ಬಳ್ಳಾರಿ

ದುಃಖ ನಿವಾರಣೆಗೆ ಗಾಯತ್ರಿ ಜಪ ಅವಶ್ಯ: ಕಣ್ವಶ್ರೀ

Published On :

ಇಳಕಲ್ಲ: ದುಃಖ, ಅಶಾಂತಿಯಿಂದ ಕೂಡಿರುವ ಜಗತ್ತು ಹಾಗೂ ಜನರನ್ನು ರಕ್ಷಿಸಲು ಗಾಯಿತ್ರಿ ಮಂತ್ರ ಪಠಣದಿಂದ ಮಾತ್ರ ಸಾಧ್ಯ ಎಂದು ಹುಣಸಿಹೊಳೆ ಕಣ್ವಮಠದ ವಿದ್ಯಾಭಾಸ್ಕರ ತೀರ್ಥ ಸ್ವಾಮೀಜಿ ಹೇಳಿದರು.
ಭಾನುವಾರ ಇಲ್ಲಿಯ ಜೇಶಿ ಶಾಲೆಯ ಆವರಣದಲ್ಲಿ ಗಾಯತ್ರಿ ಅನುಷ್ಠಾನ ಸಮಿತಿ, ತಡಸದ ಗಾಯತ್ರಿ ತಫೋ ಭೂಮಿ ಟ್ರಸ್ಟ್ ಹಾಗೂ ಇಳಕಲ್ಲಿನ ಗಾಯತ್ರಿ ಸದ್ಭಕ್ತರು ಹಮ್ಮಿಕೊಂಡಿದ್ದ 21ನೇ ಕೋಟಿ ಗಾಯತ್ರಿ ಜಪ ಮಹಾಯಜ್ಞ ಸಮಾರೋಪದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಸಮಾಜ ರೋಗಗ್ರಸ್ತವಾಗಿದೆ. ದೇಶದ ಮಹಾನ್ ಶರಣರು, ಸಂತರು, ಮುನಿಗಳು ಎಲ್ಲ ಸಮಾಜದ ಶ್ರೀಗಳು ಚಿಂತನೆ ಮಾಡುತಿದ್ದಾರೆ ಎಂದು ಹೇಳಿದರು.
ತಡಸದ ಬಾಲಕೃಷ್ಣಾನಂದ ಸರಸ್ವತಿ ಸ್ವಾಮೀಜಿ, ಹಿಮಾಲಯದ ರಾಮಸ್ವರೂಪಾನಂದಜೀ ಮಹಾರಾಜರು, ಸೊಲ್ಲಾಪುರ ಪ್ರಣವಾನಂದ ತೀರ್ಥರು, ಸಿಂದಗಿಯ ದತ್ತಪ್ಪಯ್ಯ ಶ್ರೀಗಳು, ಆನಂದವನದ ಗುರುದತ್ತ ಚಕ್ರವರ್ತಿಗಳು, ಆನಂದವನದ ಶಂಕರಭಟ್ಟರು ಇತರರು ಮಾತನಾಡಿದರು.
ಸಚಿವ ಶಿವರಾಜ ತಂಗಡಗಿ, ಸಂಸದ ಪಿ. ಸಿ. ಗದ್ದಿಗೌಡರ, ಶಾಸಕ ವಿಜಯಾನಂದ ಕಾಶಪ್ಪನವರ, ಮಾಜಿ ಶಾಸಕ ದೊಡ್ಡನಗೌಡ ಪಾಟೀಲ, ನಗರಸಭಾಧ್ಯಕ್ಷ ದೇವಾನಂದ ಕಾಶಪ್ಪನವರ, ಸ್ವಾಗತ ಸಮಿತಿ ಅಧ್ಯಕ್ಷ ಕೆ.ಜಿ. ದೇಶಪಾಂಡೆ, ಕಾರ್ಯದರ್ಶಿ ಪ್ರೊ. ಆರ್.ಕೆ. ಕುಲಕರ್ಣಿ ಇದ್ದರು. ಗುರುನಾಥಪ್ಪ ನಾಗಲೋಟಿ ಸ್ವಾಗತಿಸಿದರು. ಗುರುರಾಜ ದೇಶಪಾಂಡೆ ನಿರೂಪಿಸಿ, ಪ್ರೊ. ಎಸ್.ಕೆ. ಕುಲಕರ್ಣಿ ವಂದಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.