16ರಂದು ನಾವು, ನಮ್ಮಲ್ಲಿ-2013ರ ಅಭಿವ್ಯಕ್ತಿ ಕಾರ್ಯಕ್ರಮ
ಕೊಟ್ಟೂರು: ಕೊಟ್ಟೂರಿನ ಬಯಲು ಸಾಹಿತ್ಯ ವೇದಿಕೆಯ ನಾವು, ನಮ್ಮಲ್ಲಿ-2013ರ ಅಭಿವ್ಯಕ್ತಿ ಕರ್ನಾಟಕ ಕಾರ್ಯಕ್ರಮವನ್ನು ಹಾಸನ ನಗರದಲ್ಲಿ ನ. 16 ಮತ್ತು 17ರಂದು ಏರ್ಪಡಿಸಿದೆ.
ಹಾಸನ ನಗರದ ಜಿಲ್ಲಾ ಕ್ರೀಡಾಂಗಣದ ಯೂಥ್ ಹಾಸ್ಟೆಲ್ನಲ್ಲಿ ನಡೆಯುವ ಈ ಕಾರ್ಯಕ್ರಮ 16ರ ಬೆಳಗ್ಗೆ 10.30ಕ್ಕೆ 'ಈ ಹೊತ್ತು ನಮ್ಮ ಮಾತು ಸೋತಿದೆಯೇ?' ಎಂಬ ವಿಚಾರಣ ಸಂಕಿರಣದೊಂದಿಗೆ ಆರಂಭಗೊಳ್ಳಲಿದೆ. ಸಾಹಿತಿ ದೇವನೂರು ಮಹಾದೇವ, ಬಯಲು ಸಾಹಿತ್ಯ ವೇದಿಕೆಯ ಕೊಟ್ಟೂರು ಅಧ್ಯಕ್ಷ ಜಿ.ಬಿ. ನಾಗನಗೌಡ ಉಪಸ್ಥಿತರಿರುವರು. ಸಿ.ಎಲ್. ರಾಮಚಂದ್ರನ್ ಅಧ್ಯಕ್ಷತೆ ವಹಿಸುತ್ತಾರೆ.
ಮಧ್ಯಾಹ್ನ 2ಕ್ಕೆ 'ಅಭಿವ್ಯಕ್ತಿ ಸ್ವಾತಂತ್ರ್ಯದ ಸವಾಲುಗಳು - ನನ್ನ ಅನುಭವ' ಕುರಿತು ಲೇಖಕಿ ಬಾನು ಮುಸ್ತಾಫಾ ಮಾತನಾಡುವರು. ಪತ್ರಕರ್ತ ನವೀನ್ ಸೂರಿಂಜೆ, ಲೇಖಕಿ ನಾಗವೇಣಿ, ಲೇಖಕ ಮಹಾಂತೇಶ್ ನೌಕಲ್ ಗೋಷ್ಠಿಯಲ್ಲಿ ಪಾಲ್ಗೊಂಡು ಅನುಭವ ಹಂಚಿಕೊಳ್ಳಲಿದ್ದಾರೆ. ಸಂಜೆ 4.30ಕ್ಕೆ ಅಹರ್ನಿಶಿ ಮತ್ತು ನಾವು ನಮ್ಮಲ್ಲಿ ಬಳಗ ಪ್ರಕಟಿಸಿರುವ ಹೋರಾಟಗಾರ, ಚಿಂತಕ ಹರ್ಷ ಮಂದರ್ ಅವರ ಅನುವಾದ ಸಂಕಲನ ಅಸಮಾನತೆಯ ಬಣ್ಣಗಳು ಎಂಬ ಪುಸ್ತಕವನ್ನು ಪತ್ರಕರ್ತ ಬಾನುತೇಜ್ ಬಿಡುಗಡೆ ಮಾಡುವರು. ಸಂವರ್ಥ ಸಾಹಿಲ್ ಅತಿಥಿಯಾಗಿ ಪಾಲ್ಗೊಳ್ಳಲಿದ್ದು, ಚಿಂತಕ ವಿ.ಎಸ್. ಶ್ರೀಧರ್ ಅಧ್ಯಕ್ಷತೆ ವಹಿಸುವರು.
17ರಂದು ಬೆಳಗ್ಗೆ 10 ಗಂಟೆಗೆ 'ಅಭಿವ್ಯಕ್ತಿ ಬಹುರೂಪಿ ನೆಲೆ ಮತ್ತು ಅಭಿವ್ಯಕ್ತಿ ಆತಂಕಗಳು-1' ಗೋಷ್ಠಿಯಲ್ಲಿ ನಟ, ನಿರ್ದೇಶಕ ಪಿ. ಮಂಜುನಾಥ ರಂಗಭೂಮಿ ಕುರಿತು, ವಿಮರ್ಶಕ ಕೆ. ಫಣಿರಾಜ್ ಸಿನಿಮಾ ಕುರಿತು, ಸಾಮಾಜಿಕ ಜಾಲತಾಣ ಕುರಿತು ಸಚಿನ್ತೇಜ ಪೂಜಾರಿ ವಿಷಯ ಮಂಡಿಸಲಿದ್ದಾರೆ. 'ಆತಂಕಗಳು-2' ಗೋಷ್ಠಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ. ಸಾಮಾಜಿಕ ಚಿಂತಕ ಡಾ. ಸಿ.ಜಿ. ಲಕ್ಷ್ಮೀಪತಿ ಸಾಮಾಜಿಕ ಶ್ರೇಣೀಕರಣ ಕುರಿತು, ಲೇಖಕ ಎಂ.ಡಿ. ವಕ್ಕುಂದ ಸಾಹಿತ್ಯ ಕುರಿತು, ಪತ್ರಕರ್ತ ದೇವು ಪತ್ತಾರ್ ಮಾಧ್ಯಮ ಕುರಿತು ವಿಚಾರ ಮಂಡಿಸಲಿದ್ದಾರೆ.
ಸಮಾರೋಪ: ಸಮಾರೋಪ ಸಮಾರಂಭದ ಪ್ರಯುಕ್ತ ಜನಪರ ಧ್ವನಿಗಳು ಕ್ಷೀಣಿಸುತ್ತಿವೆಯೇ? ಎಂಬ ವಿಷಯದ ಕುರಿತು ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಭಾಷಣ ಮಾಡಲಿದ್ದಾರೆ. ಲೇಖಕ ರಹಮತ್ ತರಿಕೇರೆ, ಕೊಟ್ಟೂರು ಬಯಲು ಸಾಹಿತ್ಯ ವೇದಿಕೆಯ ಅಂಚೆ ಕೊಟ್ರೇಶ್ ಉಪಸ್ಥಿತಿಯಲ್ಲಿ ಹಾಸನದ ಹೋರಾಟಗಾರ ಮಂಜುನಾಥ ದತ್ತ ಅಧ್ಯಕ್ಷತೆ ವಹಿಸುತ್ತಾರೆ ಎಂದು ಬಯಲು ಸಾಹಿತ್ಯ ವೇದಿಕೆಯ ಎಸ್.ಡಿ. ಈರಗಾರ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

