29ರಿಂದ ಮದುವೆ ವಸ್ತ್ರ ಆಭರಣ ಮೇಳ
ಕನ್ನಡಪ್ರಭ ವಾರ್ತೆ, ಬಳ್ಳಾರಿ, ನ. 25
ಸ್ಥಳೀಯ ರಾಯಲ್ ಫೋರ್ಟ್ ಹೊಟೇಲ್ನಲ್ಲಿ ನ. 29ರಿಂದ ಡಿ. 1ರ ವರೆಗೆ ಮದುವೆ ವಸ್ತ್ರ ಆಭರಣ-2013 ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ಫ್ಯಾಷನ್ ಸ್ಟೋರಿ ಸಂಸ್ಥೆಯ ಸಂಸ್ಥಾಪಕ ರವಿ ತಿಳಿಸಿದರು. ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಈ ವಿಷಯ ತಿಳಿಸಿದರು. ನ. 29ರಿಂದ ಆರಂಭಗೊಳ್ಳುವ ಈ ಮೇಳವನ್ನು ಖ್ಯಾತ ವೈದ್ಯರಾದ ಡಾ. ಆಶಾರಾಣಿ, ಡಾ. ಬಿ.ಕೆ.ಎಸ್. ಮೂರ್ತಿ ಅಂದು ಬೆಳಗ್ಗೆ 10ಕ್ಕೆ ಉದ್ಘಾಟಿಸಲಿದ್ದಾರೆ ಎಂದರು. ಮೇಳದಲ್ಲಿ ಭಾರತೀಯ ಸಾಂಪ್ರದಾಯಿಕ ಮತ್ತು ಕಲಾತ್ಮಕತೆಯ ಆಧುನಿಕ ವಿನ್ಯಾಸವುಳ್ಳ ವಸ್ತ್ರ ಮತ್ತು ಚಿನ್ನಾಭರಣಗಳು ದೊರೆಯಲಿವೆ. ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ ಡಿಸೈನರ್ ಸ್ಯಾರೀಸ್, ಕಾಂಜೀವರಂ, ಡಿಸೈನರ್ ಸೂಟ್ಸ್, ಪಾಕಿಸ್ತಾನಿ ಸಲ್ವಾರ್ ಕಮೀಜ್, ಡಿಸೈನರ್ ಬ್ಲೌಸಸ್, ಚಿನ್ನ, ಬೆಳ್ಳಿ, ವಜ್ರಾಭರಣ, ಫ್ಯಾಷನ್ ಜ್ಯುವೆಲ್ಲರಿ, ಗುಣಮಟ್ಟದ ಪಾದರಕ್ಷೆಗಳು ಒಂದೇ ಸೂರಿನಡಿ ಗ್ರಾಹಕರಿಗೆ ಕೈಗೆಟುಕಲಿವೆ ಎಂದು ವಿವರಿಸಿದರು. ಸಮಾರಂಭದಲ್ಲಿ ಬೆಂಗಳೂರಿನ ಡ್ರೀಮ್ ಡ್ಯಾನ್ಸರ್ನ ಸಂಯೋಜಕಿ ಮಂಗಳ ರೂಪಿಸಿರುವ ಫ್ಯಾಷನ್ ಮತ್ತು ಡ್ಯಾನ್ಸ್ ಶೋ ನಡೆಯಲಿದೆ. ಸಖಿ ಸಂಸ್ಥೆಯಿಂದ ವಿಶೇಷ ಸೀರೆ ಪ್ರದರ್ಶನ ಖಾರ ಕ್ರಿಯೇಷನ್ಸ್ ವತಿಯಿಂದ ವಿಶೇಷ ಬ್ಲೌಸ್ಗಳ ಪ್ರದರ್ಶನ ನಡೆಯಲಿವೆ ಎಂದು ತಿಳಿಸಿದರು. ನಂತರ ಗೋಷ್ಠಿಯಲ್ಲಿ ಡ್ಯಾನ್ಸ್ ಶೋ ಹಾಗೂ ಫ್ಯಾಷನ್ ಶೋ ನಡೆಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ಕರ್ನಲ್ ಸಂದೀಪ್ ಕುಮಾರ್, ಸಿಇಓ ನಿಧಿಕಾ, ಆನಂದ್ ಪೋಲಾ ಇತರರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

