ಸ್ಲಂಗಳಿಗೆ ಸೌಕರ್ಯ ನೀಡಲು ಆಗ್ರಹ
ಹೊಸಪೇಟೆ: ಸ್ಲಂಗಳಿಗೆ ಮೂಲ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ಸ್ಲಂ ಜನಾಂದೋಲನ ಕರ್ನಾಟಕ ಹಾಗೂ ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಪದಾಧಿಕಾರಿಗಳು ನಗರಸಭಾ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಿ ಒತ್ತಾಯಿಸಿದರು.
ಅನೇಕ ವರ್ಷಗಳಿಂದ ಸ್ಲಂ ಜನತೆ ಮೂಲ ಸೌಕರ್ಯಗಳಿಂದ ವಂಚಿತವಾಗಿದ್ದಾರೆ. ಊರಮ್ಮನ ಬೈಲಿ ಸ್ಲಂನಲ್ಲಿ ಮಹಿಳಾ ಶೌಚಾಲಯ ಹಾಗೂ ವ್ಯವಸ್ಥಿತ ರಸ್ತೆಗಳು ಇಲ್ಲ. ಚರಂಡಿಗಳಿದ್ದರೂ ಸ್ವಚ್ಛತೆ ಇಲ್ಲದೆ, ಚರಂಡಿಗಳು ಗಬ್ಬುನಾಥ ಬೀರುತ್ತಿವೆ. ಇದರಿಂದಾಗಿ ನಗರದಲ್ಲಿ ಸೊಳ್ಳೆಗಳು ಹೆಚ್ಚಾಗಿ, ಅನೇಕ ರೋಗಗಳು ಹರಡುತ್ತಿವೆ. ರೋಗಗಳಿಂದ ಸ್ಲಂ ಪ್ರದೇಶದಲ್ಲಿ ವಾಸವಾಗಿರುವ ಮಕ್ಕಳಿಗೆ ಮತ್ತು ಜನತೆಗೆ ತುಂಬ ತೊಂದರೆಯಾಗುತ್ತಿದೆ ಎಂದು ತಮ್ಮ ಕಷ್ಟಗಳನ್ನು ಹೇಳಿಕೊಂಡರು.
ಇದೇ ರೀತಿಯ ದುಸ್ಥಿತಿಯಲ್ಲಿರುವ ಮಲ್ಲಮ್ಮನ ಗದ್ದೆ, ಪಿಂಜಾರ್ ಓಣಿ, ಚಲುವಾದಿ ಕೇರಿ, ಇಂದಿರಾನಗರ ಸೇರಿದಂತೆ ಹೊಸಪೇಟೆ ನಗರದಲ್ಲಿರುವ ಅನೇಕ ಸ್ಲಂಗಳಲ್ಲಿ ಮೂಲ ಸೌಲಭ್ಯಗಳಿಲ್ಲದೆ ಜನರು ಪರದಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಮಳೆಗಾಲ ಬರುತ್ತಿರುವುದರಿಂದ ನಗರ ಸಭೆಯು ಹೆಚ್ಚೆತ್ತುಕೊಂಡು ಸ್ಲಂಗಳಿಗೆ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಬೇಕು ಎಂದು ಒತ್ತಾಯಿಸಿದರು. ಹೊಸಪೇಟೆ ಸ್ಲಂ ಜನಜಾಗೃತಿ ಆಂದೋಲನ ಸಮಿತಿ ಸಂಚಾಲಕಿ ಎನ್. ಹುಲಿಗೆಮ್ಮ, ರಾಜ್ಯ ಸಂಘಟನಾ ಸಂಚಾಲಕ ರಾಮಚಂದ್ರ, ಉಪಾಧ್ಯಕ್ಷ ಸುನೀಲ್, ಮಾರೆಮ್ಮ, ನಾಗಲಕ್ಷ್ಮಿ, ವೆಂಕಟೇಶುಲು, ಗೀತಾಂಜಲಿ, ತಿಪ್ಪಮ್ಮ, ಹುಸೇನ್ಬೀ, ಗಿರೀಶ್, ಹನುಮಂತರಾಯ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

