ಬಳ್ಳಾರಿ

ಬಡತನ, ಹಸಿವು ದೊಡ್ಡ ಪಾಠ ಕಲಿಸುತ್ತವೆ: ಕೊಟ್ರಸ್ವಾಮಿ

Published On :

ಕೊಟ್ಟೂರು: ಬಡತನ ಮತ್ತು ಹಸಿವು ಕಲಿಸುವ ಪಾಠವನ್ನು ಯಾವ ವಿಶ್ವವಿದ್ಯಾಲಯಗಳೂ ಸಹ ಕಲಿಸಲಾರವು. ಪರಿಶ್ರಮದಿಂದ ಮಾತ್ರ ಬದುಕು ಕಟ್ಟಿಕೊಳ್ಳಲು ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಬದುಕನ್ನು ರೂಪಿಸಿಕೊಳ್ಳಬೇಕು ಎಂದು ಇಂಡಿಯನ್ ರೆವಿನ್ಯೂ ಸರ್ವೀಸ್ ಅಧಿಕಾರಿ ಡಾ. ಎಂ. ಕೊಟ್ರಸ್ವಾಮಿ ಹೇಳಿದರು.
ಪಟ್ಟಣದ ಇಂದು ಸಂಯುಕ್ತ ಪಪೂ ಕಾಲೇಜಿನಲ್ಲಿ ಆಯೋಜಿಸಿದ್ದ ಬದುಕು ಜಟಕಾ ಬಂಡಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜೀವನದಲ್ಲಿ ಸಮಸ್ಯೆಗಳು ಸದಾ ಇದ್ದೇ ಇರುತ್ತವೆ. ಅವುಗಳನ್ನೆ ನೆಪ ಮಾಡದೆ ಸವಾಲಾಗಿ ಸ್ವೀಕರಿಸಿ ಮುನ್ನಡೆದರೆ ಎನನ್ನಾದರು ಸಾಧಿಸಲು ಸಾಧ್ಯ. ಈ ನಿಟ್ಟಿನಲ್ಲಿ ಸಮಯ ಪಾಲನೆಗೆ ಆದ್ಯತೆ ನೀಡಬೇಕು. ವಿದ್ಯಾರ್ಥಿಗಳು ಸದಾ ಸದುದ್ದೇಶದ ಗುರಿಗಳನ್ನು ಇರಿಸಿಕೊಂಡು ಕಲಿಕೆಯ ದಿನಗಳಲ್ಲಿ ಮುನ್ನಡೆದರೆ ಮುಂದಿನ ಬದುಕನ್ನು ಸದಾ ನೆಮ್ಮದಿಯನ್ನಾಗಿಸಿಕೊಳ್ಳಬಹುದು ಎಂದರು.
ಪ್ರಾಚಾರ್ಯ ಎಚ್.ಎನ್. ವೀರಭದ್ರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿ, ನೋವು, ಬಡತನಗಳನ್ನು ಅನುಭವಿಸಿ ವಿದ್ಯಾಭ್ಯಾಸ ಮುಗಿಸಿ ಯಶಸ್ವಿ ಬದುಕನ್ನು ಸಾಗಿಸುವವರ ಅನುಭವಗಳನ್ನು ವಿದ್ಯಾರ್ಥಿಗಳಿಗೆ ತಿಳಿಸುವ ಉದ್ದೇಶಕ್ಕಾಗಿ ಈ ಕಾರ್ಯಕ್ರಮ ನಡೆಸಲಾಗುತ್ತಿದೆ ಎಂದರು. ಹಿರಿಯ ಉಪನ್ಯಾಸಕ ಬಿ.ಎಸ್. ಸುರಕೋಡ, ಸಿ.ಎಚ್.ಎಂ. ಕೊಟ್ರಯ್ಯ ಇದ್ದರು. ಉಪನ್ಯಾಸಕ ಎಚ್. ಮಹೇಶ್ ನಿರೂಪಿಸಿದರು. ಪ್ರಥಮ ಪಿಯು ವಿದ್ಯಾರ್ಥಿನಿ ಅಕ್ಷತಾ ಪ್ರಾರ್ಥಿಸಿದರು. ಎಚ್.ಎಂ. ವೀರೇಶ್ ಸ್ವಾಗತಿಸಿದರು. ನಾಗರಾಜ ಸಿ. ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.