ಸಮಾಜದ ಅಭಿವೃದ್ಧಿಗೆ ಶ್ರಮಿಸಿದ ಲಿಂಗೇಶ್ವರರು
ಹೂವಿನಹಡಗಲಿ: ಗವಿಸಿದ್ದೇಶ್ವರ ಶಾಖಾ ಮಠದ ಲಿಂಗೇಶ್ವರ ಸ್ವಾಮೀಜಿ ತ್ಯಾಗಮೂರ್ತಿಗಳಾಗಿದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ ಎಂದು ಕಂಪ್ಲಿ ಕಲ್ಮಠದ ಅಭಿನವಪ್ರಭು ಸ್ವಾಮೀಜಿ ಹೇಳಿದರು.
ಇಲ್ಲಿನ ಗವಿಮಠದ ಶಿವಶಾಂತವೀರ ಸಮುದಾಯ ಭವನದಲ್ಲಿ ಲಿಂಗೇಶ್ವರ ಸ್ವಾಮೀಜಿ ಅವರ 11ನೇ ಪುಣ್ಯಸ್ಮರಣೆ ಮತ್ತು 63ನೇ ಮಾಸಿಕ ಶಿವಾನುಭವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಆಶೀರ್ವಚನ ನೀಡಿದರು. ಲಿಂಗೇಶ್ವರ ಸ್ವಾಮೀಜಿ ತಮ್ಮ ನಿಸ್ವಾರ್ಥ ಬದುಕಿನ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡವರು. ಮನುಷ್ಯ ವೇಷಭೂಷಣಗಳಿಗಿಂತ ಅಂತರಂಗದ ಅರಿವಿನ ಕಾರ್ಯಗಳ ಮೂಲಕ ಸಮಾಜ ಗುರುತಿಸುವಂತಹ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕು. ಉತ್ತಮ ಸಂಸ್ಕೃತಿ ಮನಸುಳ್ಳ ಶರಣರಂತೆ ಜಂಗಮ ಪ್ರೇಮಿಗಳಾಗಿ ಬಾಳಿ ಆದರ್ಶಪ್ರಾಯರಾಗಿದ್ದಾರೆ ಎಂದರು.
ಜನಜಾಗೃತಿ ಶ್ಲಾಘನೀಯ: ಗುಡ್ಡದ ಆನ್ವೇರಿ ವಿರಕ್ತಮಠದ ಶಿವಯೋಗಿ ಸ್ವಾಮೀಜಿ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನೀಲಗುಂದ ವಿರಕ್ತಮಠದ ಚನ್ನಬಸವ ಶಿವಯೋಗಿಗಳು ಮಾತನಾಡಿ, ಇದ್ದೂ ಇಲ್ಲದಂತೆ ನಿರ್ವಂಚನೆಯಿಂದ ಸಮಾಜದ ಏಳ್ಗೆಗಾಗಿ ಲಿಂಗೇಶ್ವರ ಸ್ವಾಮೀಜಿ ಶ್ರಮಿಸಿದವರು. ಭಕ್ತರ ಮೇಲಿನ ಮಮತೆಯ ಮೂಲಕ ಮಹಾಂತರೆನಿಸಿ, ಆಸೆಯಿಂದ ದೂರವಿದ್ದು ಸಮಾಜಕ್ಕಾಗಿ ಬಾಳಿದವರು. ಪಟ್ಟಣದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆಂದು ಶ್ಲಾಘಿಸಿದರು.
ಬಿಜಾಪುರದ ಇಟಗಿಯ ಹಿರೇಮಠದ ಗುರುಶಾಂತ ದೇವರು, ಹಿರಿಶಾಂತವೀರ ಸ್ವಾಮೀಜಿ ನೇತೃತ್ವವಹಿಸಿ ಮಾತನಾಡಿದರು. ಮೈನಳ್ಳಿಯ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಕೊಪ್ಪಳ ಶರಣಬಸವ ಬಿಸರಳ್ಳಿ, ಪುರಸಭೆ ಸದಸ್ಯೆ ಕರೆತ್ತಿನ ಶಶಿಕಲಾ, ಮಾಗಳದ ಮುದಿಮಲ್ಲಪ್ಪ, ನಿವೃತ್ತ ಶಿಕ್ಷಕಿ ಕೆ. ಹನುಮಕ್ಕ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಎಂ. ಶಬ್ಬೀರ್ ಬಾಷಾ ಅವರ ಇಂಗ್ಲಿಷ್ ಬ್ರಹ್ಮ ರಹಸ್ಯ ಪುಸ್ತಕ ಬಿಡುಗಡೆ ಮಾಡಲಾಯಿತು. ಡಾಕ್ಟರೇಟ್ ಪದವಿ ಪಡೆದ ಡಾ. ಸಿ.ಎಂ. ನಾಗಭೂಷಣ, ನಿವೃತ್ತ ಮುಖ್ಯಶಿಕ್ಷಕ ಎಂ.ಪಿ.ಎಂ. ಫಕ್ಕೀರಗೌಡ್ರು, ರಾಜ್ಯಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ ಪಡೆದ ಎನ್.ಡಿ. ರೇಖಾ, ಶಿಕ್ಷಕ ಕೆ. ನಿಂಗಪ್ಪ ಹಾಗೂ ಭಕ್ತಿಸೇವೆ ಸಲ್ಲಿಸಿದವರನ್ನು ಸನ್ಮಾನಿಸಲಾಯಿತು.
ಶ್ವೇತಾ ಶಿವಕಾಳಿಮಠ ಪ್ರಾರ್ಥಿಸಿದರು. ಎಚ್. ನಾಗರಾಜ ಸ್ವಾಗತಿಸಿದರು. ಎಚ್.ಪಿ. ರಾಜಣ್ಣ ಪ್ರಾಸ್ತಾವಿಕ ಮಾತನಾಡಿದರು. ಡಾ. ಎಚ್.ಕೆ. ಮಹೇಶ ನಿರೂಪಿಸಿದರು. ನಾಗತಿ ಬಸಾಪುರದ ಪ್ರೌಢಶಾಲೆ ಶಿಕ್ಷಕಿ ಎಲ್.ಎಂ. ಲತಾ, ಸಂಗೀತ ಶಿಕ್ಷಕ ಬಿ.ಬಿ. ಸೋಮಶೇಖರ ವಚನಗಾಯನ ನಡೆಸಿಕೊಟ್ಟರು.
ಇದ್ದೂ ಇಲ್ಲದಂತೆ ನಿರ್ವಂಚನೆಯಿಂದ ಸಮಾಜದ ಏಳ್ಗೆಗಾಗಿ ಲಿಂಗೇಶ್ವರ ಸ್ವಾಮೀಜಿ ಶ್ರಮಿಸಿದವರು. ಭಕ್ತರ ಮೇಲಿನ ಮಮತೆಯ ಮೂಲಕ ಮಹಾಂತರೆನಿಸಿ, ಆಸೆಯಿಂದ ದೂರವಿದ್ದು ಸಮಾಜಕ್ಕಾಗಿ ಬಾಳಿದವರು. ಪಟ್ಟಣದ ಗವಿಮಠದ ಹಿರಿಶಾಂತವೀರ ಸ್ವಾಮೀಜಿ ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.
ಶಿವಯೋಗಿ ಸ್ವಾಮೀಜಿ,
ಗುಡ್ಡದ ಆನ್ವೇರಿ ವಿರಕ್ತಮಠ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

