ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಚಿಂತನೆ: ಪಿಟಿಪಿ
ಕನ್ನಡಪ್ರಭ ವಾರ್ತೆ, ಹೂವಿನಹಡಗಲಿ, ನ. 5
ಮುಂಬರುವ ದಿನಗಳಲ್ಲಿ ಹೂವಿನಹಡಗಲಿಯನ್ನು ಮಾದರಿ ಕ್ಷೇತ್ರವನ್ನಾಗಿ ಸಮಗ್ರ ಅಭಿವೃದ್ಧಿ ಮಾಡಲು ಚಿಂತನೆ ನಡೆದಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಪಿ.ಟಿ. ಪರಮೇಶ್ವರ ನಾಯ್ಕ ಹೇಳಿದರು.
ಅವರು ತಾಲೂಕಿನ ಹೊಳಲು ಗ್ರಾಮದ ತರಳಬಾಳು ಸಮುದಾಯ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
ಮೈಲಾರ- ತೊರಣಗಲ್ಲು ರಾಜ್ಯ ಹೆದ್ದಾರಿಗೆ ರು. 1817 ಲಕ್ಷ, ಎಕ್ಕುಂಬಿ- ಮೊಣಕಾಲ್ಮೂರು ರಾಜ್ಯ ಹೆದ್ದಾರಿಯಲ್ಲಿನ ಡೆಕ್ ಸ್ಲ್ಯಾಬ್ ಸೇತುವೆ ನಿರ್ಮಾಣಕ್ಕೆ ರು. 70 ಲಕ್ಷ, ದಾವಣಗೆರೆ- ಹೊಳಲು ರಸ್ತೆಗೆ ರು. 86 ಲಕ್ಷ, ಎಕ್ಕುಂಬಿ- ಮೊಣಕಾಲ್ಮೂರು ರಾಜ್ಯ ಹೆದ್ದಾರಿಗೆ ರು. 101.50 ಲಕ್ಷದ ಕಾಮಗಾರಿಗೆ ಚಾಲನೆ ನೀಡಲಾಗಿದೆ. ಮೈಲಾರ ಜಾತ್ರೆಯೊಳಗಾಗಿ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದರು.
ಶೌಚಾಲಯಕ್ಕೆ ಅರ್ಜಿ ಬೇಡ: ಹೊಳಲನ್ನು ಸುವರ್ಣ ಗ್ರಾಮೋದಯ ಯೋಜನೆಗೆ ಆಯ್ಕೆ, ಮುಂದಿನ ಶೈಕ್ಷಣಿಕ ವರ್ಷದಲ್ಲಿ ಸರ್ಕಾರಿ ಐಟಿಐ ಕಾಲೇಜು ಪ್ರಾರಂಭ, ಮೈಲಾರ ವಿದ್ಯುತ್ ವಿತರಣಾ ಕೇಂದ್ರದಲ್ಲಿನ ಗ್ರೀಡ್ನ್ನು 110 ಸಾಮರ್ಥ್ಯಕ್ಕೇರಿಸಲು ಕ್ರಮ, ಸ್ವಾಮಿ ವಿವೇಕಾನಂದ ಪಪೂ ಕಾಲೇಜಿಗೆ ಹೊಸದಾಗಿ ಶಿಕ್ಷಣ ಮತ್ತು ವಾಣಿಜ್ಯ ವಿಷಯಗಳ ಸೇರ್ಪಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ವೈಯಕ್ತಿಕ ಶೌಚಾಲಯಗಳಿಗೆ ಸರ್ಕಾರ ರು. 20 ಸಾವಿರ ಅನುದಾನ ಮಂಜೂರು ಮಾಡುತ್ತದೆ. ಇದಕ್ಕಾಗಿ ಎಲ್ಲ ಹಂತದ ಚರ್ಚೆಯಾಗಿ ಅಂತಿಮ ನಿರ್ಧಾರಕ್ಕೆ ಬರಲಾಗಿದೆ. ಮಹಿಳೆಯರು ಮಹಿಳಾ ಶೌಚಾಲಯಕ್ಕೆ ಅರ್ಜಿ ನೀಡಬೇಡಿ ಎಂದು ಹೇಳಿದರು.
ಎಂಪಿಪಿಗೆ ಕ್ಷೇತ್ರ ಕಾಳಜಿ ಇತ್ತು: ಅಧ್ಯಕ್ಷತೆ ವಹಿಸಿದ್ದ ಹರಪ್ಪನಹಳ್ಳಿ ಶಾಸಕ ಎಂ.ಪಿ. ರವೀಂದ್ರ ಮಾತನಾಡಿ, ಎಂ.ಪಿ. ಪ್ರಕಾಶರು ಗೆದ್ದಾಗ, ಸೋತಾಗ ನಿರಂತರ ಜನರೊಂದಿಗೆ ಸಂಪರ್ಕ ಇಟ್ಟುಕೊಂಡು ಜನಪರ ಹೋರಾಟ ಮಾಡುತ್ತಿದ್ದರು. ಸರ್ಕಾರದಲ್ಲಿ ಒಂದು ಪುಟ್ಟಿ ಸಿಮೆಂಟ್ ಇದೆ ಎಂದರೆ ಅದು ಹೂವಿನಹಡಗಲಿಗೆ ಕೊಡಿ ಎಂದು ಕೇಳುತ್ತಾರೆ ಎಂದು ಎಲ್ಲರು ಆಡಿಕೊಳ್ಳುತ್ತಿದ್ದರು. ಅಷ್ಟೊಂದು ಜನರ ಮತ್ತು ತಾವು ಆಯ್ಕೆಯಾದ ಕ್ಷೇತ್ರದ ಬಗ್ಗೆ ಕಾಳಜಿ ಹೊಂದಿದ್ದರು ಎಂದರು.
ಸಿಎಂ ಸಿದ್ದರಾಮಯ್ಯ ಅವರು ತಮ್ಮನ್ನು ಅವರ ಮಗನಂತೆ ಕಾಣುತ್ತಿದ್ದು, ಕ್ಷೇತ್ರದ ಅಭಿವೃದ್ಧಿಗೆ ಸಲಹೆ ಸಹಕಾರ ನೀಡುತ್ತಿದ್ದಾರೆ ಎಂದ ಅವರು, ಗರ್ಭಗುಡಿ ಯೋಜನೆಯಿಂದ ಹೂವಿನಹಡಗಲಿ ಕ್ಷೇತ್ರದಲ್ಲಿ ನೀರಾವರಿ ಕ್ಷೇತ್ರ ಹೆಚ್ಚಾಗಲಿದೆ. ಆದ್ದರಿಂದ ಸಣ್ಣ ನೀರಾವರಿ ಇಲಾಖೆಯಿಂದ ಈಗ ಬೃಹತ್ ನೀರಾವರಿ ಇಲಾಖೆಗೆ ಯೋಜನೆ ಮಂಜೂರಾತಿಗೆ ಹಸ್ತಾಂತರ ಮಾಡಿದ್ದೇವೆ. ಆದಷ್ಟು ಬೇಗ ನೀರಾವರಿ ಯೋಜನೆ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಜಿಪಂ ಅಧ್ಯಕ್ಷ ಶೋಭಾ ಬೆಂಡಿಗೇರಿ, ತಾಪಂ ಅಧ್ಯಕ್ಷೆ ಶಿಲ್ಪಾಸಿಂಗ್ ರಾಠೋಡ್, ಉಪಾಧ್ಯಕ್ಷೆ ಪ್ರೇಮಾ, ಜಿಪಂ ಸದಸ್ಯ ವಸಂತ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಐಗೋಳ ಚಿದಾನಂದ, ಎಂ. ಪರಮೇಶ್ವರಪ್ಪ, ವಾರದ ಗೌಸ್ ಮೋಹಿದ್ದೀನ್, ಅಧ್ಯಕ್ಷ ಬಸವನಗೌಡ ಪಾಟೀಲ್, ನರೇಂದ್ರ, ಅರವಳ್ಳಿ ವೀರಣ್ಣ, ರೇಖಾ, ಪ್ರಕಾಶ ಒಡೆಯರ್, ತಾಪಂ ಸದಸ್ಯ ಹರವಿ ಪ್ರಕಾಶ, ವೀರಣ್ಣ, ಲೋಕೋಪಯೋಗಿ ಇಇ ಯಮನೂರಪ್ಪ, ಬಸವನಗೌಡ ಸೇರಿದಂತೆ ಇತರರಿದ್ದರು.
ಚಂದ್ರಶೇಖರ ಶಾಸ್ತ್ರಿ ಸ್ವಾಗತಿಸಿದರು. ಚನ್ನವೀರಗೌಡ ಪ್ರಾಸ್ತಾವಿಕ ಮಾತನಾಡಿದರು. ಬಾಬಣ್ಣ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

