಲರ ಒಳಿತಲ್ಲಿ ತನ್ನ ಒಳಿತು ಕಾಣುವವನ ಬದುಕು ಸಾರ್ಥಕ

Published On :

ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ಮೇ 24
ಸಮಾಜದ ಉದ್ಧಾರಕ್ಕಾಗಿ ಇತರರಿಗೆ ಮಾದರಿಯಾಗುವ ಕೆಲಸ ಜತೆಗೆ ಎಲ್ಲರ ಒಳಿತಿನಲ್ಲಿ ತನ್ನ ಒಳಿತು ಕಾಣುವ ವ್ಯಕ್ತಿತ್ವದ ಬದುಕು ಸಾರ್ಥಕವಾಗುತ್ತದೆ ಎಂದು ಹೊನ್ನಾಳಿ ಹಿರೇಕಲ್ಮಠದ ಒಡೆಯರ್ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ತಾಲೂಕಿನ ಕೊಂಬಳಿ ಗ್ರಾಮದಲ್ಲಿ ಪ್ರಗತಿಪರ ರೈತ ಸೊಪ್ಪಿನ ಬಾಳಪ್ಪ-ಗಂಗಮ್ಮ ಅವರ ವೈವಾಹಿಕ ಜೀವನದ ಸುವರ್ಣ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿದ್ದ ಶ್ರೀಗಳ ತುಲಾಭಾರ, ಗುರು ಪ್ರಣಾಮ ಮಹೋತ್ಸವ ಉದ್ಘಾಟಿಸಿ ಆಶೀರ್ವಚನ ನೀಡಿದರು. ಸುವರ್ಣ ಮಹೋತ್ಸವ ಆಚರಿಸಿಕೊಂಡ ಬಾಳಪ್ಪ-ಗಂಗಮ್ಮ ಅವರ ವೈವಾಹಿಕ ಬದುಕು ಪ್ರಸ್ತುತ ಸಮಾಜಕ್ಕೆ ಆದರ್ಶ ಮೌಲ್ಯಗಳನ್ನು ನೀಡಿವೆ. ಕೃಷಿ ಕಾಯಕದೊಂದಿಗೆ, ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಒಲವು ಬೆಳೆಸಿಕೊಂಡಿರುವ ಸೊಪ್ಪಿನ ಬಾಳಪ್ಪ ಅವರ ಸೇವಾ ಕೈಂಕರ್ಯ ಇತರರಿಗೆ ಮಾದರಿ ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವ ಮುಂಡರಗಿಯ ಎಸ್.ಎಸ್. ಪಾಟೀಲ್ ಮಾತನಾಡಿ, ಇತರರನ್ನು ಬದುಕಿಸಿ ತಾನೂ ಬದುಕುವುದರೊಂದಿಗೆ ನೆಮ್ಮದಿ ಕಾಣಬಹುದು. ಮಾನವೀಯ ಮೌಲ್ಯಗಳು ಕುಸಿಯುತ್ತಿರುವ ಸಂದರ್ಭದಲ್ಲಿ ಮಕ್ಕಳಿಗೆ ತಂದೆ-ತಾಯಿಗಳೇ ಆದರ್ಶವಾಗಬೇಕು. ಸಮಾಜ ಮತ್ತು ಗುರುವಿನ ಋಣ ತೀರಿಸಿದಾಗ ಮಾತ್ರ ಮುಕ್ತಿ ಕಾಣಲು ಸಾಧ್ಯ ಎಂದರು.
ಮೈಸೂರು-ಬನ್ನಿಕೊಪ್ಪ ಜಪದಕಟ್ಟಿಮಠದ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ ಆಶೀರ್ವಚನ ನೀಡಿದರು. ಉಪನ್ಯಾಸಕ ಶಾಂತಮೂರ್ತಿ ಬಿ. ಕುಲಕರ್ಣಿ, ಆರ್.ಎಲ್. ಪೊಲೀಸ್‌ಪಾಟೀಲ್, ನಿವೃತ್ತ ಪ್ರಾಚಾರ್ಯ ಅ.ಸಿ. ಹಿರೇಮಠ, ನಿವೃತ್ತ ಶಿಕ್ಷಕ ಜಿ.ಬಿ. ಜಕಣಾಚಾರಿ ಮಾತನಾಡಿದರು. ಕೊಪ್ಪಳದ ಅಮರೇಶ ಕರಡಿ, ಬೆಲ್ಲದ ಅಂದಾನಪ್ಪ, ಜಿ. ಹಾಲಪ್ಪ, ಲಿಂಗಪ್ಪ ಲಿಂಗಶೆಟ್ಟರ್, ಎನ್. ಪಂಚಾಕ್ಷರಿಗೌಡ, ಪಿ.ಕೆ.ಎಂ. ವಿಶ್ವಾನಂದಸ್ವಾಮಿ, ಕರಿಶೆಟ್ಟಿ ಬಸವರಾಜ, ಸೋವೇನಹಳ್ಳಿ ಫಕ್ಕೀರಗೌಡ್ರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹೊನ್ನಾಳಿ ಶ್ರೀಗಳ ತುಲಾಭಾರ ಮಹೋತ್ಸವ ಜರುಗಿತು. ಬಾಳಪ್ಪ ಅವರ ಬದುಕು ಕುರಿತ 'ಸಾರ್ಥಕ ಸಾಧಕ' ಗ್ರಂಥವನ್ನು ಸುಮಾ ವಿಜಯ್ ಲೋಕಾರ್ಪಣೆ ಮಾಡಿದರು. ಧಾರವಾಡದ ಹೋಮಿಯೋಪತಿ ವೈದ್ಯ ಡಾ. ವಿ.ಆರ್.ಬಿ. ಆಚಾರ್ಯ, ಮುಂಡರಗಿಯ ಕೃಷಿ ತಜ್ಞ ಹಂಚಿನಾಳ ಈಶ್ವರಪ್ಪ, ನಿವೃತ್ತ ಉಪ ತಹಸೀಲ್ದಾರ್ ಎನ್.ಕೆ. ಸತ್ಯನಾರಾಯಣರಾವ್, ಹೊಸಪೇಟೆಯ ಪ್ರಾಧ್ಯಾಪಕ ಡಾ. ಎಚ್.ಎಂ. ಚಂದ್ರಶೇಖರ ಶಾಸ್ತ್ರಿ, ನಿವೃತ್ತ ಶಿಕ್ಷಕಿ ರೇಖಾ ದೀಕ್ಷಿತ್ ಜೋಷಿ, ಸಂಗೀತ ಕಲಾವಿದ ಪ್ರಕಾಶ್ ಜೈನ್ ಅವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಪ್ರಭು ಸೊಪ್ಪಿನ ಸ್ವಾಗತಿಸಿದರು. ಪರಶುರಾಮ ನಾಗೋಜಿ, ಬಸವಲಿಂಗಯ್ಯ ಕಾರ್ಯಕ್ರಮ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.