ಬಳ್ಳಾರಿ

ಶುಲ್ಕ ಹೆಚ್ಚಳಕ್ಕೆ ವಿರೋಧ

Published On :

ಕಂಪ್ಲಿ: ಕಂಪ್ಲಿ ಬ್ರೈಟ್‌ವೇ ಸ್ಕೂಲ್‌ನ ಆಡಳಿತ ಮಂಡಳಿ ಪೋಷಕರ ಗಮನಕ್ಕೆ ತರದೆ ಪ್ರತಿವರ್ಷ ಶೇ. 100ರಷ್ಟು ಶಾಲಾ ಶುಲ್ಕವನ್ನು ಹೆಚ್ಚಳ ಮಾಡುತ್ತಿದ್ದು, ಈ ಕುರಿತಾಗಿ ಕ್ರಮ ಕೈಗೊಳ್ಳಬೇಕೆಂದು ರಾಮಸಾಗರ ಗ್ರಾಮದ ವಿದ್ಯಾರ್ಥಿಗಳು, ಪೋಷಕರು ಶನಿವಾರ ಹೊಸಪೇಟೆ ಬಿಇಓ ಪಿ. ಸುನಂದಾ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ. ಪೋಷಕರಾದ ರಾಮಸಾಗರ ಗ್ರಾಮದ ಆರ್.ಟಿ. ಶರಣಗೌಡ, ಟಿ. ಶರಣಸ್ವಾಮಿ, ಜಿ. ರಾಜಾರಾವು, ಎಚ್. ವಿರೂಪಾಕ್ಷಿ, ಬಿ. ಲಕ್ಷ್ಮಣ, ಜೆ.ಎಂ. ರಾಜೇಶ, ಜೆ.ಜೆ. ಕೃಷ್ಣಮೂರ್ತಿ, ಎಂ.ಎನ್. ಪ್ರಭು, ಕೆ. ಶಿವಕುಮಾರ, ಎಚ್. ಚನ್ನಬಸವನಗೌಡ, ಕೆ.ನಾಗರಾಜ, ಜಿ. ರವಿಶಂಕರ ಇವರು, ಆಡಳಿತ ಮಂಡಳಿ ಆಧ್ಯಕ್ಷ ಡಿ.ವಿ. ಸತ್ಯನಾರಾಯಣ ಇವರಿಗೆ ಹಲವು ಬಾರಿ ಮನವಿ ಮಾಡಿಕೊಂಡಿದ್ದರೂ ಸಹಿತ ಅವರು ನಮ್ಮ ಮನವಿಯನ್ನು ತಿರಸ್ಕರಿಸಿ, ನೀವು ಟಿ.ಸಿ. ತೆಗೆದುಕೊಂಡು ಹೋಗಬಹುದು. ಇಲ್ಲವಾದರೆ ನಾವು ನಿಗದಿ ಮಾಡಿದ ಶಾಲಾ ಶುಲ್ಕವನ್ನು ಕಟ್ಟಬೇಕೆಂದು ಬೆದರಿಕೆ ಹಾಕಿರುತ್ತಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ತಾವೇ ಸ್ವತಃ ಬಂದು ನಮ್ಮ ಮಕ್ಕಳನ್ನು ಶಾಲೆಯಲ್ಲಿ ನೋಂದಣಿ ಮಾಡಿಸಬೇಕು. ಶಾಲಾ ಆಡಳಿತ ಮಂಡಳಿ ಮೇಲೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.