ಇಂದು ನೀರು ವ್ಯತ್ಯಯ
ಬಳ್ಳಾರಿ: ನಗರದ ಅಲ್ಲೀಪುರ ಕೇಂದ್ರ ಸ್ಥಾವರದಿಂದ ಮದರ್ ಟ್ಯಾಂಕ್ಗೆ ಪೂರೈಕೆ ಮಾಡುತ್ತಿದ್ದ 900 ಎಂ.ಎಂ. ವ್ಯಾಸದ ನೀರಿನ ಪೈಪ್ ಸೋರುತ್ತಿದ್ದು, ನ. 28ರಂದು ಈ ಪೈಪಿನ ದುರಸ್ತಿ ಕಾರ್ಯ ಕೈಗೊಳ್ಳುವ ಹಿನ್ನೆಲೆಯಲ್ಲಿ ನಗರಕ್ಕೆ ನ. 28ರಂದು ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ. ಸಾರ್ವಜನಿಕರು ಜಲ ಮಂಡಳಿ ಮತ್ತು ಪಾಲಿಕೆಯೊಂದಿಗೆ ಸಹಕರಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತ ಚಿಕ್ಕಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಾಳೆ ವೀರಗಾಸೆ
ಬಳ್ಳಾರಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಬಾಲ ಪ್ರತಿಭೆಯನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಚಿಗುರು ಕಾರ್ಯಕ್ರಮ, ಜಾನಪದ ಮತ್ತು ಸಾಂಪ್ರದಾಯಿಕ ಕಲೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹಾಡಿರೆ ರಾಗಗಳ- ತೂಗಿರೆ ದೀಪಗಳ ಎಂಬ ಕಾರ್ಯಕ್ರಮ ನ. 29ರಂದು ನಡೆಯಲಿದ. ಅಂದು ಮಧ್ಯಾಹ್ನ 2 ಗಂಟೆಗೆ ನಗರದ ಬ್ರಿಲಿಯಂಟ್ ಪಬ್ಲಿಕ್ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿದ್ದು, ಭಾಗ್ಯಶ್ರೀ ಹೂಗಾರ್ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಡುವರು. ಮಧ್ಯಾಹ್ನ 3 ಗಂಟೆಗೆ ನಗರದ ವೀ.ವಿ. ಸಂಘದ ಸ್ವಾತಂತ್ರ ಪದವಿಪೂರ್ವ ಕಾಲೇಜಿನಲ್ಲಿ ಹಾಡಿರೆ ರಾಗಗಳ-ತೂಗಿರೆ ದೀಪಗಳ ಎಂಬ ವಿನೂತನ ಕಾರ್ಯಕ್ರಮದಲ್ಲಿ ಎಂ. ನಾಗರಾಜಸ್ವಾಮಿ ಮತ್ತು ತಂಡದವರು ವೀರಗಾಸೆ ಪ್ರದರ್ಶಿಸಲಿದ್ದಾರೆಂದು ಇಲಾಖೆ ಸಹಾಯಕ ನಿರ್ದೇಶಕ ಬಿ. ನಾಗರಾಜ್ ತಿಳಿಸಿದ್ದಾರೆ.
ಅರ್ಜಿ ಆಹ್ವಾನ
ಹೊಸಪೇಟೆ: ಹಂಪಿ ಗ್ರಾಮ ಪಂಚಾಯಿತಿಯ 2013-14ನೇ ಸಾಲಿನ ರಾಜೀವ್ ಗಾಂಧಿ ಚೈತನ್ಯ ಯೋಜನೆಯಡಿ ಗ್ರಾಮೀಣ ಯುವ ಜನರಿಗೆ ಸ್ವ- ಉದ್ಯೋಗ, ವೃತ್ತಿ ಕೌಶಲ್ಯ ಉದ್ಯೋಗ ಒದಗಿಸಲು ಫಲಾನುಭವಿಗಳನ್ನು ಆಯ್ಕೆ ಮಾಡಲು ಹಂಪಿ ಗ್ರಾಮ ಪಂಚಾಯಿತಿಯಿಂದ ಅರ್ಜಿಗಳನ್ನು ಅಹ್ವಾನಿಸಿದೆ. ಹಂಪಿ ಗ್ರಾಮ ಪಂಚಾಯಿತಿ ವ್ಯಾಪ್ತಿಯೊಳಗಿನ ಎಲ್ಲ ಆಸಕ್ತಿಯುಳ್ಳ ಯುವ ಜನರು 28, ನವೆಂಬರ್ 2013ರಿಂದ 5, ಡಿಸೆಂಬರ್, 2013ರೊಳಗೆ ಆರ್ಜಿಗಳನ್ನು ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿ ಸಲ್ಲಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಹಂಪಿ ಗ್ರಾಮ ಪಂಚಾಯಿತಿ ಕಾರ್ಯಲಯದ ಕಚೇರಿ ವೇಳೆಯಲ್ಲಿ ಶೀಘ್ರ ಸಂಪರ್ಕಿಸುವಂತೆ ಹಂಪಿ ಪಿಡಿಒ ತಿಳಿಸಿದ್ದಾರೆ.
ಪದಾಧಿಕಾರಿಗಳ ಆಯ್ಕೆ
ಬಳ್ಳಾರಿ: ಬಿಜೆಪಿ ಜಿಲ್ಲಾ ಹಿಂದುಳಿದ ವರ್ಗಗಳ ಮೋರ್ಚಾ ಕಾರ್ಯಕಾರಿ ಮಂಡಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಟಿ.ಜಿ. ತಿಪ್ಪೇಸ್ವಾಮಿ, ದೇವರಮನೆ ಚಂದ್ರಶೇಖರ, ಸಿದ್ದೇಶ, ಬಿ. ಗೋಪಾಲ, ಕಾರ್ಯದರ್ಶಿಗಳಾಗಿ ಎಚ್. ತಿಪ್ಪಣ್ಣ, ಪಿ. ರಾಜೇಂದ್ರ ಪ್ರಸಾದ, ಭರಮಪ್ಪ, ಕೆ. ಪಂಪನಗೌಡ, ಕೋಶಾಧ್ಯಕ್ಷರಾಗಿ ರಂಜಿತ, ಸದಸ್ಯರಾಗಿ ಬಲರಾಮ ಚೌಧರಿ, ಕಾಳಿಂಗಪ್ಪ, ಕುಬಸದ ರುದ್ರಪ್ಪ, ಬಿ.ಅಳ್ಳಯ್ಯ, ಗೊಲ್ಲರ ಕುಮಾರಸ್ವಾಮಿ, ಶಿವಮೂರ್ತಿ, ಸಿ.ಎನ್. ಸೀತಾರಾಮು, ರವಿಕುಮಾರ ನೇಮಕವಾಗಿದ್ದಾರೆ ಎಂದು ತಿಳಿಸಿದ್ದಾರೆ.
ಸಾಮಾಜಿಕ ಅನಿಷ್ಟ ತೊಡೆಯುವ ಕಾರ್ಯಕ್ರಮ ಹೆಚ್ಚಾಗಲಿ: ತೋಟೇಶ್
ಹಗರಿಬೊಮ್ಮನಹಳ್ಳಿ: ಸಾಮಾಜಿಕ ಅನಿಷ್ಟಗಳನ್ನು ತೊಡೆದು ಹಾಕುವ ಚಿಂತನೆಗೆ ಹಚ್ಚುವ ವೈಜ್ಞಾನಿಕ ಕಾರ್ಯಕ್ರಮಗಳು ಜನಸಮುದಾಯದ ಮಧ್ಯೆ ನಡೆಯುವ ಅಗತ್ಯವಿದೆ ಎಂದು ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ ಹೇಳಿದರು.
ಭಾರತ ಜ್ಞಾನ ವಿಜ್ಞಾನ ಸಮಿತಿ ತಾಲೂಕು ಘಟಕ ತಾಲೂಕಿನ ತಂಬ್ರಹಳ್ಳಿ ಬಳಿಯ ಬಂಡೆರಂಗನಾಥ ಸ್ವಾಮಿ ದೇವಸ್ಥಾನದ ಸಮುದಾಯ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಐಸಾನ್ ಧೂಮಕೇತು ವೀಕ್ಷಣಾ ಕಾರ್ಯಗಾರದಲ್ಲಿ ಮಾತನಾಡಿ, ವಿಜ್ಞಾನ ನಿಂತ ನೀರಲ್ಲ. ಅದು ಬದಲಾಗುತ್ತಲೆ ಇರುತ್ತದೆ. ವಿಜ್ಞಾನದ ಫಲವಾಗಿ ತಂತ್ರಜ್ಞಾನ ಬೆಳೆದು ಅದರ ಅನೂಕೂಲವನ್ನು ಇಂದು ಎಲ್ಲರೂ ಅನುಭವಿಸುತ್ತಿದ್ದೇವೆ ಎಂದರು.
ಬಿಜೆವಿಎಸ್ ಅಧ್ಯಕ್ಷ ಮುಸ್ತಾಕ್ ಅಹ್ಮದ್ ಅಧ್ಯಕ್ಷತೆ ವಹಿಸಿದ್ದರು. ಜಿಪಂ ಉಪಾಧ್ಯಕ್ಷೆ ಮಮತಾ ಸುರೇಶ, ತಾಪಂ ಸದಸ್ಯೆ ಭಾರತಿ ಬೆಲ್ಲದ, ಮಜ್ಗಿ ವೀರೇಶ್, ಕ್ಷೇತ್ರ ಸಮನ್ವಯಾಧಿಕಾರಿ ಡಿ.ಟಿ. ತೇನ್ಸಿಂಗ್ ನಾಯ್ಕ್, ರಾಜ್ಯ ಸಂಪನ್ಮೂಲ ವ್ಯಕ್ತಿ ರವಿಕುಮಾರ್, ವಿಜ್ಞಾನ ಪರಿಷತ್ತಿನ ರಾಜ್ಯ ಸಮಿತಿ ಸದಸ್ಯ ಕೊಟ್ರಸ್ವಾಮಿ, ತಾಲೂಕು ಅಧ್ಯಕ್ಷ ಶಿವತನಯ, ಹೊಸಪೇಟೆ ಉಪ ತಹಸೀಲ್ದಾರ್ ಕೆ.ಎಂ. ಬಸವರಾಜ, ಸಾಹಿತಿ ಪರಮೇಶ್ವರಯ್ಯ ಸೊಪ್ಪಿಮಠ ಭಾಗವಹಿಸಿದ್ದರು.
ಪ್ರಶಾಂತ್ ಪರಿಸರ ಗೀತೆ ಹಾಡಿದರು. ಶಿಕ್ಷಕ ಕೆ. ರಾಮಣ್ಣ ಸ್ವಾಗತಿಸಿದರು. ಪರಮೇಶ್ವರಯ್ಯ ಸೊಪ್ಪಿಮಠ ಧೂಮಕೇತು ಕುರಿತು ಪ್ರಾಸ್ತಾವಿಕ ಮಾತನಾಡಿದರು. ಶಿಕ್ಷಕ ಆರ್.ಬಿ. ಗುರುಬಸವರಾಜ ನಿರೂಪಿಸಿದರು. ಶಿಕ್ಷಕ ಗೋಣಿಬಸಪ್ಪ ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

